ಮೈಸೂರು: ಮೈಸೂರು ಬಹುರೂಪಿಯಲ್ಲಿ ಉತ್ತರ ಕರ್ನಾಟಕದ ಖಾದ್ಯಗಳ ದರ್ಬಾರ್ ನಡೆಯುತ್ತಿದ್ದು, ಉತ್ತರ ಕರ್ನಾಟಕದ ಮಹಿಳೆಯರು. ಉತ್ತರ ಕರ್ನಾಟಕದ ಸ್ಪೇಷಲ್ ಖಾದ್ಯಗಳ ಸವಿಯನ್ನು ರಂಗಾಸಕ್ತರಿಗೆ ನೀಡುತ್ತಿರುವುದು ವಿಶೇಷ. ಒಮ್ಮೆಯಾದರೂ ಉತ್ತರ ಕರ್ನಾಟಕದ ಖಾದ್ಯವನ್ನು ಸವಿಯಬೇಕೆಂದುಕೊಂಡಿರುವ ಮೈಸೂರು ಭಾಗದ ಮಂದಿಗೊಂದು ಸಿಹಿಸುದ್ದಿ.
ಮೈಸೂರಿನ ರಂಗಾಯಣ ಆವರಣ ನಾನಾ ರೂಪದ ಸಾಂಸ್ಕೃತಿಕ ಚಟುವಟಿಕೆಗಳಿಂದ ಎಲ್ಲರನ್ನು ಸೆಳೆದಿದೆ. ಆದರೆ ಬರುವ ಮಂದಿ ತಮ್ಮ ಗ್ರಾಮ್ಯ ಖಾದ್ಯದ ವಿಶೇಷ ಉಣ ಬಡಿಸಲು ಸಿದ್ದರಾಗಿದ್ದಾರೆ. ಭಾಗಲಕೋಟೆ ಸ್ಪೇಷಲ್ ಮೆನುನಲ್ಲಿ ಅಕ್ಕಿರೊಟ್ಟಿ, ರಾಗಿರೊಟ್ಟಿ, ಅವರೆಕಾಳು, ಈರುಳ್ಳಿ ಚಟ್ನಿ, ಹೋಳಿಗೆ, ಗಿರಿವಿಟ್ಟು, ಮಿರ್ಚಿ ಬಜ್ಜಿ, ಚಟ್ನಿಪುಡಿ ಸವಿ ಸವಿಯಬಹುದಾಗಿದೆ. ಇನ್ನೂ ಹುಬ್ಬಳಿ ಸ್ಪೇಷಲ್ ಮಳಿಗೆಯಲ್ಲಿ ಬಿಳಿ ಜೋಳದ ರೊಟ್ಟಿ, ಗಿರ್ಮೀಟ್, ಮಿರ್ಚಿ, ಶೇಂಗಾ ಸವಿ ಸವಿಯಲಿವೆ.
ಹುಬ್ಬಳಿಯಿಂದ ಖಾದ್ಯಮಾಲೆಂದೆ ಕಳೆದ ಒಂಭತ್ತು ವರ್ಷದಿಂದ ಮೈಸೂರಿಗೆ ಬರುತ್ತಿರುವ ಸಾವಕ್ಕ ಅಬ್ಬಿಗೇರಿ, ಅವರ ಪುತ್ರಿ ಜಯಶ್ರೀ ಅಬ್ಬಿಗೇರಿ, ಶಾಂತವ್ವ ಮೊರಬದ, ಸಾವಕ್ಕ ಇಟಗಿ, ಯಲ್ಲಮ್ಮ ಕಾದಗಿ ಬೆಳ್ಳಗ್ಗೆ 10 ರಿಂದ ರಾತ್ರಿ 11 ರವರೆಗೆ ರೊಟ್ಟಿ ಬಡಿಯುತ್ತಲೇ ಇರುತ್ತಾರೆ. ನಿತ್ಯವೂ 2,500 ದಿಂದ 3 ಸಾವಿರದವರೆಗೆ ರೊಟ್ಟಿ ತಟ್ಟಿ, 50 ಕಿಲೋ ಎಣ್ಣೆಗಾಯಿ, 25 ಮಿರ್ಚಿ ಹಾಗೂ 20 ಕಿಲೋ ಮಂಡಕ್ಕಿ ಸವಿ ತಿನಿಸುತ್ತಿದ್ದಾರೆ. ಧಾರವಾಡದಿಂದ ಬಂದ ಉಮಾಶಂಕರ್ ಕರಣಂ, ಗೀತಾ ಗಡಾದ, ದುಂಡೇಮ್ಮ ಗಡಾದ, ನೀಲಮ್ಮ ಗಡಾದ, ಪಾರ್ವತಿ ಗಡಾದ, ಅಶ್ವಿನಿ ಹಳ್ಯಾಳ, ಜಯಶ್ರೀ ಗಡಾದ ತಂಡವೂ ಸಹ ಉತ್ತರ ಕನಾರ್ಟಕದ ಸ್ಪೇಷಲ್ ಖಾದ್ಯಗಳನ್ನು ಉಣ ಬಡಿಸುತ್ತಿವೆ. ಪ್ರತಿವರ್ಷ ಬಹುರೂಪಿ ವೇಳೆಗೆ ಹುಬ್ಬಳಿ, ಧಾರವಾಡ, ಬಾಗಲಕೋಟೆಗಳಿಂದ ಬರುವ ಈ ತಂಡ ರಂಗಾಸಕ್ತರಿಗೆ ವಿಶೇಷ ಖಾದ್ಯಗಳನ್ನು ನೀಡುತ್ತಿವೆ.