ಮೈಸೂರು: ಸಾಮಾನ್ಯವಾಗಿ ಅಲ್ಲಲ್ಲಿ ಹಸುಗಳು ಅವಳಿ ಕರುಗಳಿಗೆ ಜನ್ಮ ನಿಡುವುದು ಕಂಡುಬರುತ್ತದೆ. ಆದರೆ ನುಹುಣಸೂರು ತಾಲೂಕಿನ ಶೀರೇನಹಳ್ಳಿ ಗ್ರಾಮದಲ್ಲಿ ಹೆಚ್ಎಫ್ ತಳಿಯ ಹಸುವೊಂದು ತ್ರಿವಳಿ ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.
ಶೀರೇನಹಳ್ಳಿ ಗ್ರಾಮದ ರೈತ ದೊಡ್ಡಸ್ವಾಮಿಗೌಡರ ಪುತ್ರ ನಳರಾಜ್ ಎಂಬುವರು ಸಾಕಿದ ಹಸು ತ್ರಿವಳಿ ಕರುಗಳಿಗೆ ಜನ್ಮ ನೀಡಿದ್ದರಿಂದ ಸುತ್ತಮುತ್ತಲಿನ ಜನ ಅಚ್ಚರಿಯಿಂದ ಕರುವನ್ನು ನೋಡಲು ಬರುತ್ತಿದ್ದಾರೆ. ಪಕ್ಕದ ಹಿರೀಕ್ಯಾತನಹಳ್ಳಿ ಪಶು ಆರೋಗ್ಯ ಕೇಂದ್ರದ ವೈದ್ಯರಾದ ಮಹೇಶ್ ಹಸು ಹಾಗೂ ಕರುಗಳನ್ನು ಪರೀಕ್ಷಿಸಿ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.
ಎಲ್ಲರಿಗೂ ಸಂತಸ ಅಚ್ಚರಿಯಾದರೆ ಹಸುವಿನ ಮಾಲೀಕ ನಳರಾಜ್ ಅವರಿಗೆ ಮೂರು ಕರುಗಳನ್ನು ಸಾಕುವ ಜವಾಬ್ದಾರಿ ಹೆಗಲಿಗೇರಿದೆ. ಈ ಕರುಗಳು ಆರೋಗ್ಯವಾಗಿ ಬೆಳೆಯಬೇಕಾದರೆ ಹಾಲನ್ನು ನೀಡಲೇ ಬೇಕು. ಅವುಗಳಿಗೆ ನೀಡಿ ಉಳಿದ ಹಾಲನ್ನಷ್ಟೆ ಉಪಯೋಗಿಸುವುದು ಅನಿವಾರ್ಯವಾಗಿದೆ.