ಮೈಸೂರು: ಸಿಯಾಚಿನ್ ಹಿಮಾಪಾತದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿವಿಧ ಸಂಘಟನೆಗಳ ನೂರಾರು ಮಂದಿ ಹಾಗೂ ನಿವೃತ್ತ ಸ್ವತಂತ್ರ ಯೋಧರು, ನಿವೃತ್ತ ಯೋಧರ ಕುಟುಂಬಗಳು ಹುತಾತ್ಮ ಯೋಧ ಹನುಮಂತಪ್ಪ ಹಾಗೂ ಎಲ್ಲಾ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭಾವಪೂರ್ಣ ನಮನ ಸಲ್ಲಿಸಿದರು. ಅಲ್ಲದೆ ನಗರ ವಿವಿಧ ವೃತ್ತಗಳಲ್ಲಿಯೂ ಸಹ ವೀರ ಯೋಧನ ಭಾವಚಿತ್ರಕ್ಕೆ ಹಲವು ಸಂಘಟನೆಗಳು ವಂದನೆ ಅರ್ಪಿಸಿದವು. ಅಲ್ಲದೆ ಜಿಲ್ಲೆಯ ಹಲವು ತಾಲೂಕು ಪಟ್ಟಣಗಳಲ್ಲೂ ರಾತ್ರಿಯೇ ಮೇಣದ ಬತ್ತಿ ಹಿಡಿದು ವೀರಯೋಧ ಮತ್ತೆ ಹುಟ್ಟಿ ಬಾ ಎಂಬ ನಮನ ನಡಿಗೆಯನ್ನು ಸಹ ನಡೆಯಲಾಯಿತು.