ಶಿವಮೊಗ್ಗ: ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಣಗೆರೆ ಗ್ರಾಮದ ವಾಸಿಯೊಬ್ಬರು ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಪುರದಾಳಿಗೆ ಹೋಗಿದ್ದಾಗ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳಗೆ ಹೋಗಿ ಬೀರುವಿನಲ್ಲಿದ್ದ ನಗದು ಹಣ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ:0085/2021 ಕಲಂ 457,380 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆ ಕೈಗೊಂಡ ಸಿಪಿಐ, ಪಿಎಸ್ಐ ಮಾಳೂರು ಮತ್ತು ಸಿಬ್ಬಂದಿಗಳ ತಂಡವು ದಿನಾಂಕ: 26-11-2021 ರಂದು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ತಿಮ್ಮಣ್ಣ, 61 ವರ್ಷ, ಕಡೂರು, ಅಪ್ಸರ, 38 ವರ್ಷ, ರಾಮನಗರ, ಸಾಗರ ನರಸಿಂಹ, 45 ವರ್ಷ, ಬೊಮ್ಮನಕಟ್ಟೆ, ಶಿವಮೊಗ್ಗ,ಕಿರಣ್,26 ವರ್ಷ ಬೊಮ್ಮನಕಟ್ಟೆ, ಶಿವಮೊಗ್ಗ ಸತ್ತಾರ್, 50 ವರ್ಷ, ನ್ಯೂ ಮಂಡ್ಲಿ, ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿ ಆರೋಪಿತ ರಿಂದ ಅಂದಾಜು ಮೌಲ್ಯ 8,17,000/- ರೂಗಳ 200 ಗ್ರಾಂ ಬಂಗಾರದ & 40 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ.