News Kannada
Wednesday, July 06 2022

ಮೈಸೂರು

ಮೋರಿಯೊಂದರಲ್ಲಿ ಸಂಶಯಾಸ್ಪದವಾಗಿ ಸಿಕ್ಕ 2.60 ಕೋಟಿ ಹಣ - 1 min read

Photo Credit :

ಮೋರಿಯೊಂದರಲ್ಲಿ ಸಂಶಯಾಸ್ಪದವಾಗಿ ಸಿಕ್ಕ 2.60 ಕೋಟಿ ಹಣ

ಮೈಸೂರು: ನಗರದ ಶ್ರೀಮಂತರ ಬಡಾವಣೆಯ ಉನ್ನತಿನಗರದ ಸ್ಕೇಟಿಂಗ್ ಗ್ರೌಂಡ್ ಬಳಿಯ ಮೋರಿಯೊಂದರಲ್ಲಿ ಕಳೆದ ಸೋಮವಾರ ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದವರಿಗೆ 2.60 ಕೋಟಿ ಹಣ ಅನಾಮಧೇಯ ಹಣದ ಚೀಲ ಸಿಕ್ಕಿದ್ದು, ಬರೋಬ್ಬರಿ ಸಾವಿರ ರೂ ನೋಟಿನ ಮುಖ ಬೆಲೆಯ 2.60 ಕೋಟಿ ಹಣದ ಕಂತೆ ಕಂಡು ನಿಬ್ಬೆರಾಗಗಾಗಿದ್ದಾರೆ.


ಒಬ್ಬೊಬ್ಬರಂತೆ ಸುಮಾರು 10 ರಿಂದ 15 ಮಂದಿ ಗುಂಪು ಸೇರಿ ಹಣ ಯಾರದ್ದು ಎಂದು ಹುಡುಕಾಡಿ ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿದ್ದಾರೆ. ಪೊಲೀಸರ ಬರುವ ವೇಳೆಗಾಗಲೇ ಕೊನೆಗೆ ಸ್ಥಳದಲ್ಲಿದ್ದ ಮಂದಿ ಪೈಕಿ ಎಂಟು ಮಂದಿ ಮಾತ್ರ ಉಳಿದುಕೊಂಡಿದ್ದಾರೆ.  ಅಷ್ಟರಲ್ಲಿ ಸಾರ್ವಜನಿಕರ ಅಲ್ಲಿನ ಹಣವನ್ನು ಎಣಿಕೆ ಮಾಡಿ ಬಂದ ಗರುಡ ವಾಹನದಲ್ಲಿ ಒಬ್ಬ ಎಎಸ್ಐ ಮತ್ತು ಮೂವರು ಪೇದೆಗಳಿಗೆ ಹಣವನ್ನು ಒಪ್ಪಿಸಿದ್ದಾರೆ.

ಪೊಲೀಸರು ಹಣವನ್ನು ಪಡೆದುಕೊಂಡು ಸ್ಥಳದಲ್ಲೇ ಸಾಮಾನ್ಯ ಮುಚ್ಚಳಿಕೆ ಪತ್ರ ಬರೆದು ಸ್ಥಳದಲ್ಲಿ ಇದ್ದ ಎಲ್ಲರ ಸಹಿ ಪಡೆದು ಈ ಬಗ್ಗೆ ವಿಚಾರಣೆ ಮಾಡಿ ನಿಮಗೆ ತಿಳುಸುತ್ತೇವೆಂದು ಹೇಳಿ ಎಲ್ಲರನ್ನು ಕಳುಹಿಸಿದ್ದಾರೆ.  ಘಟನೆ ನಡೆದು 5 ದಿನಗಳು ಕಳೆದಿವೆ ದುಡ್ಡು ಯಾರದೆಂಬ ಮಾಹಿತಿಯೇ ಆಗಲಿ ಅಥವಾ ಈ ಪ್ರಕರಣದ ಬಗ್ಗೆಯೇ ಆಗಲಿ ಯಾವುದೇ ಮಾಧ್ಯಮಗಳಿಗೆ ಬಾರದಿರುವುದೇ ದೊಡ್ಡ ಪ್ರಶ್ನೆಯಾಗಿದೆ. ಅಂದು ಹಣವನ್ನು ಪೊಲೀಸರಿಗೆ ಒಪ್ಪಿಸಿದ ಯಾರೊಬ್ಬರಿಗೂ ಪೊಲೀಸರು ಕರೆ ಮಾಡಿ ಹಣದ ಬಗ್ಗೆ ಮಾಹಿತಿ ನೀಡದಿರುವುದೇ ಎಲ್ಲರ ಅನುಮಾನಕ್ಕೂ ಕಾರಣವಾಗಿದೆ. ಆದರೆ ವ್ಯಾಪಾರಸ್ಥರಾಗಿರುವ ಮಂದಿ ಇದಾವುದನ್ನೂ ಕೇಳದೆ ನಮಗೆಕೇಂದು ಕೆಲವರು ಸುಮ್ಮನಾಗಿದ್ದಾರೆ.

ಈ ಬಗ್ಗೆ ಅಂದು ಹಣವನ್ನು ಪೊಲೀಸರಿಗೆ ಒಪ್ಪಿಸಿದವರ ಪೈಕಿ ತಮ್ಮ ಹೆಸರು ಹೇಳಲಿಚ್ಛಿಸದೆ ಈ ಹಣ ಬಗ್ಗೆ ಕೇಳಿದಾಗ ಈ ಬಗ್ಗೆ ಪೊಲೀಸರನ್ನು ಕೇಳಿದ್ದಕ್ಕೆ ಅಂದು ಸಿಕ್ಕ ಹಣ ಯಾರದೆಂದು ತಿಳಿದು ಬಂದಿಲ್ಲ. ಹಾಗಾಗಿ ಆ ಹಣವನ್ನು ಮುಖ್ಯಮಂತ್ರಿಗಳ ನಿಧಿಗೆ ಹಾಕಿರುವುದಾಗಿ ಹೇಳುತ್ತಿದ್ದಾರೆ. ಆದರೆ ಅದನ್ನು ಖಚಿತವಾಗಿ ಹೇಳುತ್ತಿಲ್ಲ. ದಯವಿಟ್ಟು ನಾನು ಹೇಳಿದೆ ಎಂದು ಹೇಳಬೇಡಿ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಭಯದಲ್ಲೇ ಹೇಳುತ್ತಾರೆ. ಇದರ ಬಗ್ಗೆ ಪೊಲೀಸರೇ ಅಂದು ಪಡೆದ ಹಣ ಏನಾಯ್ತು ಎಂಬುದನ್ನು ಈಗಲಾದರೂ ಸ್ಪಷ್ಟಪಡಿಸಬೇಕಿದೆ.

See also  ಪ್ಲೈವುಡ್ ಕಾರ್ಖನೆಯಲ್ಲಿ ಅಗ್ನಿ ಅವಘಡ: ಬೆಂಕಿಗಾಹುತಿಯಾದ ಪ್ಲೈವುಡ್ ಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು