News Kannada
Wednesday, July 06 2022

ಮೈಸೂರು

ಮೈಸೂರಿನ ಇನ್‍ಫೋಸಿಸ್ ಕ್ಯಾಂಪಸ್‍ನಲ್ಲಿ ವಿಶ್ವದ ಅತಿ ಎತ್ತರದ ಕ್ಲಾಕ್ ಟವರ್ - 1 min read

Photo Credit :

ಮೈಸೂರಿನ ಇನ್‍ಫೋಸಿಸ್ ಕ್ಯಾಂಪಸ್‍ನಲ್ಲಿ ವಿಶ್ವದ ಅತಿ ಎತ್ತರದ ಕ್ಲಾಕ್ ಟವರ್

ಮೈಸೂರು: ಸ್ವಚ್ಛನಗರಿ,ಅರಮನೆನಗರಿ, ಸಾಂಸ್ಕೃತಿಕ ನಗರಿ ಎಂಬಿತ್ಯಾದಿ ಹೆಸರುಗಳಿಂದ ಪ್ರಸಿದ್ಧಿ ಪಡೆದಿರುವ ಮೈಸೂರು ಈಗ ಗಡಿಯಾರಗಳ ನಗರಿ ಎಂಬ ಖ್ಯಾತಿಗಳಿಸಲು ಹೆಜ್ಜೆ ಇಟ್ಟಿದ್ದು, ಇದಕ್ಕೆ ಪೂರಕವಾಗಿ ವಿಶ್ವ ಅತಿ ಎತ್ತರದ ಗಡಿಯಾರ ಮೈಸೂರಿನ ಇನ್‍ಫೋಸಿಸ್‍ನಲ್ಲಿ ತಲೆ ಎತ್ತಲು ಸಿದ್ಧತೆ ನಡೆಸಿದೆ.


ಸಾಂಸ್ಕೃತಿಕ ರಾಜಧಾನಿ ಮೈಸೂರು ಈಗಾಗಲೇ ದೊಡ್ಡಗಡಿಯಾರ ಹಾಗೂ ಚಿಕ್ಕಗಡಿಯಾರದಂತಹ ಅವಳಿ ಗಡಿಯಾರದಿಂದ ತನ್ನ ಅಂದ ಹೆಚ್ಚಿಸಿಕೊಂಡಿದ್ದರೆ, ಶತಮಾನದ ಸವಿ ನೆನಪಿನ ಸಂಭ್ರಮಕ್ಕೆ ಮೈಸೂರು ವಿವಿ ನಗರದಲ್ಲಿ ಮತ್ತೊಂದು ಗಡಿಯಾರವನ್ನು ನಿರ್ಮಿಸಿ ತನ್ನ ಅಂದ ಹೆಚ್ಚಿಸಿಕೊಂಡಿದೆ. ಈಗ ಸದ್ಯಕ್ಕೆ ನಗರದಲ್ಲಿರುವ ಮೂರು ಗಡಿಯಾರಗಳ ಸಾಲಿಗೆ ಮತ್ತೊಂದು ದೈತ್ಯ ಗಡಿಯಾರ ಸೇರ್ಪಡೆಯಾಗಿ ಗಮನ ಸೆಳೆಯಲು ಸಿದ್ಧತೆ ನಡೆದಿದೆ.

345 ಎಕರೆ ಪ್ರದೇಶ ಹರಿಡಿರುವ ಮೈಸೂರಿನ ಪ್ರಸಿದ್ಧ ಇನ್‍ಫೋಸಿಸ್‍ನ ಗ್ಲೋಬಲ್ ಎಜ್ಯುಕೇಶನ್ ಸೆಂಟರ್ ನಲ್ಲಿ 135 ಮೀಟರ್ ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲು ಇನ್ಫೋಸಿಸ್ ಉದ್ದೇಶಿಸಿದೆ. 60 ಕೋಟಿ ವೆಚ್ಚದಲ್ಲಿ ಗಡಿಯಾರ ನಿರ್ಮಿಸಲು ಮುಂದಾಗಿದ್ದು, 19 ಅಂತಸ್ತುಗಳನ್ನು ಈ ಗೋಪುರ ಹೊಂದಿದ್ದು ಇನ್ನೂ 20 ತಿಂಗಳಲ್ಲಿ ಗೋಪುರ ತಲೆಎತ್ತಲಿದೆ ಎಂದು ಇನ್‍ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ತಿಳಿಸಿದ್ದಾರೆ.

ವಿಶ್ವದ ಅತ್ಯಂತ ಪ್ರಸಿದ್ಧ ಗಡಿಯಾರಗಳಿಗೆ ಹೊಲಿಸಿ ನೋಡಿದರೆ ಮೈಸೂರಿನ ಇನ್‍ಫೋಸಿಸ್ ಕ್ಯಾಂಪಸ್‍ನಲ್ಲಿ ನಿರ್ಮಿಸಲು ಹೊರಟಿರುವ ಗಡಿಯಾರ ಗೋಪುರವೇ ಅತಿ ದೊಡ್ಡ ಗೋಪರವಾಗಿದೆ. ಲಂಡನ್‍ನ ಬಿಗ್‍ಬೆನ್(96 ಮೀಟರ್), ಕ್ಯಾಲಿಫೋರ್ನಿಯಾದ ಹೋವರ್ ಟವರ್(87 ಮೀಟರ್)ಗಳಿಗಿಂತಲೂ ಎತ್ತರ ಅಂದರೆ 136 ಮೀಟರ್ ಅಡಿ ಎತ್ತರದಲ್ಲಿ ಗಡಿಯಾರ ನಿರ್ಮಿಸಲು ಸಿದ್ಧತೆ ನಡೆಸಿದೆ.

ಇನ್‍ಫೋಸಿಸ್‍ನ ಮೈಸೂರು ಕ್ಯಾಂಪಸ್‍ನ್ನು ವಿನ್ಯಾಸವನ್ನೂ ರೂಪುಗೊಳಿಸಿದ ಮುಂಬಯಿ ಮೂಲದ ಹಫೀಜ್ ಕಂಟ್ರಾಕ್ಟರ್ ಅವರೇ ಈ ಗೋಪುರದ ವಿನ್ಯಾಸವನ್ನು ರಚಿಸುತ್ತಿದ್ದು, ಬೆಂಗಳೂರು ಮೂಲದ ಕೆಇಎಫ್ ಇನ್‍ಫ್ರಾ ನಿರ್ಮಿಸಲಿದೆ. ಸಾಂಪ್ರದಾಯಿಕತೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಗೋಥಿಕ್ ಶೈಲಿಯಲ್ಲಿ ಗಡಿಯಾರ ಗೋಪುರದಲ್ಲಿ ಸಂಯೋಜಿಸಲಾಗುವುದು. ಗೋಪುರದ ನಾಲ್ಕು ಬದಿಗಳಲ್ಲಿ ದೊಡ್ಡದಾದ ಡಿಜಿಟಲ್ ಸ್ಕ್ರೀನ್‍ಗಳನ್ನು ಅಳವಡಿಸಲಿದ್ದು, ಪ್ರಮುಖ ವಿದ್ಯಮಾನಗಳ ಸಂದೇಶಗಳನ್ನು ಈ ಸ್ಕ್ರೀನ್‍ನಲ್ಲಿ ಬಿತ್ತರವಾಗಲಿದೆ ಎಂದು ಕಂಪನಿಯ ಆರ್ಕಿಟೆಕ್ಟ್ ಕೆ.ಪಿ ನಾಗರಾಜ್ ತಿಳಿಸಿದ್ದಾರೆ.

See also  ಮದ್ದೂರು ಆಸ್ಪತ್ರೆಯಲ್ಲಿ ಇದ್ದು ಇಲ್ಲವಾದ ಆ್ಯಂಬುಲೆನ್ಸ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು