ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುಗ್ಗಿ ಸಂಕ್ರಾಂತಿ ಈಗಾಗಲೇ ಸಂಭ್ರಮ ಮನೆ ಮಾಡಿದ್ದು, ದುಬಾರಿ ಬೆಲೆಯ ನಡುವೆಯೂ ಸಹ ಈಗಾಗಲೇ ಪುಟಾಣೆಗಳು ಎಳ್ಳು-ಬೆಲ್ಲ ಕೊಳ್ಳಲು ಮುಗಿ ಬಿದ್ದಿದ್ದಾರೆ.
ಹೊಸ ವರ್ಷದ ಮೊದಲ ಹಬ್ಬ ಹೊಸ ಸಂಕ್ರಮಣಕ್ಕೆ ಪಾದಾರ್ಪಣೆ ಮಾಡುವ ಹಬ್ಬವೇ ಸುಗ್ಗಿ ಸಂಕ್ರಾಂತಿ ಹಳ್ಳಿಯಲ್ಲಿ ಇನ್ನಿಲ್ಲದ ಸಡಗರ ನಗರ ಭಾಗಕ್ಕೂ ಇನ್ನಿಲ್ಲದ ಸಂಭ್ರಮ, ಹಿರಿಯರಿಂದ ಪುಟಾಣಿಗಳವರೆಗೂ ಎಲ್ಲರನ್ನು ರಂಜಿಸುವ ಹಬ್ಬ ಇದಾಗಿದೆ.
ಹಳೆ ಮೈಸೂರು ಪ್ರಾಂತ್ಯ ರೈತರಿಗೆ ಸುಗ್ಗಿ ಸಂಕ್ರಾಂತಿಯೇ ವಿಶೇಷ ವರ್ಷದಿಂದ ಬೆಳೆದ ಫಸಲನ್ನು ಕಟಾವು ಮಾಡಿ ಕೊಂಚ ನಿರಾಳಾಗುವ ಕಾಲವಿದು. ಅದರಲ್ಲೂ ಅನ್ನದಾತರಿಗೆ ಅಕ್ಷರ ಸಂಭ್ರಮದ ಹೊನಲಿನ ಹಬ್ಬ ಅಂದು ತಮ್ಮ ಮನೆಯ ಗೋವುಗಳನ್ನು ವಿಶೇಷವಾಗಿ ಸಿಂಗರಿಸಿ ಪೂಜೆ ಸಲ್ಲಿಸಿ ಬೆಂಕಿ ಮೇಲೆ ಆರಿಸುವುದು(ಕಿಚ್ಚಾಯಿಸುವುದು) ವಿಶೇಷ.
ಹೆಣ್ಣು ಮಕ್ಕಳಿಗೂ ಸಹ ಸುಗ್ಗಿ ಸಂಕ್ರಾಂತಿ ವಿಶೇಷವಾಗಿ ಹೊಸ ಬಟ್ಟೆ ತೊಟ್ಟು ಅಕ್ಕ-ಪಕ್ಕದ ಮನೆಯವರಿಗೆ ಎಳ್ಳು ಬೆಲ್ಲ ನೀಡುತ್ತಾರೆ. ಇದರ ಅರ್ಥ ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನೇ ನುಡಿ ಎಂಬ ಸಂದೇಶವನ್ನು ಆ ಮೂಲಕ ಪಸರಿಸುವುದು ಎಳ್ಳು ಬೆಲ್ಲದ ವಿಶೇಷವಾಗಿದೆ. ಇನ್ನೂ ಹಲವು ಮಂದಿ ಗ್ರಾಮಗಳಲ್ಲಿ ಗ್ರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಸುಗ್ಗಿ ಸಂಭ್ರಮವನ್ನು ನಗರ ಮಂದಿ ವಿಭಿನ್ನವಾಗಿಯೇ ಆಚರಿಸುತ್ತಾರೆ ಅಂದು ನಗರದಲ್ಲೇ ಕಾಣ ಸಿಗುವ ಗೋವುಗಳನ್ನು ಹುಡುಕಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ ಬಳಿಕ ಸ್ಥಳೀಯ ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇನ್ನೂ ಕೆಲವು ಮಂದಿ ಎಳ್ಳು ಬೆಲ್ಲವನ್ನು ಜನರಿಗೆ ಹಂಚಿ ಸಂಭ್ರಮಿಸುತ್ತಾರೆ.
ಈಗಾಗಲೇ ಸಾಂಸ್ಕೃತಿಕ ನಗರಿ ಮೈಸೂರಿನ ದೇವರಾಜ ಮಾರುಕಟ್ಟೆ, ಚಿಕ್ಕ ಮಾರುಕಟ್ಟೆ ಆರ್ಎಂಸಿ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಿದ್ದು, ಲೆಕ್ಕಿಸದ ಮಂದಿ ಸಿಕ್ಕಷ್ಟೇ ಬೆಲೆಗೆ ಎಳ್ಳು, ಬೆಲ್ಲ, ಕಬ್ಬು, ಬಾಳೆಕಂದು, ಸಂಪಿಗೆ, ಮಲ್ಲಿಗೆ ಹೂಗಳ ಬೆಲೆಯೂ ಸಹ ಗಗನಕ್ಕೇರಿತ್ತು. ಒಟ್ಟಾರೆ ಸಾಂಸ್ಕೃತಿಕ ನಗರಿ ಮೈಸೂರು ಸುಗ್ಗಿ ಸಂಕ್ರಾಂತಿ ಸಂಕ್ರಮಣದ ಸಂಭ್ರಮದಲ್ಲಿದ್ದಾರೆ.