News Kannada
Sunday, January 29 2023

ಶಿವಮೊಗ್ಗ

ಶಿವಮೊಗ್ಗ: ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳನ್ನು ಜೊತೆಗೆ ಕೊಂಡೊಯ್ಯಲು ಮೋದಿ ಸಲಹೆ

PM Modi suggests taking minority Muslim relatives with him
Photo Credit : By Author

ಶಿವಮೊಗ್ಗ: ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಉತ್ತಮವಾಗಿ ನಡೆದಿದ್ದು, ದೇಶದ ಹಾಗೂ ರಾಜ್ಯಗಳ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಾಧ್ಯಮಗಳಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಬೇಕಾದ ತಂತ್ರಗಾರಿಕೆಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಮೋದಿಯವರು ಸುಮಾರು ಒಂದೂವರೆ ಗಂಟೆಗಳ ಕಾಲ ಮಾರ್ಗದರ್ಶನ ಮಾಡಿದ್ದಾರೆ ಎಂದರು.

ಬಹಳ ಉತ್ಸಾಹದಿಂದ ವಾಪಸ್ ಬಂದಿದ್ದೇವೆ. ಪಕ್ಷವನ್ನು ಬಲಪಡಿಸಿ, ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರಲೇ ಬೇಕೆಂಬ ಹಂಬಲಹೊಂದಿದ್ದೇವೆ. ಆ ನಿಟ್ಟಿನಲ್ಲಿ ಕೆಲಸಗಳಾಗುತ್ತಿವೆ ಎಂದರು.

ಮೋದಿ, ಅಮಿತ್ ಶಾ, ನಡ್ಡಾ ಅವರು ಹೆಚ್ಚು ಸಮಯ ರಾಜ್ಯಕ್ಕೆ ಕೊಡಲಿದ್ದಾರೆ. ಅದರ ಬಳಕೆ ಮಾಡಿಕೊಂಡು, 140 ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಕಾರ್ಯಪ್ರವೃತ್ತರಾಗುತ್ತೇವೆ ಎಂದರು.

ಶಾಸಕರು, ಕಾರ್ಯಕರ್ತರು ಹೆಚ್ಚು ಕೆಲಸ ಮಾಡಬೇಕು.. ಎಲ್ಲರಲ್ಲೂ ವಿಶ್ವಾಸ ಮೂಡಿಸಬೇಕು..ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳನ್ನು ಜೊತೆಗೆ ಕೊಂಡೊಯ್ಯಲು ಸಲಹೆ ನೀಡಿದ್ದಾರೆ. ಈಗಾಗಲೇ ನಾವು ಅವರ ಜೊತೆ ಚೆನ್ನಾಗಿ ಇದ್ದೇವೆ. ನಮ್ಮ ಬಗ್ಗೆ ಗೌರವ, ವಿಶ್ವಾಸ ಇದೆ ಎಂದರು.

ಬರುವ ದಿನ ಇನ್ನಷ್ಟು ಸಂಪರ್ಕ ಮಾಡಲು ಪ್ರಧಾನಿ ಅಪೇಕ್ಷೆಯಂತೆ ಕೆಲಸ ಮಾಡ್ತೇವೆ. ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆಗೆ ಪ್ರಧಾನಿ ಸಮಯ ಕೊಡ್ತಾರೆ‌. ನಾಲ್ಕೈದು ದಿನದಲ್ಲಿ ದಿನಾಂಕ ನಿಗಧಿಯಾಗಲಿದೆ ಎಂದಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ ಎಂದು ಬಿಎಸ್ ವೈ ಸ್ಪಷ್ಟಪಡಿಸಿದ್ದಾರೆ.

See also  ಶಿವಮೊಗ್ಗ ನಗರದ ಈದ್ಗಾ ಮೈದಾನದಲ್ಲಿ ಇಂದು ಸುನ್ನಿ ಜಾಮಿಯಾತುಲ್ ಉಲೇಮಾ ಕಮಿಟಿ" ವತಿಯಿಂದ ಬೃಹತ್ ಸಮಾವೇಶ 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು