ಶಿವಮೊಗ್ಗ: ಅನಾರೋಗ್ಯದ ಹಿನ್ನಲೆಯಲ್ಲಿ ಮೆಗ್ಗಾನ್ ಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 108 ಕ್ಕೆ ಏರಿದೆ. ಇಂದು ಮಕ್ಕಳ ಆರೋಗ್ಯದ ಬಗ್ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮೆಗ್ಗಾನ್ ಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.
ವಿಷಯುಕ್ತ ಆಹಾರ ಪದಾರ್ಥ ಸೇವನೆಯಿಂದಾಗಿ ಮಕ್ಕಳು ಅಸ್ವಸ್ಥರಾಗಿರುವುದಾಗಿ ತಿಳಿದು ಬಂದಿರುವುದಾಗಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾಧ್ಯಮಗಳಿಗೆ ತಿಳಿಸಿದ್ದು ಈ ರೀತಿಯ ಅನಾರೋಗ್ಯದ ಕಾರಣ ಇನ್ಬೂ ತಿಳಿದು ಬರಬೇಕಿದೆ. ಈಗಾಗಲೇ ಚಿಕಿತ್ಸೆ ನೀಡಲಾಗಿದ್ದು 24 ಗಂಟೆ ವರೆಗೆ ಅವರನ್ನ ನಿಗಾದಲ್ಲಿ ಇರಿಸಲಾಗಿದೆ. ಸಧ್ಯಕ್ಕೆ ಯಾವುದೇ ಅಪಾಯವಿಲ್ಲವೆಂದಿದ್ದಾರೆ.
ಆದರೆ ನಿನ್ಬೆಯ ವರೆಗೆ ಮೇಲಿನ ಹನಸವಾಡಿ ವಸತಿ ಶಾಲೆಯ ಮಕ್ಕಳು ಮಾತ್ರ ದಾಖಲಾಗಿದ್ದರು. ಆದರೆ ಬಾಪೂಜಿ ನಗರದ ಬಾಲಕಿಯರ ಹಾಸ್ಟೆಲ್ ವಿದ್ಯಾರ್ಥಿನಿಯರು ಬಂದು ದಾಖಲಾಗಿದ್ದಾರೆ. ಅದರಂತೆ ಖಾಸಗಿ ಶಾಲೆಯ ಮಕ್ಕಳು ಸಹ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಶೆ ಪಡೆದು ದಾಖಲಾಗಿದ್ದಾರೆ.
ಈ ಎಲ್ಲಾ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬರಬೇಕಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರೆ ಹಲವಾರು ಪೋಷಕರು ಬೇರೆ ಕಾರಣವನ್ನೇ ನೀಡುತ್ತಿದ್ದಾರೆ