ಮೈಸೂರು: ಆಟೋ ಪ್ರಯಾಣಿಕರ ಸೇವೆಗೆ ಆ್ಯಪ್ ಬಂದಿದ್ದು, ಆ್ಯಪ್ ಮೂಲಕವೇ ಆಟೋವನ್ನು ಬುಕ್ ಮಾಡುವ ಹೊಸ ತಂತ್ರಜ್ಞಾನ ಈಗ ಮೈಸೂರಿಗರಿಗೆ ಲಭ್ಯವಾಗಿದೆ.
ಕಳೆದ ಹದಿನೈದು ದಿನಗಳಿಂದಲೇ ಇಂತಹದೊಂದು ನೂತನ ತಂತ್ರಜ್ಞಾನ ಸಾಂಸ್ಕೃತಿಕ ನಗರಿಯಲ್ಲಿ ಚಾಲ್ತಿಯಲ್ಲಿದ್ದು, ನಗರದ 150 ಕ್ಕೂ ಹೆಚ್ಚು ಆಟೋಗಳು ಆ್ಯಪ್ ಸೇವೆಯಲ್ಲೇ ಓಡುತ್ತಿವೆ. ಪ್ರಯಾಣಿಕರು ಸಹ ತಾವು ಇರುವಲ್ಲಿಗೆ ಆಟೋಗಳನ್ನು ಕರೆಸಿಕೊಂಡು ಆ್ಯಪ್ ಅನ್ನು ಬಳಸಿಕೊಳ್ಳುತ್ತಿದ್ದಾರೆ.
ಆಟೋವನ್ನು ನೀವು ಇರುವಲ್ಲೇ ಬುಕ್ ಮಾಡಲು “ಗೂಗಲ್ ಪ್ಲೇ ಸ್ಟೋರ್” ನಿಂದ ಸೇವಾದಾತ ಕಂಪನಿಯ ಆಫ್ ಡೌನ್ಲೋಡ್ ಮಾಡಿಕೊಂಡು ಆ್ಯಪ್ ಸಹಾಯದಿಂದ ಸೇವೆ ಒದಗಿಸುವ ಆಟೋ ಎಷ್ಟೂ ದೂರದಲ್ಲಿದೆ. ನೀವು ಇರುವಲ್ಲಿಗೆ ಎಷ್ಟು ಸಮಯವಾಗುತ್ತೇ ಎಂಬ ಮಾಹಿತಿ ಜತೆಗೆ ಆ ಆಟೋ ಚಾಲಕ ಸಮಗ್ರ ಮಾಹಿತಿಯು ನಿಮಗೆ ಆ್ಯಪ್ ನಲ್ಲೇ ದೊರೆಯಲಿದೆ. ಕನಿಷ್ಟ 20 ರೂ ಪ್ರತಿ ಕಿಲೋ 5 ರೂ ನಂತೆ ಹಾಗೂ ಪ್ರಯಾಣದ ಪ್ರತಿ ನಿಮಿಷಕ್ಕೆ ಒಂದು ರೂ ನಿಗಧಿ ಮಾಡಲಾಗಿದೆ. ಇಂತಹ ವಿನೂತನ ಯೋಜನೆಯನ್ನು ಚಂಡಿಗಡ ಮೂಲದ ಜುಗ್ನೋ ಸೊಕೊಮೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದು, ಗ್ರಾಹಕರು ಮತ್ತು ಪ್ರಯಾಣಿಕರ ಮಧ್ಯೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಬಾಡಿಗೆ ಶೇ.90 ರಷ್ಟು ಚಾಲಕ ಹಾಗೂ ಶೇ.10 ಕಂಪನಿಗೆ ಎಂದು ಒಪ್ಪಂದ ಮಾಡಿಕೊಂಡಿದೆ.