ಮೈಸೂರು: ಸ್ಮೃತಿ ಇರಾನಿ ವಿಶ್ವವಿದ್ಯಾಲಯಗಳ ಬಗ್ಗೆ ಮಾತನಾಡುವಾಗ ನಾಲಗೆಯಲ್ಲಿ ಹಿಡಿತವಿರಲಿ ಎಂದು ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸ್ ಹೇಳಿದರು.
ನಿನ್ನೆ ಲೋಕಸಭೆಯಲ್ಲಿ ಜವಹಾರಲಾಲ್ ನೆಹರು ವಿವಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ದುರ್ಗಾದೇವಿಯನ್ನು ರಾಕ್ಷಸಿಯಾಗಿ ಹಾಗೂ ಮಹಿಷಾಸುರನನ್ನು ದೇವರ ರೂಪದಲ್ಲಿ ಬಿಂಬಿಸುವ ಕರಪತ್ರಗಳನ್ನು ಹಂಚುತ್ತಿದ್ದಾರೆ ಎಂದು ಸಂಸತ್ ಹೇಳಿ ವಿವಾದಕ್ಕೀಡಾಗಿದ್ದರು. ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸ್ ಕೇಂದ್ರ ಸಚಿವೆ ಸ್ಥಾನದಲ್ಲಿರುವ ಸ್ಮೃತಿ ಇರಾನಿ ಜವಬ್ದಾರಿಯಿಂದ ಮಾತನಾಡಲಿ ಎಂದರು.
ಭಾರತದಂತಹ ಜ್ಯಾತ್ಯಾತೀತ ರಾಷ್ಟ್ರದಲ್ಲಿ ಶಾಂತಿ ಸ್ಥಾಪನೆ ಮುಖ್ಯ. ರಾಷ್ಟ್ರದ ಸಮಗ್ರತೆ, ಏಕತೆ ದೃಷ್ಟಿಯಿಂದ ಕೇಂದ್ರದ ಮಂತ್ರಿಸ್ಥಾನದಲ್ಲಿರುವ ಸ್ಮೃತಿ ಇರಾನಿಯವರು ಧಾರಾವಾಹಿಗಳಲ್ಲಿ ಡೈಲಾಂಗ್ ರೀತಿಯಲ್ಲಿ ಈ ತರಹದ ಧರ್ಮ ವಿರೋಧಿ ವಿಚಾರಗಳ ಬಗ್ಗೆ ಮಾತನಾಡುವಾಗ ಮೈ ಮರೆಯಬಾರದು. ಇಂತಹ ಸೂಕ್ಷ್ಮ ವಿಚಾರಗಳನ್ನು ಬಹಿರಂಗವಾಗಿ ತಮ್ಮ ಪಕ್ಷದ ರಾಜಕೀಯ ಲಾಭಕ್ಕಾಗಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.