News Kannada
Thursday, July 07 2022

ಮೈಸೂರು

ಪ್ರೇಯಸಿಯ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ - 1 min read

Photo Credit :

ಪ್ರೇಯಸಿಯ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಮೈಸೂರು: ಪ್ರೇಯಸಿಯನ್ನು ಬರ್ಬರವಾಗಿ ಕೊಲೆಗೈದು ಪ್ರಿಯಕರನೂ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಟಿ. ನರಸೀಪುರ ಪಟ್ಟಣದ ಇಂದಿರಾ ಕಾಲೋನಿಯಲ್ಲಿ ನಡೆದಿದೆ.

Married lover kills widow, hangs self-1ಪಟ್ಟಣದ ಕಾಲೋನಿ ನಿವಾಸಿ ರಾಜು(30) ಎಂಬಾತನೇ ತನ್ನ ವಿಧವೆ ಪ್ರೇಯಸಿ ಜ್ಯೋತಿಯನ್ನು ಬರ್ಬರವಾಗಿ ಹತ್ಯೆಗೈದು ತಾನೂ ನೇಣಿಗೆ ಶರಣಾಗಿರುವ ವಿವಾಹಿತ ಪ್ರಿಯಕರನಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಟಿ. ನರಸೀಪುರ ಪಟ್ಟಣ ಠಾಣೆಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಜ್ಯೋತಿ ಮಂಡ್ಯದ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದ ನಿವಾಸಿ ಮಹದೇವಸ್ವಾಮಿ ಜತೆ ವಿವಾಹವಾಗಿ ಇಬ್ಬರು ಮಕ್ಕಳಿದ್ದರು. ಆದರೆ ಕಳೆದ ಮೂರು ವರ್ಷದ ಹಿಂದೆ ಅನಾರೋಗ್ಯದಿಂದ ಪತಿ ಮಹದೇವಸ್ವಾಮಿ ಸಾವನ್ನಪ್ಪಿದ್ದು, ವಿಧವೆಯಾದ ಜ್ಯೋತಿ ತಾಯಿಯೊಟ್ಟಿಗೆ ತಿ.ನರಸೀಪುರ ಇಂದಿರ ಕಾಲೂನಿಯಲ್ಲಿ ವಾಸವಾಗಿದ್ದರು. ಈ ವೇಳೆ ಇಂದಿರಾ ಕಾಲೋನಿಯ ನಿವಾಸಿ ರಾಜು ಈಗಾಗಲೇ ವಿವಾಹಿತನಾಗಿ ಒಂದು ಮಗುವಿನ ತಂದೆಯಾಗಿದ್ದು, ವಿಧವೆ ಜ್ಯೋತಿಯ ಜತೆಗೆ ಸ್ನೇಹ ಬೆಳೆದು ಅಕ್ರಮ ಸಂಬಂಧ ಹೊಂದಿದ್ದರು. ಆದರೆ ನಿನ್ನೆ ಏಕಾಏಕಿ ಪ್ರೇಯಸಿ ಮನೆಗೆ ನುಗ್ಗಿದ ರಾಜು ಹಾಗೂ ಜ್ಯೋತಿಯ ನಡುವೆ ಮಾತಿಗೆ ಮಾತು ಬೆಳೆದು ವೈಮನಸ್ಸು ಉಂಟಾಗಿದೆ. ಕೊನೆಗೆ ಕುಪಿತಗೊಂಡ ರಾಜು ತಾಮ್ರದ ಬಿಂದಿಯಿಂದ ಜ್ಯೋತಿ ಮುಖಕ್ಕೆ ಬರ್ಬರವಾಗಿ ಹೊಡೆದು ಜಜ್ಜಿ ಹತ್ಯೆ ಮಾಡಿದ್ದಾನೆ. ಪ್ರೇಯಸಿಯ ಹತ್ಯೆಯಿಂದ ಹೆದರಿ ತಾನೂ ಸಹ ಅದೇ ಮನೆಯಲ್ಲಿ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೃತ ಜ್ಯೋತಿಯ ತಾಯಿ ಟಿ. ನರಸೀಪುರ ಠಾಣೆಯ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

 

See also  ಅರ್ಬನ್ ಹಾತ್ ನಲ್ಲಿ ಕಣ್ಮನ ಸೆಳೆಯುವ ಕಲಾವೈಭವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು