ಮೈಸೂರು: 2007 ರಲ್ಲಿ ಮೈಸೂರಿನ ನಡೆದ ಮಂಡ್ಯ ನಗರ ಸಭೆ ಮಾಜಿ ಸದಸ್ಯನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಮೈಸೂರಿನ 6 ನೇ ಜಿಲ್ಲಾ ಮತ್ತು ಅಪರ ಸತ್ರಾ ನ್ಯಾಯಾಲಯ ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2007 ರಲ್ಲಿ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಾಸ್ಯಂಗ ಮಾಡುತ್ತಿದ್ದ ಮಗನನ್ನು ನೋಡಲು ಬಂದ ಮಂಡ್ಯ ನಗರಸಭೆ ಮಾಜಿ ಸದಸ್ಯ ನಾಗೇಂದ್ರ ಮೇಲೆ ಮೈಸೂರಿನ ರಾಮಕೃಷ್ಣ ಆಶ್ರಮದ ಮುಂಭಾಗವೇ ಶಿವು, ವಿನೋದ್, ರಾಮಚಂದ್ರ ಮತ್ತು ಬಸವರಾಜು ಎಂಬ ಆರೋಪಿಗಳು ದಾಳಿ ನಡೆಸಿ ಹತ್ಯೆ ಮಾಡಿದ್ದರು.
ಅಂದು ನಾಗೇಂದ್ರ ಅವರ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರಿನ ವಿ.ವಿಪುರಂ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಹಿನ್ನಲೆಯಲ್ಲಿ ಅಂದು ಜಾಮೀನಿನಿಂದ ಹೊರಬಂದಿದ್ದ ಆರೋಪಿಗಳ ಪ್ರಕರಣವನ್ನು ಇಂದು ತೀರ್ಪು ನೀಡಿದ 6 ನೇ ಜಿಲ್ಲಾ ಸತ್ರನ್ಯಾಯಾಲಯ ನಾಲ್ವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ. ಕೊಲೆ ಆದ ನಾಗೇಂದ್ರ ಅವರ ಪರವಾಗಿ ಸರ್ಕಾರಿ ಅಭಿಯೋಜಕ ಆನಂದ್ ಎಸ್ ಹೊಸ್ಮನಿ ವಾದ ಮಂಡಿಸಿದ್ದರು. ನ್ಯಾಯಾದೀಶ ಪಾವಲೆ ಶಿಕ್ಷೆ ಪ್ರಕಟಿಸಿದ್ದಾರೆ.