News Kannada
Friday, July 01 2022

ಮೈಸೂರು

ಕೇಶಮುಂಡನ ಮಾಡಿಸಿ ತಂದೆಯ ಅಂತಿಮ ಕ್ರಿಯೆ ನೆರವೇರಿಸಿದ ಮಗಳು - 1 min read

Photo Credit :

ಕೇಶಮುಂಡನ ಮಾಡಿಸಿ ತಂದೆಯ ಅಂತಿಮ ಕ್ರಿಯೆ ನೆರವೇರಿಸಿದ ಮಗಳು

ಮೈಸೂರು: ತಂದೆಯ ಉತ್ತರಾಧಿಕ್ರಿಯೆಯನ್ನು ನೆರವೇರಿಸಲು ಮಗಳೇ ತನ್ನ ಕೇಶಮುಂಡನ ಮಾಡಿಸಿಕೊಂಡು ತಂದೆಯ ಉತ್ತರಾಧಿಕ್ರಿಯೆ ನೆರವೇರಿಸಿ ಸಂಪ್ರದಾಯಕ್ಕೆ ಸವಾಲಕಿದ ಘಟನೆಯೊಂದು ಜಿಲ್ಲೆಯ ಟಿ. ನರಸೀಪುರದ ಕೇತುಪುರ ಗ್ರಾಮದಲ್ಲಿ ನಡೆದಿದೆ.

ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ತಂದೆ ಸತ್ತರೇ ಹಿರಿಯ ಮಗ, ತಾಯಿ ಸತ್ತರೇ ಕಿರಿ ಮಗ ತಲೆ ಬೊಳಿಸಿಕೊಂಡು ಉತ್ತರಾಧಿಕ್ರಿಯೆ ನಡೆಸುವುದು ಸಂಪ್ರದಾಯ. ಆದರೆ ಗಂಡು ಮಕ್ಕಳಿಲ್ಲದ ತಂದೆಗೆ ಮಗಳೇ ಕೇಶನ ಮುಂಡನ ಮಾಡಿಸಿಕೊಂಡು ತಂದೆಯ ಉತ್ತರಾಧಿಕ್ರಿಯೆ ನೆರವೇರಿಸಿ ಸಂಪ್ರದಾಯಕ್ಕೆ ಸವಾಲಕಿದ ಘಟನೆ ನಡೆದಿದೆ. ಕನಿಕಾ ಪರಮೇಶ್ವರಿ ಎಂಬಾಕೆ  ಇಂತಹದೊಂದು ಸವಾಲಿನ ಹೆಜ್ಜೆ ಇಟ್ಟು ತಂದೆಯೇ ಉತ್ತರಾಧಿ ಕ್ರಿಯೆಗಳನ್ನು ನೇರವೇರಿಸಿದ್ದು, ತಂದೆ ಪುಟ್ಟಸ್ವಾಮಿಗೌಡ(62) ತಾಯಿ ನಾಗರತ್ನ ದಂಪತಿಗೆ ಒಬ್ಬಳೇ ಮಗಳಾಗಿದ್ದಾಳೆ. ಗಂಡು ಮಕ್ಕಳಿಲ್ಲದ್ದರಿಂದ ಇದ್ದ ಒಬ್ಬಳೇ ಮಗಳನ್ನು ಪ್ರೀತಿಯಿಂದ ಸಾಕಿದ್ದರು. ಆದರೆ ಕಳೆದ ಡಿಸೆಂಬರ್ 11 ರಲ್ಲಿ ಅನಾರೋಗ್ಯದಿಂದ ಪುಟ್ಟಸ್ವಾಮಿಗೌಡ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಮಗಳಾದ ಕನಿಕಾಪರಮೇಶ್ವರಿಯೇ ನೇರವೇರಿಸಿದ್ದಾಳೆ. ಅಷ್ಟೂ ಮಾತ್ರವಲ್ಲದೆ ಉತ್ತರಾಧಿ ಕಾರ್ಯವನ್ನು ಸಹ ಕೇಶ ಮುಂಡನ ಮಾಡಿಸಿಕೊಂಡು ಹಿಂದೂ ಸಂಪ್ರಾದಯದಂತೆ ಕ್ರಿಯೆಯನ್ನು ಮುಗಿಸಿದ್ದಾರೆ.

ಇಂದು ಗಂಡು- ಹೆಣ್ಣು ಎಂಬ ಬೇಧಭಾವವಿಲ್ಲ. ಎಲ್ಲರೂ ಸರಿ ಸಮಾನರೇ ಎಂಬ ನಿಟ್ಟಿನಲ್ಲಿ ನಾವು ಗೊಡ್ಡು ಸಂಪ್ರದಾಯಗಳಿಗೆ ಬೆಲೆ ಕೊಡದೇ ತಂದೆಯ ಋಣ ತೀರಿಸಲು ಅವರ ಅಂತಿಮ ಕಾರ್ಯವನ್ನು ನಾನೇ ನೇರವೇರಿಸಲು ನಮ್ಮ ಚಿಕ್ಕಮ್ಮ ಧೈರ್ಯ ತುಂಬಿದರು ಎಂದು ಕನಿಕಾ ಪರಮೇಶ್ವರಿ ತಿಳಿಸಿದ್ದಾರೆ.
 

See also  ವರ್ಚ್ಯುವಲ್ ಮೂಲಕ ದಸರಾ ಜಂಬೂಸವಾರಿ ವೀಕ್ಷಣೆಗೆ ಅವಕಾಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು