News Kannada
Wednesday, July 06 2022

ಮೈಸೂರು

ಅರಮನೆಯಲ್ಲಿ ಅಕ್ರಮವಾಗಿ ನೇಮಕಗೊಂಡಿದ್ದ ನೌಕರರ ವಜಾ - 1 min read

Photo Credit :

ಅರಮನೆಯಲ್ಲಿ ಅಕ್ರಮವಾಗಿ ನೇಮಕಗೊಂಡಿದ್ದ ನೌಕರರ ವಜಾ

ಮೈಸೂರು:  ಮೈಸೂರು ಅರಮನೆಯಲ್ಲಿ ಅಕ್ರಮವಾಗಿ ನೇಮಕಗೊಂಡಿದ್ದ 11 ಮಂದಿ ನೌಕರರನ್ನು ವಜಾಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ವಜಾಗೊಳಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ನಿರ್ದೇಶಕಿ ಇಂದಿರಮ್ಮ ತಿಳಿಸಿದ್ದಾರೆ.

ಕಾನೂನು ಬಾಹಿರವಾಗಿ 2008ರಲ್ಲಿ ದಿನಗೂಲಿ ನೌಕರರಾಗಿದ್ದ 11 ಮಂದಿ ನೌಕರರನ್ನು ಅಂದಿನ ಅರಮನೆ ಉಪ ನಿರ್ದೇಶಕ ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆಂದು ಸುಪ್ರೀಂಕೋರ್ಟ್ ಆದೇಶ  ನೀಡಿ ಇದೇ ನೌಕರರು ಕೋರ್ಟ್‍ನ ನಾಲ್ಕು ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಾರೆ. ಆದ್ದರಿಂದ ಇವರನ್ನು ವಜಾಗೊಳಿಸುವಂತೆ ಜನವರಿ 30 ರ 2016 ರಂದು ಆದೇಶ ನೀಡಿದ ಹಿನ್ನಲೆಯಲ್ಲಿ ಈ ನೌಕರರನ್ನು ವಜಾಗೊಳಿಸಲಾಗಿದ್ದು, ಇದರಲ್ಲಿ 2 ಮಂದಿ ಮರಣ ಹೊಂದಿದ್ದು 2 ಮಂದಿ ನೌಕರರು ನಿವೃತ್ತರಾಗಿದ್ದಾರೆ.

ವಜಾಗೊಂಡ ನೌಕರರಲ್ಲಿ ಒಬ್ಬರು ಗೈಡ್ ಆಗಿದ್ದು ಉಳಿದ ಆರು ಜನ ಡಿ ಗ್ರೂಪ್ ನೌಕರರಾಗಿದ್ದು ಇವರನ್ನು ತಾತ್ಕಾಲಿಕ ದಿನಗೂಲಿ ನೌಕರರಾಗಿ ತೆಗೆದುಕೊಳ್ಳಲು ಅನುಮತಿಯನ್ನು ರಾಜ್ಯಸರ್ಕಾರಕ್ಕೆ ಕೇಳಿದ್ದು, ಸರ್ಕಾರದಿಂದ ಪ್ರತಿಕ್ರಿಯೆ ಬಂದ ನಂತರ ಇವರನ್ನು ಹೊರ ಗುತ್ತಿಗೆ ದಿನಗೂಲಿ ನೌಕರರಾಗಿ ತೆಗೆದುಕೊಳ್ಳಲು ಅರಮನೆ ಆಡಳಿತ ಮಂಡಳಿ ಚಿಂತಿಸಿದೆ ಎಂದು ಇದೇ ಸಂದರ್ಭದಲ್ಲಿ ನಿರ್ದೇಶಕರು ಸ್ಪಷ್ಟಪಡಿಸಿದರು.

See also  ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ರೈತರ ಕಡೆಗಣನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು