ಚಿಕ್ಕಮಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಹಲವು ಬದಲಾವಣೆಗಳು ಆಗುತ್ತಲೇ ಇದ್ದು, ಮಂಡ್ಯದಲ್ಲಿ ಜೆಡಿಎಸ್‌ನಿಂದ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಒಂದು ವೇಳೆ ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧಿಸಿದರೆ, ಅವರ ವಿರುದ್ಧ ಸುಮಲತಾ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಕೂಗು ಎದ್ದಿದೆ.
ಇದಕ್ಕೆ ಕಡೂರಿ ನಲ್ಲಿ ಪ್ರತಿಕ್ರಿಯಿಸಿದ ಎಚ್.ಡಿ.ರೇವಣ್ಣ, ಅವರ ಬಗ್ಗೆ ಗೊತ್ತಿ ಲ್ಲ ಸರ್, ಅವರೆಲ್ಲಾ ದೊಡ್ಡವರಿದ್ದಾರೆ ಎಂದು ಕುಹಕ ವಾಡಿದ್ದಾರೆ. ಮಂಡ್ಯ ಜನ ಯಾ ವತ್ತೂ ದೇವೇ ಗೌಡರು, ಕುಮಾರಣ್ಣನನ್ನು ಬಿಟ್ಟುಕೊಟ್ಟಿಲ್ಲ. ಇನ್ನು ಸುಮಲತಾ ಅವರ ಮಟ್ಟಕ್ಕೆ ನಾನು ಬೆಳೆದಿಲ್ಲ ಸರ್, ಅಂತಹ ದೊಡ್ಡವರ ಬಗ್ಗೆ ಮಾತನಾಡಲು ನನಗೆ ಶಕ್ತಿ ಇಲ್ಲ. ನಮ್ಮ ಲೆವೆಲ್ ಏನಿದ್ದರೂ ಇಲ್ಲೆ ಎಂದು ದತ್ತ ನಾಮಪತ್ರ ಸಲ್ಲಿಕೆ ವೇಳೆ ಹೇಳಿಕೆ ನೀಡಿದರು.
ಇನ್ನು ಭವಾನಿ ರೇವಣ್ಣಗೆ ಟಿಕೆಟ್ ತಪ್ಪಿದ ವಿಚಾರವಾಗಿ ಮಾತನಾಡಿದ ಅವರು, ಭವಾನಿ ಅವರು ಮೂರು ವರ್ಷದಿಂದ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಜಿಲ್ಲಾ ಪಂಚಾಯತ್‌ನಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಅಲ್ಲದೆ ಹಾಸನ ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು ಅವರ ಕಾಲದಲ್ಲೇ. ಮತ್ತು ಅವರು ಹಾಸನದ ಒಡನಾಡಿ ಆಗಿದ್ದರು. ಆದರೆ ಈಗ ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು. ನಮಗೆ ದೇವೇಗೌಡರು, ಪಕ್ಷವೂ ಅಷ್ಟೆ ಮುಖ್ಯವಾಗಿದೆ.
ಕೊಟ್ಟ ಮಾತನ್ನು ಉಳಿಸಿಕೊಳ್ಳುವ ರಾಜ್ಯದ ಏಕೈಕ ವ್ಯಕ್ತಿ ಎಂದರೆ ಅದು ಕುಮಾರಸ್ವಾಮಿ. ಅವರು ಸಿಎಂ ಆದ ವೇಳೆ ಮೆಜಾರಿಟಿ ಇಲ್ಲ, ಸಾಲ ಮನ್ನಾ ಮಾಡುವುದು ಬೇಡ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ೩೮ ಸ್ಥಾನ ಬಂದರೂ ಕೂಡ ೨೫ ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದರು ಎಂದು ಮನವರಿಕೆ ಮಾಡಿದರು.