News Kannada
Wednesday, October 05 2022

ಮೈಸೂರು

ರಸ್ತೆ ಅಪಘಾತ: ಜನರ ಕಾಲಾಹರಣಕ್ಕೆ ಮೂವರು ಬಲಿ - 1 min read

Photo Credit :

ರಸ್ತೆ ಅಪಘಾತ: ಜನರ ಕಾಲಾಹರಣಕ್ಕೆ ಮೂವರು ಬಲಿ

ಮೈಸೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೂಂಡು ನಮ್ಮನ್ನ  ಆಸ್ಪತ್ರೆ ಸೇರಿಸಿ ಎಂದು ಅಂಗಲಾಚುತ್ತಿದರು ಸುತ್ತಲೂ ಸೇರಿದ ಜನ ನಿಮ್ಮ ಹೆಸರೇನು ನಿಮ್ಮ ಯಾವುರೂ ಮೊಬೈಲ್ ನಂಬರ್ ಎನು ಎಂದು ಮೊಬೈಲ್ ನಲ್ಲಿ ಆಕ್ಸಿಡೆಂಟ್ ವಿಡಿಯೋ ಮಾಡುತ್ತ ಒಂದು ಗಂಟೆಗಳ ಕಾಲ ಕಾಲಾಹರಣ ಮಾಡಿ ಮೂರು ಜೀವಗಳನ್ನು ಬಲಿ ತೆಗೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.


ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಹುಣುಸೂರು-ಹೆಚ್.ಡಿ ಕೋಟೆ ಮದ್ಯ ಕೊಲಾಗಾಲ ಸಮಿಪ ಈ ಅಪಘಾತ ನಡೆದಿದ್ದು ಗ್ರಾಮದಲ್ಲಿ ನಡೆಯುತ್ತಿದ ಹಬ್ಬದೂಟಕ್ಕೆ ಸ್ನೇಹಿತರ ಮನೆಗೆ ಒಂದೇ ಬೈಕ್ ನಲ್ಲಿ ಮೂರು ಜನ ಹಬ್ಬದೂಟಕ್ಕೆ ಹೋಗುತ್ತಿದ್ದಾಗ ಮುಂಭಾಗದಿಂದ ಬಂದ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮುಂಭಾಗದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೆ ಸಾವ್ನನ್ನಪಿದ್ದು ಇನ್ನಿಬ್ಬರಲ್ಲಿ ಒಬ್ಬ ಕಾಲು ತುಂಡಾಗಿ ಒಂದು ಗಂಟೆಗಳ ಕಾಲ ರಸ್ತೆಯಲ್ಲೆ ಬಿದ್ದು ಪ್ರಾಣ ಬಿಟ್ಟ. ಮತ್ತೊಬ್ಬ ತೀವ್ರವಾಗಿ ರಕ್ತಸ್ರಾವವಾಗಿ ಪ್ರಾಣಬಿಟ್ಟ. ಹೀಗೆ ಅಪಘಾತದಲ್ಲಿ ಪ್ರಾಣ ಬಿಟ್ಟವರು ಹುಣುಸೂರು ತಾಲ್ಲೂಕಿನ ಜೋಗನಹಳ್ಳಿಯ ಮಹೇಶ (35) ರಮೇಶ(45) ಮಂಜುನಾಥ (40).

ಒಂದು ಘಂಟೆ ಕಾಲ ಕಳೆದ ಜನ
ಅಪಘಾತವಾಗಿ ರಕ್ತಸ್ರಾವದಲ್ಲಿ ಒದ್ದಾಡುತ್ತಿದ ಬೈಕ್ ಸಾವರನನ್ನು ಒಂದು ಗಂಟೆ ಹೆಚ್ಚು ಕಾಲ ಯಾವುದೇ ಅಂಬುಲೆನ್ಸ್ ಗೆ ಕರೆ ಮಾಡದೆ ವಿಳಾಸ ಕೇಳುತ್ತಾ ಹೆಸರು ಕೇಳುತ್ತಾ ಮೊಬೈಲ್ ಕೇಳುತ್ತಾ ಅಪಘಾತ ದೃಶ್ಯವನ್ನು ಮೊಬೈಲ್ ನಲ್ಲೆ ಸೆರೆಹಿಡಿಯುತ್ತ ಒಂದು ಘಂಟೆಗೂ ಹೆಚ್ಚು ಕಾಲಾಹರಣ ಮಾಡುವ ಬದಲು ತಕ್ಷಣ ಅಂಬುಲೆನ್ಸ್ ಗೆ ಕರೆ ಮಾಡಿದ್ದರೆ ಇಬ್ಬರ ಜೀವವನ್ನು ಉಳಿಸಬಹುದಿತ್ತು.

See also  ಮಸಾಜ್ ನೆಪದಲ್ಲಿ ಗ್ರಾಹಕರ ಚಿನ್ನಾಭರಣ ಲೂಟಿ: ಕೇರಳ ಮೂಲದ ವ್ಯಕ್ತಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು