ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಂದರ್ಭ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಶ್ವವೇ ಮೆಚ್ಚಿರುವ ಆದರ್ಶ ನಾಯಕ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸುತ್ತಿರುವುದು ನಮ್ಮ ಸುದೈವ. ನಿಮ್ಮ ಹುಟ್ಟುಹುಬ್ಬದಂದು ನಿಲ್ದಾಣ ನಾನೇ ಉದ್ಘಾಟಿಸುತ್ತೇನೆ ಎಂದು ಎಂದು ಪ್ರಧಾನಿ ತಿಳಿಸಿದ್ದರು.
ಅದರಂತೆ ವಿಮಾನ ಪ್ರಧಾನಿ ನಿಲ್ದಾಣ ಉದ್ಘಾಟಿಸಿರುವುದು ಸಾರ್ಥಕತೆಯ ಕ್ಷಣ. ಇದು ಬರೀ ವಿಮಾನ ನಿಲ್ದಾಣವಲ್ಲ ಜನರ ಕನಸು, ಆಶೋತ್ತರಗಳನ್ನು ಮತ್ತಷ್ಟು ಎತ್ತರಕ್ಕೇರಿಸಲಿದೆ. ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಕೊಡುಗೆ ಶ್ಲಾಘನೀಯ ಎಂದರು.
2014 ರಲ್ಲಿ ನರೇಂದ್ರ ಮೋದಿ ಒತ್ತಾಸೆಯಿಂದ ಸಂಸತ್ ಸ್ಥಾನಕ್ಕೆ ಚುನಾವಣೆಯಲ್ಲಿ ನಿಂತು 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿರುವುದು ಇತಿಹಾಸ. 40 ವರ್ಷಗಳ ರಾಜಕೀಯದಲ್ಲಿ ಕೇವಲ 7 ವರ್ಷ ಅಧಿಕಾರಿಯಾಗಿದ್ದೆ, ಆದರೆ ಆ ವೇಳೆ ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಶ್ರಮಿಸಿದ ಸಂತೃಪ್ತಿಯಿದೆ ಎಂದರು.