ಮೈಸೂರು: ಮದುವೆ ಅನ್ನೋದು ಇವತ್ತು ಕುಟುಂಬಗಳನ್ನೂ ಸಾಲದ ಸುಳಿಗೂ ತಳ್ಳುವ ದಾರಿ ಹಿಡಿದಿರುವ ಇತಂಹ ಸಂಧರ್ಭದಲ್ಲಿ ಇಬ್ಬರು ಉನ್ನತ ಪದವಿ ಪಡೆದ ವಿದ್ಯಾವಂತರು ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಮದುವೆ ಮಾಡಿಕೊಳ್ಳುವ ಮೂಲಕ ಯಾವುದೇ ದುಂದುವೆಚ್ಚವಲ್ಲಿದೆ ಇತರಿಗೆ ಮಾದರಿಯಾಗಿದ್ದಾರೆ.
ಅಲ್ಲಿ ಮಂತ್ರ ಘೋಷಗಳಿಲ್ಲ, ವಾದ್ಯ-ಪುರೋಹಿತರಿಲ್ಲ, ರಾಹು-ಗುಳಿಕಾಲದ ಭಯವಂತೂ ಇಲ್ಲವೇ ಇಲ್ಲ, ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಪಠಣದ ಮೂಲಕ ಹೊಂಬಾಳೆ ತೆರೆದು ಸತಿಪತಿಗಳಾದ ಉಪನ್ಯಾಸಕರ ವಿಭಿನ್ನ ಮದುವೆಗೆ ಸಾಕ್ಷಿಯಾಯಿತು ಮೈಸೂರು. ಪಿಎಚ್ ಡಿ ಪದವಿ ಪಡೆದು ಅತಿಥಿ ಉಪನ್ಯಾಕರಾಗಿರುವ ಹರೀಶ್ ಕೆ.ಆರ್. ನಗರ ತಾಲೂಕಿನ ಸಾಲಕೊಪ್ಪಲಿನವರು. ಎಂಕಾಂ ಪಧವೀದರೇಯಾಗಿರುವ ಲಾವಣ್ಯ ಮೂಲತಃ ತುಮಕೂರು ಜಿಲ್ಲೆಯವರಾಗಿದ್ದು, ತಂದೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಇವರು ಮೈಸೂರಿನ ಹೆಬ್ಬಾಳದಲ್ಲಿ ವಾಸವಾಗಿದ್ದಾರೆ.
ಇವರಿಬ್ಬರ ಕುಟುಂಬದವರು ಮಾತುಕತೆ ಮೂಲಕ ತಮ್ಮ ಮಕ್ಕಳ ಅಭಿಲಾಷೆಯಂತೆ ಕುವೆಂಪು ಅವರ ಮಂತ್ರ ಮಾಗಲ್ಯದ ಮೂಲಕ ಮದುವೆಯಾಗಲು ನಿರ್ಧರಿಸಿ ಇಂದು ಮೈಸೂರಿನ ಹೆಬ್ಬಾಳದ ಸಿಐಟಿಬಿ ಕಲ್ಯಾಣ ಮಂಟಪದಲ್ಲಿ ಯಾವುದೇ ಪುರೋಹಿತರಿಲ್ಲದೆ, ಮಂತ್ರ-ಘೋಷಗಳಿಲ್ಲ, ಅದ್ಧೂರಿ- ಆಡಂಬರತನಗಳಿಲ್ಲದೆ ಹಾಗೂ ಯಾವುದೇ ರಾಹುಕಾಲ-ಗುಳಿಕಾಲಗಳ ಭಯವಿಲ್ಲದೆ ಕಲ್ಪವೃಕ್ಷ ತೆಂಗಿನ ಮರದ ಹೊಂಬಾಳೆಯನ್ನು ತೆರೆಯುವ ಮೂಲಕ ಹೊಸ ಬಾಳಿಗೆ ಕಾಲಿಟ್ಟರು. ಈ ಸರಳ ಮದುವೆಯಲ್ಲಿ ರೈತ ಸಂಘದ ಮುಖಂಡ ಶಾಸಕ ಪುಟ್ಟಣ್ಣಯ್ಯ ಸೇರಿದಂತೆ ಹಲವಾರು ರೈತ ಮುಖಂಡರು ಹಾಜರಿದ್ದು, ಕುವೆಂಪು ಅವರ ಮಂತ್ರ ಮಾಂಗಲ್ಯವನ್ನು ಪಠಣವಾಗುವ ಮೂಲಕ ವಧು-ವರರಿಗೆ ಹಸಿರು ಗಿಡ ನೀಡುವ ಮೂಲಕ ಬಾಳು ಹಸನಾಗಿರಲಿ ಎಂದು ಹರಸಿದರು.