ಮೈಸೂರು: ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಮೈಸೂರು ಮ್ಯಾರಾಥಾನ್-2015 ನ ಅಭ್ಯರ್ಥಿಯಾಗಿ ನೊಂದಣಿಯಾಗುವುದರ ಮೂಲಕ ಮೈಸೂರು ಮ್ಯಾರಥಾನ್ ಗೆ ನೊಂದಣಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಇತ್ತಿಚೆಗೆ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಜಾಗೃತಿ ಮೂಡುತ್ತಿದ್ದು ಈ ಹಿನ್ನಲೆಯಲ್ಲಿ ಇಂದು ಮ್ಯಾರಾಥಾನ್ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುತ್ತಿರುವುದು ಸಂತಸ ಸಂಗತಿಯಾಗಿದೆ ಎಂದರು.
ಮೈಸೂರು ಮ್ಯಾರಾಥಾನ್ ನಲ್ಲಿ ಮೊದಲ ನೊಂದಾಯಿಸಿಕೊಂಡಿರುವ ನನಗೆ ತುಂಬಾ ಸಂತೋಷವಾಗಿದ್ದು, ವೈಯುಕ್ತಿಕವಾಗಿ ಮೈಸೂರು ಮ್ಯಾರಾಥನ್ ಗೆ ಧನ್ಯವಾದಗಳು ಎಂದರು. ಡಿಸೆಂಬರ್ 20 ರಂದು ಮೈಸೂರಿನ ಎಸ್ ಜೆಸಿಇ ಕಾಲೇಜು ಆವರಣದಲ್ಲಿ ಸಮಯ ಬೆಳ್ಳಗ್ಗೆ 6 ರಿಂದ 12 ಗಂಟೆ ವರೆಗೆ ಐದು ಹಂತಗಳಲ್ಲಿ ಮ್ಯಾರಧಾನ್ ನಡೆಯಲಿದೆ.
ಈ ಮ್ಯಾರಥಾನ್ ನಲ್ಲಿ ದೇಶ ವಿದೇಶಗಳಿಂದ ಸುಮಾರು 5 ಸಾವಿರ ಸ್ಪರ್ಧಿಗಳು ಪಾಲ್ಗೊಳ್ಳುವ ಸಾಧ್ಯತೆಯಿದ್ದು, ಭಾಗವಹಿಸುವ ಎಲ್ಲರಿಗೂ ಪದಕ ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತರು ಡಿಸೆಂಬರ್ 6 ರಿಂದ ಆನ್ಲೈನ್ ಮೂಲಕ ವೆಬ್ಸೈಟ್ www.mysurumarathon.com ನೊಂದಾಯಿಸಿಕೊಳ್ಳಬಹುದಾಗಿದೆ.
ಈ ಮೈಸೂರು ಮ್ಯಾರಥಾನ್ ಕಾರ್ಯಕ್ರಮದ ಆಯೋಜಕರಾದ ಯೆಲ್ಲೊ ಅಂಡ್ ರೆಡ್ ಸರ್ವಿಸ್ ಪ್ರೈ. ಲಿಮಿಟೆಡ್ ಆಗಿದ್ದು ಮೈಸೂರಿನ ರೆಡ್ ಎಫ್ಎಂ 93.5 ಸಹಯೋಗದೊಂದಿಗೆ ನಡೆಯಲಿದ್ದು, ಇದರ ಆನ್ಲೈನ್ ಪಾರ್ಟನರ್ ಆಗಿ ನ್ಯೂಸ್ ಕರ್ಬಾಟಕ ಡಾಟ್ ಕಾಮ್, ಒನ್ ಪಾಯಿಂಟ್ ಸಲ್ಯೂಷನ್ ವಿಡ್ಟಕಾಮ್, ಅಡ್ಲಿ ಕ್ರಿಯೇಟಿವ್ಸ್, ಮಧುಬನ್ ಗ್ರಾಫಿಕ್ಸ್- ಮಂಗಳೂರು, ಪ್ರೋಮೊಗ್ರೇನೆಟ್ ಕಮ್ಯೂನಿಕೇಶನ್- ಮಂಗಳೂರು ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.