ಮೈಸೂರು: ಸಿಎಂ ದುಬಾರಿ ಮೊತ್ತದ ವಾಚ್ನ್ನು ಮಾರಿ ಸೈನಿಕರ ಕುಟುಂಬದವರಿಗೆ ನೀಡಲಿ ಎಂಬ ಕಾಂಗ್ರೆಸ್ನ ಹಿರಿಯ ಮುಖಂಡ ಜನಾರ್ಧನ್ ಪೂಜಾರಿ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ಉದ್ಬೂರು ಹೆಲಿಪ್ಯಾಡ್ನಲ್ಲಿ ತಿಳಿಸಿದ್ದಾರೆ.
ಜಿಪಂ-ತಾಪಂ ಚುನಾವಣಾ ಪ್ರಚಾರಕ್ಕೆ ನಾಲ್ಕು ದಿನಗಳ ಕಾಲ ಮೈಸೂರಿಗೆ ಆಗಮಿಸಿದ ಸಿಎಂ ಸಿದ್ಧರಾಮಯ್ಯ ಉದ್ಬೂರು ಹೆಲಿಪ್ಯಾಡ್ನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ಮೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಹಾಗೂ ತಾಪಂ-ಜಿಪಂ ಕಾಂಗ್ರೆಸ್ ಪಕ್ಷದ ಸೋಲಿನ ಹೊಣೆಯನ್ನು ಒಬ್ಬರೇ ಹೊರಲ್ಲ ಸಾಮೂಹಿಕವಾಗಿ ಹೊರಲಾಗುವುದು. ಅಲ್ಲದೆ ಜಿಲ್ಲಾ ಉಸ್ತುವರಿ ಸಚಿವರನ್ನು ಸೋಲಿಗೆ ಹೊಣೆ ಮಾಡುವುದಿಲ್ಲ ಎಂದ ಅವರ ಮೂರು ವಿಧಾನ ಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸುತ್ತದೆ ಎಂದರು.
ರಾಜ್ಯದ 30 ಜಿಲ್ಲಾ ಪಂಚಾಯಿತಿಗಳ ಪೈಕಿ ಕಾಂಗ್ರೆಸ್ 20 ಕ್ಕೂ ಹೆಚ್ಚು ಜಿಲ್ಲಾ ಪಂಚಾಯಿತಿಗಳಲ್ಲಿ ಹಾಗೂ 100 ಕ್ಕೂ ಹೆಚ್ಚು ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಸಿಎಂ ಸಿದ್ದು, ಮೊದಲ ಬಾರಿಗೆ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರ ಹಿಡಿಯಲಿದೆ ಎಂದರು.