ಮೈಸೂರು: ಮಠದ ಚಿನ್ನದ ತಟ್ಟೆ ಮತ್ತು ಬೆಳ್ಳಿ ರಥವನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದಲ್ಲಿ ವಿವಾದಕ್ಕೆ ಗುರಿಯಾಗಿ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಮೈಸೂರಿನ ಪುರಾತನ ಸೋಸಲೆಮಠದ ಶ್ರೀ ವಿದ್ಯಾ ಮನೋಹರ ತೀರ್ಥ ಸ್ವಾಮಿಗಳು ಪದತ್ಯಾಗ ಮಾಡಿದ್ದಾರೆ.
ಪೀಠಾತ್ಯಾಗ ಮಾಡಿರುವ ವಿದ್ಯಾ ಮನೋಹರ ತೀರ್ಥ ಸ್ವಾಮಿಗಳು ಅನೇಕ ವಿವಾದಗಳು ಮತ್ತು ಆರೋಪಗಳಿಗೆ ಗುರಿಯಾಗಿದ್ದರು. ಅಷ್ಟು ಮಾತ್ರವಲ್ಲದೆ ವಿವಿಧ ಠಾಣೆಗಳಲ್ಲೂ ಸಹ ಶ್ರೀಗಳ ವಿರುದ್ಧ ದೂರು ಸಹ ದಾಖಲಾಗಿತ್ತು. ಸೋಸಲೆ ಮಠಕ್ಕೆ ಸೇರಿದ ಬೆಳ್ಳಿ ತಟ್ಟೆ, ಚೆಂಬು ಹಾಗೂ ಬೆಳ್ಳಿ ರಥವನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಇವರ ಮೇಲಿತ್ತು. ಅಲ್ಲದೆ ಸೋಸಲೆ ಮಠದ ಶಾಖಾ ಮಠಕ್ಕೆ ಸೇರಿದ ಟಿ. ನರಸೀಪುರ, ತಮಿಳುನಾಡು ಹಾಗೂ ಆಂಧ್ರದಲ್ಲಿನ ಮಠದ ಆಸ್ತಿಯನ್ನು ಮಾರಾಟ ಮಾಡಿದ ಆರೋಪದಡಿ ಶ್ರೀಗಳ ವಿರುದ್ದ ದೂರು ಸಹ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಹಲವು ಭಕ್ತರು ಶ್ರೀಗಳ ವಿರುದ್ಧ ಪ್ರಕರಣ ದಾಖಲಿಸಿ ಶ್ರೀಗಳು ಜೈಲು ಪಾಲಾಗಿ ಕೆಲ ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದರು.
ಅಲ್ಲದೆ 2012 ರಲ್ಲಿ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿತ್ತು. ಈ ಹಿನ್ನಲೆಯಲ್ಲಿ ವಿವಾದ ಹಾಗೂ ಆರೋಪಗಳಲ್ಲೇ ವಿದ್ಯಾ ಮನೋಹರ ತೀರ್ಥ ಸ್ವಾಮಿಗಳು ಗುರಿಯಾಗಿದ್ದರು. ಆದರೆ ಶ್ರೀಗಳ ವಿರುದ್ಧ ಆರೋಪ ಕೇಳಿ ಬಂದಾಗಲೇ ಅನೇಕ ಭಕ್ತರು ಪೀಠಾತ್ಯಾಗ ಮಾಡುವಂತೆ ಒತ್ತಾಯಿಸಿದ್ದರು ಶ್ರೀಗಳು ಮಾತ್ರ ಪೀಠಾತ್ಯಾಗ ಮಾಡಿರಲಿಲ್ಲ. ಆದರೆ ಇಂದು ಏಕಾಎಕಿ ಪೀಠಾತ್ಯಾಗ ಮಾಡಿದ್ದು, ಆರೋಪಗಳಿಗೆ ಹೆದರಿ ಪೀಠಾ ತ್ಯಾಗ ಮಾಡಿಲ್ಲ. ಶ್ರೀಗಳ ಮಾರ್ಗದರ್ಶನದ ಮೇಲೆ ಪೀಠಾತ್ಯಾಗ ಮಾಡಿದ್ದೇನೆ. ಮುಂದಿನ ಪೀಠಾಧ್ಯಕ್ಷರಾಗಿ ಶ್ರೀಗಳು ಡಾ. ಪ್ರವೀಣ್ ಅವರನ್ನು ಸೂಚಿಸಿದ್ದು ಅವರು ಮುಂದಿನ ಸೋಸಲೆ ಮಠದ ಸ್ವಾಮೀಜಿಯಾಗಿ ಮಠವನ್ನು ಮುನ್ನಡೆಸಲಿದ್ದಾರೆ ಎಂದು ಮಾದ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.