ಮೈಸೂರು: ಮಹಾರಾಣಿ ಪ್ರಮೋದದೇವಿ ಒಡೆಯರ್ ಹಾಗೂ ಜಿಲ್ಲಾಧಿಕಾರಿ ಸಿ.ಶಿಖಾ ಅವರ ನಡುವಿನ ಮುಸುಕಿನ ಗುದ್ದಾಟದಿಂದ ಅಪರೂಪದ ಚಿನ್ನದ ಸಿಂಹಾಸನವನ್ನು ವೀಕ್ಷಿಸುವ ಭಾಗ್ಯ ಪ್ರವಾಸಿಗರಿಗೆ ಇಲ್ಲದಂತಾಯಿತು.
ಅರಮನೆಯ ಆಡಳಿತ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಸಿ.ಶಿಖಾ ಹಾಗೂ ರಾಜಮಾತೆ ಪ್ರಮೋದದೇವಿ ಒಡೆಯರ್ ಅವರಿಗೂ ಮುಸುಕಿನ ಗುದ್ಧಾಟ ಆರಂಭಗೊಂಡಿದ್ದು ದಸರೆಯ ಅಂಬಾರಿ ವಿಚಾರದಲ್ಲಿ. ಪ್ರತಿವರ್ಷ ಕೋಟ್ಯಾಂತರ ರೂ ಬೆಲೆ ಬಾಳುವ ಅಂಬಾರಿಗೆ ಜಂಬೂ ಸವಾರಿಗೆ ಹಿಂದಿನ ದಿನಗಳಲ್ಲಿ ವಿಮೆ ಮಾಡಿಸುವುದು ಪದ್ಧತಿ. ವಿಮೆಯು ಸಹ ರಾಜವಂಶಸ್ಥರ ಹೆಸರನಲ್ಲಿ ಮಾಡಿಸುವುದು ರೂಢಿಯಲ್ಲಿದೆ. ಆದರೆ ಈ 2015 ರ ದಸರೆಯಲ್ಲಿ ಜಿಲ್ಲಾಧಿಕಾರಿ ಸಿ. ಶಿಖಾ ಅವರು ದಸರಾ ಸಮಿತಿಯ ಹೆಸರಿನಲ್ಲಿ ಅಂಬಾರಿ ವಿಮೆ ಮಾಡಿಸುವ ಮೂಲಕ ಮಹಾರಾಣಿಯವರ ಕೋಪಕ್ಕೆ ಗುರಿಯಾದರು.
ಶ್ವ ವಿಖ್ಯಾತ ದಸರಾ ಜಂಬೂ ಸವಾರಿ ದಿನವೂ ಸಹ ಮಹಾರಾಣಿ ಹಾಗೂ ಜಿಲ್ಲಾಧಿಕಾರಿಗಳ ನಡುವೆ ಮುಸುಕಿನ ಗದ್ಧಾಟ ನಡೆಸಿರುವ ಸತ್ಯ ತಿಳಿದುಬಂದಿದ್ದು. ವಿಮೆಯನ್ನು ದಸರೆಯ ಸಮಿತಿಯ ಹೆಸರಿನಲ್ಲಿ ಮಾಡಿಸಿದ ಹಿನ್ನಲೆಯಲ್ಲಿ ಅಂಬಾರಿ ಕೊಡಲು ರಾಜಮಾತೆ ಪ್ರಮೋದದೇವಿ ಒಡೆಯರ್ ಒಪ್ಪಿರಲಿಲ್ಲ. ಕೊನೆಗೆ ಜಿಲ್ಲಾಡಳಿತದ ಪರವಾಗಿ ನೂತನ ನಿರ್ದೇಶಕಿ ಇಂದ್ರಮ್ಮ ಹಾಗೂ ಜಂಬೂ ಸವಾರಿ ಸಮಿತಿ ನೇತೃತ್ವ ವಹಿಸಿದ್ದ ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ಅವರು ಸತಾಯಿಸುತ್ತಿದ್ದ ಮಹಾರಾಣಿಯವರ ಮನವೊಲಿಸಿ ಮೂರು ತಾಸು ವಿಳಂಬವಾಗಿ ಅಂಬಾರಿ ಪಡೆದು ಜಂಬೂ ಸವಾರಿ ನೇರವೇರಿಸಿ ನಿಟ್ಟುಸಿರು ಬಿಟ್ಟರು.
ಆದರೆ ರಾಜಮಾತೆ ಪ್ರಮೋದದೇವಿ ಒಡೆಯರ್ ಅವರ ಕೋಪ ಇನ್ನೂ ಮುಂದುವರೆದಿದ್ದು ಅವರ ಒಡೆತನದಲ್ಲಿರುವ ಖಾಸಗಿ ದರ್ಬಾರ್ ನ ಪ್ರಮುಖ ಆರ್ಕಷಣೆಯಾಗಿರುವ ಚಿನ್ನ ಖಚಿತ ಕೋಟ್ಯಾಂತರ ರೂ ಬೆಲೆ ಬಾಳು ಐತಿಹಾಸಿಕ ಸಿಂಹಾಸನವನ್ನು ಬಂದ್ ಮಾಡಿಸಿದ್ದಾರೆ.
ವರ್ಷದಲ್ಲಿ ನವರಾತ್ರಿ ಸಂಧರ್ಭದಲ್ಲಿ ಮಾತ್ರ ಪ್ರವಾಸಿಗರಿಗೆ ಕಾಣ ಸಿಗುವ ಐತಿಹಾಸಿಕ ಸಿಂಹಾಸನ ನವರಾತ್ರಿ ಜಂಬೂ ಸವಾರಿ ಮುಗಿ 30 ದಿನಗಳ ವೆರೆಗೂ ವೀಕ್ಷಣೆಗೆ ಲಭ್ಯವಿರುವುದು ಹಿಂದಿನಿಂದ ನಡೆದುಬಂದ ಸಂಪ್ರದಾಯ. ಅಲ್ಲದೆ ಇದೇ ಸಂಧರ್ಭದಲ್ಲಿ ಚಿನ್ನದ ಅಂಬಾರಿ ನೋಡಲೆಂದೆ ಲಕ್ಷಕ್ಕೆ ಹೆಚ್ಚು ಮಂದಿ ಪ್ರವಾಸಿಗರು ಈ ವೇಳೆಯಲ್ಲೇ ದೇಶ ವಿದೇಶಗಳಿಂದ ಆಗಮಿಸುವುದು ವಿಶೇಷ. ಆದರೆ ಈ ಬಾರಿ ಆಗಮಿಸುತ್ತಿರುವ ಪ್ರವಾಸಿಗರಿಗೆಲ್ಲಾ ನಿರಾಸೆಯೂಂಟಾಗಿದ್ದು ಕಾರಣ ಮಹಾರಾಣಿ ಪ್ರಮೋದದೇವಿ ಒಡೆಯರ್ ಅವರು ಜಂಬೂ ಸವಾರಿ ಮುಗಿದ ಮೇಲೆ ಚಿನ್ನ ಸಿಂಹಾಸನವನ್ನು ಬಟ್ಟೆ ಮುಚ್ಚಿ ಬಂದ್ ಮಾಡಿ, ಪ್ರವಾಸಿಗರ ವೀಕ್ಷಣೆಗೆ ಅದು ಸಿಗದಂತೆ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಮೇಲಿನ ಸಿಟ್ಟಿನಿಂದ ಚಿನ್ನದ ಸಿಂಹಾಸನವನ್ನು ಬಂದ್ ಮಾಡಿರುವ ರಾಜಮಾತೆಯವರ ನಿಲುವಿನಿಂದ ಅರಮನೆಯ ಪ್ರವಾಸಿಗರಿಗೆ ಆಗುತ್ತಿರುವ ಬೇಸರದ ಹಿನ್ನಲೆಯಲ್ಲಿ ಸಿಂಹಾಸನವನ್ನು ನವೆಂಬರ್ 6 ರವರೆಗೂ ತೆಗೆಯಲು ಅನುಮತಿ ನೀಡುವಂತೆ ಅರಮನೆಯ ಆಡಳಿತ ಮಂಡಳಿ ಪತ್ರ ಬರೆಯಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ನಿರ್ದೇಶಕಿ ಇಂದಿರಮ್ಮ ತಿಳಿಸಿದ್ದಾರೆ. ಆದರೆ ಪತ್ರಕ್ಕೆ ಖ್ಯಾರೆ ಎನ್ನದ ರಾಜಮಾತೆಯವರು ಸಿಟ್ಟಿನಲ್ಲಿ ಮುಂದುವರೆಯುತ್ತಿರುವುದು ಈ ಬಾರಿ ಅಪರೂಪದ ಚಿನ್ನದ ಐತಿಹಾಸಿಕ ಸಿಂಹಾಸನ ವೀಕ್ಷಣೆಯ ಭಾಗ್ಯಕ್ಕೆ ಕತ್ತರಿ ಬಿದ್ದಿರುವುದು ವಿಷಾದನೀಯ ಬೆಳವಣೆಗೆಯಾಗಿದೆ ಎನ್ನುತ್ತಾರೆ ಅರಮನೆ ಆಪ್ತರೊಬ್ಬರು.