ಮೈಸೂರು: ಎರಡು ಲಕ್ಷದ ವಾಚು ಧರಿಸಿ ಶೋಕಿ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಇಂದು ಸಿಎಂ ಸಿದ್ದರಾಯ್ಯ ಸುತ್ತೂರಿನಲ್ಲಿ ಕುಮಾರಸ್ವಾಮಿ ಬೇಕಿದ್ದರೆ ನನ್ನ ಕನ್ನಡಕ ಮತ್ತು ವಾಚನ್ನು ಐವತ್ತು ಸಾವಿರಕ್ಕೆ ಕೊಂಡುಕೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗೇಲಿ ಮಾಡಿದರು.
ಇದೇ ಸಂಧರ್ಭದಲ್ಲಿ ಹಿರಿಯ ಸಾಹಿತಿ ಸಾ.ಶಿ ಮರಳುಯ್ಯ ಅವರಿಗೆ ಸಂತಾಪ ಸೂಚಿಸಿದ ಸಿಎಂ ಸಿದ್ಧರಾಮಯ್ಯ ಸಾವಿನ ಬಳಿಕವೂ ದೇಹದಾನ ಮಾಡಿ ಸಾರ್ಥಕತೆ ಮೆರೆದಿರುವ ಅವರ ಆತ್ಮಕ್ಕೆ ಶಾಂತಿ ಚಿರಶಾಂತಿ ಬೇಡುತ್ತೇನೆ ಎಂದರು.
ದೇವದುರ್ಗ, ಬೀದರ್ ಹಾಗೂ ಹೆಬ್ಬಾಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಲಿದ್ದು ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇನ್ನೂ ರಾಜ್ಯದಲ್ಲಿ 20 ಕ್ಕೂ ಹೆಚ್ಚು ಜಿಲ್ಲಾ ಪಂಚಾಯಿತಿ, 100 ಕ್ಕೂ ತಾಲೂಕು
ಪಂಚಾಯಿತಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟರ್ಸ್ ಮೀಟ್ನಲ್ಲಿ ರಾಜ್ಯಕ್ಕೆ 3.08 ಲಕ್ಷ ಕೋಟಿ ರೂ ಹೂಡಿಕೆ ಬಂದಿದ್ದು, 123 ಒಡಂಬಡಿಕೆಗಳಾಗಿವೆ. ದೇಶದ ಪ್ರಮುಖ ಉದ್ಯಮಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಒಲವು ತೋರಿಸಿದ್ದಾರೆ. ಅದಕ್ಕೆ ತಕ್ಕಂತೆ ಪೂರಕ ಸೌಲಭ್ಯ ಒದಗಿಸಲು ಸರ್ಕಾರ ಸಿದ್ಧವಿದ್ದು, ಬೆಂಗಳೂರಿನ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೂ ಯೋಜನೆ ರೂಪಿಸಿರುವುದಾಗಿ ಹೇಳಿದರು.