News Kannada
Wednesday, July 06 2022

ಮೈಸೂರು

ಜೈಲಿನಿಂದ ಬಿಡುಗಡೆಯಾದ ಮಹಿಳೆ ಮತ್ತೇ ಜೈಲಿಗೆ - 1 min read

Photo Credit :

ಜೈಲಿನಿಂದ ಬಿಡುಗಡೆಯಾದ ಮಹಿಳೆ ಮತ್ತೇ ಜೈಲಿಗೆ

ಮೈಸೂರು: ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾದ ಮಹಿಳೆಯೊಬ್ಬಳು ಮತ್ತೆ ಜೈಲಿಗೆ ಬಂದು ನಾನು ಜೈಲಿನಲ್ಲೇ ಇರುತ್ತೇನೆ ಎಂದು ಜೈಲಾಧಿಕಾರಿಗಳನ್ನು ಬೇಡಿಕೊಂಡ ಅಪರೂಪದ ಘಟನೆಯೊಂದು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.  


ಮೂಲತಃ ಶ್ರೀರಂಗಪಟ್ಟಣದ ಗಾಜಾಂ ನ ನಿವಾಸಿಯಾದ ಶಬರಿನಾ ತಾಜ್  ಗಂಡನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 14 ವರ್ಷಗಳ ಹಿಂದೆ ಮೈಸೂರಿನ ಕೇಂದ್ರ ಕಾರಾಗೃಹ ಸೇರಿದಳು. ಆಗ ಒಂದು ಹೆಣ್ಣು ಹಾಗೂ ಎರಡು ಪುಟಾಣಿ ಮಕ್ಕಳು ಆಕೆಯನ್ನು ತಬ್ಬಿ ಅಮ್ಮ ಎಂದ ಕೂಗು ಆಕೆಗೆ ಇಂದಿಗೂ ನೆನಪಿಗಿದೆ.  ಕಾರಾಗೃಹಕ್ಕೆ ಬರುತ್ತಿದ್ದ ತಾಯಿಯು ಸಹ ತಾನೂ ಬರುವುದನ್ನೇ ನಿಲ್ಲಿಸಿದ್ದಾಳೆ. ಕೊನೆಗೆ ಒಂಟಿ ಜೀವನದ ಜಂಜಾಟದಲ್ಲಿ ಈಕೆಯ ಸಹಾಯಕ್ಕೆ ಬಂದಿದ್ದು ಜೈಲಾಧಿಕಾರಿಗಳು ಅದಕ್ಕಾಗಿಯೇ ಸನ್ನಡತೆಯ ಆಧಾರದ ಮೇಲೆ ನಿನ್ನೆಯಷ್ಟೇ ಈಕೆಯನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದರು.

14 ವರ್ಷ ವನವಾಸ ಮುಗಿಸಿ ಶಬರಿನಾ ತಾಜ್ ನೇರವಾಗಿ ಹೋಗಿದ್ದು ಗಜಾಂನ ಗಂಡನ ಮನೆಗೆ ಆದರೆ ಅಲ್ಲಿ ಗಂಡನಿಲ್ಲ, ಮಕ್ಕಳೂ ಇಲ್ಲ. ಅತ್ತೆ, ನಾದಿನಿಯರು 14 ವರ್ಷದಲ್ಲಿ ನಡೆದಿರುವದೇನೂ ಎಂದು ಹೇಳಲೂ ತಯಾರಿಲ್ಲ. ಅಷ್ಟು ಮಾತ್ರವಲ್ಲದೆ ಈಕೆಯ ವಾಸಕ್ಕಿದ್ದ ಮನೆಯೂ ಈಗ ಇಲ್ಲದಂತಾಗಿದೆ. ಜೈಲಿನ ಆಸರೆಯಲ್ಲಿದ್ದ ಈಕೆ ಬಿಡುಗಡೆಯಾದ ಬಳಿಕವೇ ಬೀದಿಗೆ ಬಿದ್ದಿದ್ದಾಳೆ.  ಎಲ್ಲಿಯೂ ಆಸರೆ ಸಿಗದೆ ಇದ್ದಾಗ ಕಂಗಾಲಾದ ಶಬರಿನಾ ತಾಜ್ ಮರಳಿ ಕಾರಾಗೃಹಕ್ಕೆ ಬಂದು ಆಸರೆಗೆ ಅಂಗಾಲಾಚಿದ್ದಾರೆ. ಹೊರಗಿನ ಪ್ರಪಂಚದಲ್ಲಿ 14 ವರ್ಷದಲ್ಲಿ ನನ್ನವರೆಲ್ಲಾ ಕೆಲವರು ಇಲ್ಲದಾಗಿದ್ದಾರೆ, ಕೆಲವರು ಕಾಣೆಯಾಗಿದ್ದಾರೆ.

ಅವರೆಲ್ಲೂ ಸಿಕ್ಕಿ ನನ್ನ ಗುರುತು ಹಿಡಿಯುವವರೆಗೂ ತನಗೆ ಆಶ್ರಯ ನೀಡಿ ಎಂದು ಅಂಗಲಾಚಿದ್ದಾರೆ. ಆದರೆ ಕಾರಾಗೃಹದಲ್ಲಿ ಆಕೆಯನ್ನು ಇರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲದ ಹಿನ್ನಲೆಯಲ್ಲಿ ಕಾರಾಗೃಹ ಅಧಿಕಾರಿಗಳು ಆಕೆಯನ್ನು ನಿರಾಶ್ರಿತರ ವಸತಿ ಶಕ್ತಿಧಾಮದ ಆಸರೆಗೆ ಆಕೆಯನ್ನು ಒಪ್ಪಿಸಿದ್ದಾರೆ. ಆದರೆ ನನ್ನ ಕಾಲ ಮೇಲೆ ನಾನೂ ನಿಂತಿಕೊಳ್ಳಬೇಕು. ದಯಮಾಡಿ ನನ್ನವರನ್ನು ನನಗೆ ಹುಡುಕಿಕೊಂಡಿ, ನಾನೇ ಹೆತ್ತ ನನ್ನ ಕರುಳಿನ ಕುಡಿಗಳು ಎಲ್ಲಿವೇ ಎಂದು ತಿಳಿಸಿಕೊಡಿ ಎನ್ನುವುದೇ ಮಹಿಳೆಯ ಅಳಲಾಗಿದೆ.

14 ವರ್ಷದ ಹಿಂದೆ ಶಬರಿತಾಜ್ ಜೈಲು ಸೇರಿದಾಗ ಆಕೆಯ ಮಕ್ಕಳು ಸಣ್ಣವರಾಗಿದ್ದರು. ಆದರೆ ಈಗ ಹೆಣ್ಣು ಮಗಳು ಮದುವೆಯಾಗಿದ್ದು, ಗಂಡನ ಮನೆ ಸೇರಿದ್ದಾಳೆ, ಇನ್ನಿಬ್ಬರು ಗಂಡು ಮಕ್ಕಳು ಮದುವೆ ಮಾಡಿಕೊಂಡು ಶ್ರೀರಂಗಪಟ್ಟಣದಲ್ಲಿ ಸಂಸಾರ ನಡೆಸುತ್ತಿದ್ದಾರೆ. ಆದರೆ ಅವರ್ಯಾರಿಗೂ ತಾಯಿ ಶಬರಿನಾತಾಜ್ ಬದುಕಿಯೇ ಇಲ್ಲವೆಂದು ಅತ್ತೆ  ತಿಳಿಸಿದ್ದು ಹೀಗಾಗಿ ತಾಯಿಯಿಂದ ದೂರವೇ ಇದ್ದಾರೆ. ಅಷ್ಟೇ ಅಲ್ಲದೇ ಜೈಲಿನಿಂದ ಬಂದ ತಾಯಿಯನ್ನು ಭೇಟಿಯಾಗಲು ಮಾರ್ಯಾದೆಗೆ ಅಂಜಿ ದೂರವೇ ಉಳಿದಿದ್ದಾರೆ. ಇಂತಹ ದುಸ್ಥಿತಿಯಲ್ಲಿ ದಾರಿ ಕಾಣದ ಶಬರಿನಾ ತಾಜ್ ಆಸರೆಗೆ ಕೈಚಾಚಿದ್ದಾರೆ.

See also  ಕೆಎಸ್ ಆರ್ ಟಿಸಿ ಬಸ್ ರಿಕ್ಷಾಕ್ಕೆ ಡಿಕ್ಕಿ: ಚಾಲಕ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು