ಮೈಸೂರು: ಸುತ್ತೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಸುತ್ತೂರು ಜಾತ್ರೆಯಲ್ಲಿ ಮಂಗಳವಾರ ನಡೆದ ದೇಸಿ ಆಟಗಳು ಗ್ರಾಮೀಣ ಜನತೆಯ ಮನರಂಜಿಸುವಲ್ಲಿ ಯಶಸ್ವಿಯಾಗಿದೆ.
ಕೆಸರು ಎನ್ನದು ಕಾಣದೆ ಓಡಿದ ಯುವಕರ ಹಿಂಡು, ಮಾರುದ್ದ ಅಗ್ಗ-ಜಗ್ಗಾಟದಲಿ ಎಳೆದು ಸುಸ್ತಾದ ಯುವತಿಯು, ದೇಸಿ ಕುಸ್ತಿ ಅಖಾಢದಲ್ಲಿ ಎದುರಾಳಿ ಮಣ್ಣು ಮುಕ್ಕಿಸಿದ ಪೈಲ್ವಾನರು, ಲಕ್ಷ ಲಕ್ಷ ಬೆಲೆ ಬಾಳುವ ಆಕರ್ಷಕ ಜೋಡೆತ್ತುಗಳು ಹೀಗೆ ದೇಸಿ ಆಟಗಳೊಟ್ಟಿಗೆ ಗ್ರಾಮೀಣ ರಂಗು ಜಲಕ್ ಕಂಡಿದ್ದು ಸುತ್ತೂರು ಜಾತ್ರೆಯಲ್ಲಿ. ರಸಗೊಬ್ಬರ ಮೂಟೆಯನ್ನು ಹೊತ್ತು ಸ್ಪರ್ಧೆಗಳಿದ ಮಂದಿ ಓಡಿ ಸುಸ್ತಾದರು. ಇನ್ನೂ ಕೆಸರನ್ನು ಲೆಕ್ಕಿಸದೇ ಹಠಕ್ಕೆ ಬಿದ್ದ ಯುವಕರು ಬಿದ್ದು ಎದ್ದು ಓಡಿ ನೆರೆದಿದ್ದವರಿಗೆ ರಂಜನೆಯ ರಸದೌತಣ ನೀಡಿದರು.
ತೋಳಿನಿಂದ ಗುಂಡು ಕಲ್ಲು ಎತ್ತಿ ಹಾಗೂ ಬಾಯಲ್ಲಿ ಮರದ ದಿಮ್ಮಿಯನ್ನು ಎತ್ತಿದ ಶೌರ್ಯ, ಎದುರಾಗಿಯನ್ನ ಪಟ್ಟಾ ಕುಸ್ತಿಯಲ್ಲಿ ಮಣ್ಣು ಮುಕ್ಕಿ ಶೌರ್ಯ ಪ್ರದರ್ಶಿಸಿದ ಗ್ರಾಮೀಣ ಭಾಗದ ಜನತೆ ಶೌರ್ಯಕ್ಕೆ ಆಕರ್ಷಕ್ಕೆ ಒಳಗಾದವರೇ ಹೆಚ್ಚು. ಮಹಿಳೆಯರ ಅಗ್ಗ-ಜಗ್ಗಾಟ, ಮಕ್ಕಳ ಬುಗುರಿ, ಕುಂಟೆಬಿಲ್ಲೆ, ಚದುರಂಗದಂತಹ ದೇಶಿ ಆಟಗಳ ಮನರಂಜನ ರಸದೌತಣವನ್ನೇ ಸುತ್ತೂರು ಜಾತ್ರೆಯಲ್ಲಿ ಗಮನ ಸೆಳೆಯುತ್ತಿದೆ. ಲಕ್ಷಾಂತರೂ ರೂ ಮೌಲ್ಯ ಬೆಲೆ ಬಾಳುವ ಜೋಡೆತ್ತುಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುಗಳಾಗಿ ಎಲ್ಲರನ್ನು ತಮ್ಮತ್ತ ಸೆಲೆಯುತ್ತಿವೆ.