News Kannada
Friday, December 02 2022

ಶಿವಮೊಗ್ಗ

ಮಾರಿ ಜಾತ್ರೆಯಲ್ಲಿ ಹಿಂದೂಗಳಿಗಷ್ಟೆ ಸ್ಟಾಲ್​ !

Photo Credit :

ಶಿವಮೊಗ್ಗ :  ಸಮಿತಿ-ಸಂಘಟನೆ ಸಭೆಯಲ್ಲಿ ಜೈ ಶ್ರೀರಾಮ್​- ಜೈಮಾರಮ್ಮ ಘೋಷಣೆ ! ಅಂತಿಮವಾಗಿ ಏನಾಯ್ತು ಇಲ್ಲಿದೆ ಡಿಟೇಲ್ಸ್​. ಶಿವಮೊಗ್ಗದ ಕೋಟೆ ಮಾರಿಕಾಂಬ ಜಾತ್ರೆಯ ಅಂಗವಾಗಿ ಗದ್ದುಗೆ ಸಮೀಪ ಸ್ಟಾಲ್​ಗಳನ್ನು ಹಾಕಲು, ಗುತ್ತಿಗೆ ನೀಡಲಾಗುತ್ತೆ.

ಒಟ್ಟಾರೆ ಗುತ್ತಿಗೆ ಪಡೆಯುವವ ಸ್ಟಾಲ್​ಗಳನ್ನ ವಿತರಿಸುತ್ತಾನೆ. ಈ ಸಲ ಜಾತ್ರೆಯಲ್ಲಿ ಸ್ಟಾಲ್​ಗಳನ್ನು ಹಿಂದೂಗಳಿಗಷ್ಟೆ ನೀಡಲೇಬೇಕು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದ್ದವು.

ಈ ನಡುವೆ, ಹಿಂದೂ ಸಂಘಟನೆಗಳ ಒತ್ತಾಯದ ಬೆನ್ನಲ್ಲೆ ಸ್ಟಾಲ್​ಗಳನ್ನುಗುತ್ತಿಗೆ ಹಿಡಿದಿದ್ದ ವ್ಯಕ್ತಿ ಚಿನ್ನಪ್ಪ ಎಂಬವರು, ತಾನು ಇಲ್ಲಿ ಭಿನ್ನಾಭಿಪ್ರಾಯಗಳ ನಡುವೆ ಗುತ್ತಿಗೆ ಹಿಡಿಯಲು ಸಾಧ್ಯವಿಲ್ಲ ಎಂದು ಟೆಂಡರ್​ನಿಂದ ಹಿಂದಕ್ಕೆ ಸರಿದಿದ್ದರು.

ಈ ಹಿನ್ನೆಲೆಯಲ್ಲಿ ಇವತ್ತು ಹಿಂದೂಪರ ಸಂಘಟನೆಗಳ ಜೊತೆಗೆ ಮಾರಿಕಾಂಬಾ ಸೇವಾ ಸಮಿತಿ ಸದಸ್ಯರು ಸಭೆ ನಡೆಸಿದ್ರು.

ಈ ಸಭೆಯಲ್ಲಿ ಮಾರಿಕಾಂಬಾ ಜಾತ್ರೆ ಭಾವೈಕತ್ಯೆ ಉತ್ಸವವಾಗಿದ್ದು, ಈಗ ಅವರಿಗೆ ಕೊಡಬೇಡಿ, ಇವರಿಗೆ ಕೊಡಬೇಡಿ ಎಂದರೆ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯ್ತು.

ಇದಕ್ಕೆ ಪ್ರತಿಯಾಗಿ ಹಿಂದೂ ಸಂಘಟನೆಗಳು, ಜಾತ್ರೆಯಲ್ಲಿ ಸ್ಟಾಲ್​ಗಳು ಇರಬೇಕು, ಹಿಂದೂಗಳಿಂದಲೇ ನಡೆಯಬೇಕು, ಹಿಂದೂಗಳನ್ನು ಹೊರತುಪಡಿಸಿ ಬೇರೆಯವರಿಗೆ ಅವಕಾಶ ನೀಡಿದರೇ, ಇವತ್ತಿನ ವಾತಾವರಣದಲ್ಲಿ ಹಿಂದೂಗಳಿಗೆ ಅಪಮಾನವಾಗಲಿದೆ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದವು.

ಹಿಂದೂ ಪರ ಮುಖಂಡ ಧಿನ್​ ದಯಾಳ್​, ಅರ್ಧದಷ್ಟು ಸ್ಟಾಲ್​ಗಳನ್ನ ಹಿಡಿಯಲು ಸಿದ್ಧ ಎಂದರೆ, ಬಿಜೆಪಿಯ ಚೆನ್ನಬಸಪ್ಪ ಮಾರಿಹಬ್ಬಕ್ಕೆ ಹಣದ ಕೊರತೆಯಾದರೆ ಹಿಂದೂ ಸಮಾಜ ಹಣ ಸಂಗ್ರಹಿಸಿ ನೀಡುತ್ತಿದ್ದೇವೆ ಎಂದರು.

ಇದಕ್ಕೆ ಮಾರಿಕಾಂಬಾ ಸೇವಾ ಸಮಿತಿ ಆಕ್ಷೇಪಿಸಿದ್ದಷ್ಟೆ ಅಲ್ಲದೆ ಹರಾಜಿನಿಂದಲೇ ಹಣ ಸಂಗ್ರಹವಾಗಬೇಕು, ಸಂಗ್ರಹಿಸುವ ಹಣ ಜಾತ್ರೆಗೆ ಬೇಡ ಎಂದಿತು. ಅಲ್ಲದೆ 9 ಲಕ್ಷದ ಮೇಲೆ ಸಾವಿರದೊಂದು ರೂಪಾಯಿಯನ್ನು ಯಾರೇ ಕಟ್ಟಿದರೂ ಟೆಂಡರ್ ಬಿಟ್ಟುಕೊಡಲಾಗುವುದು ಎಂದು ಸಮಿತಿ ಸದಸ್ಯರು ತಿಳಿಸಿದ್ರು. ಇದರ ಬೆನ್ನಲ್ಲೆ ಹಿಂದೂ ಸಂಘಟನೆಗಳು ಟೆಂಡರ್ ಮೊತ್ತವನ್ನು ಕೊಡುವುದಾಗಿ ಘೋಷಿಸಿದವು.

ಹೀಗೆ ವಿಚಾರ ತಾರ್ಕಿಕನ ಘಟ್ಟ ತಲುಪುತ್ತಲೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೈಶ್ರೀರಾಮ್​ ಘೋಷಣೆ ಕೂಗಿದ್ರು. ಈ ವೇಳೆ ಮಾರಿಕಾಂಬ ಸಮಿತಿ ಅಧ್ಯಕ್ಷ ಮರಿಯಪ್ಪರವರು ಜೈಮಾರಮ್ಮ ಎಂದು ಘೋಷಣೆ ಕೂಗಿದರು, ಯಾವಾಗ ಜೈ ಮಾರಮ್ಮ ಎಂಬ ಘೋಷಣೆ ಹೊರಬೀಳುತ್ತಲೇ ಎಲ್ಲರೂ ಜೈ ಮಾರಮ್ಮ, ಯಲ್ಲಮ್ಮ ಉದೋ ಉದೋ ಎಂಬ ಘೋಷಣೆಗಳನ್ನು ಕೂಗಲಾಯ್ತು.

See also  ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ; ಸಿದ್ಧರಾಮಯ್ಯ ಟೀಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು