ಮೈಸೂರು: ಭಾರತೀಯ ವಾಯುಸೇನೆ ಖಾಲಿ ಇರುವ ಹುದ್ದೆಗಳ ನೇಮಕಾತಿ ರ್ಯಾಲಿಗೆ ವಿದ್ಯಾರ್ಥಿಗಳ ದಂಡೇ ಹರಿದು ಬಂದಿತು.
ಮೈಸೂರಿನ ನಜರ್ ಬಾದ್ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದರು. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಬೆಳಗಾವಿ, ತುಮಕೂರು, ಗದಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ವಿದ್ಯಾಥಿಗಳ ಸಮೂಹವೇ ನೆರದಿದ್ದರು.
ಆಟೋ ಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೈನಿಂಗ್ ಇನ್ಸ್ಟ್ರಕ್ಟರ್, ಐಎಎಫ್(ಪೊಲೀಸ್) ಮತ್ತು ಮೆಡಿಕಲ್ ಅಸಿಸ್ಟೆಂಟ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದ್ದು, ದೈಹಿಕ ಪರೀಕ್ಷಿಯನ್ನು ಬಿಗಿಪೊಲೀಸ್ ಬಂದೋಬಸ್ತ್ ನಲ್ಲಿ ನಡೆಸಲಾಯಿತು. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಲಿಖಿತ ಪರೀಕ್ಷೆ ಬಳಿಕ ನೇಮಕ ನಡೆಯುತ್ತಿದೆ.