ಮೈಸೂರು: ಇಲ್ಲಿನ ಹುಣಸೂರು ಪಟ್ಟಣ ಎಪಿಎಂಸಿ ದ್ವಾರದ ಬಳಿ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದ ಹಿನ್ನಲೆಯಲ್ಲಿ ಇಂದು ಮೈಸೂರಿನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ನಿನ್ನೆ ಹುಣಸೂರಿನಲ್ಲಿ ಬಿಗಿ ಭದ್ರತೆ ನಡುವೆ ಹನುಮ ಜಯಂತಿ ನಡೆದ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರಿಗೆ ನಿನ್ನೆ ಇದ್ದ ಈದ್ ಮಿಲಾದ್ ಅನ್ನು ಇಂದು ಆಚರಿಸಲು ತಿಳಿಸಲಾಗಿತ್ತು. ಇಂದು ಪಟ್ಟಣದ ಎಪಿಎಂಸಿ ದ್ವಾರದ ಬಳಿಯ ಒಂಟೆ ಬೋರೆ ಸರ್ಕಲ್ ನಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದ ಹಸಿರು ಬಾವುಟನ್ನು ಹಾಕಲಾಗಿತ್ತು. ಇದನ್ನು ಹಿಂದೂ ಯುವಕರು ತೆರವುಗೊಳಿಸುವಂತೆ ಸೂಚಿಸಿದರು.
ಈ ಹಿನ್ನಲೆಯಲ್ಲಿ ಎರಡು ಗುಂಪುಗಳ ನಡುವೆ ಮಚ್ಚು ಲಾಂಗುಗಳನ್ನು ಹಿಡಿದು ಹೊಡೆದಾಟ ಆರಂಭವಾಗಿ ಒಬ್ಬನಿಗೆ ತೀವ್ರ ಹಲ್ಲೆಯಾಗಿದ್ದು, ಈ ಸಂಬಂಧ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ಹೆಚ್ಚುವರಿ ಪಡೆಯನ್ನು ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ತಿಳಿಸಿದ್ದಾರೆ.