ಮೈಸೂರು: ಸಿಯಾಚಿನ್ ಹಿಮಪಾತ ದುರಂತದಲ್ಲಿ ಮೈಸೂರು ಯೋಧನ ದುರಂತವನ್ನು ಮೈಸೂರು ಜಿಲ್ಲಾಧಿಕಾರಿಗಳು ಖಚಿತಪಡಿಸಿದ್ದು, ಮೃತ ಯೋಧನ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿ. ಶಿಖಾ ಶೀಘ್ರವೇ ಮೃತ ಪಾರ್ಥೀವ ಶರೀರವನ್ನು ತರಿಸುವುದಾಗಿ ಸಾಂತ್ವನ ಹೇಳಿದ್ದಾರೆ.
ಕಳೆದ ಆರು ದಿನಗಳ ಹಿಂದೆ ಜಮ್ಮು-ಕಾಶ್ಮೀರ ಸಿಯಾಚಿನ್ನ ಹಿಮಪಾತ ದುರಂತದಲ್ಲಿ ನಾಪತ್ತೆಯಾಗಿದ್ದ ಯೋಧರ ಪೈಕಿ ಮೈಸೂರಿನ ಯೋಧ ಸಾವನ್ನಪ್ಪಿರುವ ಬಗ್ಗೆ ಇಂದು ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಖಚಿತ ಪಡಿಸಿದ್ದಾರೆ. ಇಂದು ಮೃತ ಯೋಧನ ಹೆಚ್.ಡಿ.ಕೋಟೆ ಪಟ್ಟಣದ ನಿವಾಸಕ್ಕೆ ತೆರಳಿದ ಡಿಸಿ ಶಿಖಾ ಮೃತ ಕುಟುಂಬದವರಿಗೆ ಮೃತನ ಸಾವಿನ ಬಗ್ಗೆ ಖಚಿತ ಪಡಿಸಿದ್ದಾರೆ.
ಅಲ್ಲದೆ ಶೀಘ್ರವೇ ಮೃತ ಯೋಧನ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ತರಿಸಿಕೊಡುವ ಭರವಸೆ ನೀಡಿರುವ ಜಿಲ್ಲಾಧಿಕಾರಿಗಳು ಮೃತ ಕುಟುಂಬ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದ್ದಾರೆ.