News Kannada
Thursday, September 29 2022

ಮೈಸೂರು

ಮಹಾರಾಜ ಯಧುವೀರ್ ಮದುವೆ ದಿನಾಂಕ ಬದಲು - 1 min read

Photo Credit :

ಮಹಾರಾಜ ಯಧುವೀರ್ ಮದುವೆ ದಿನಾಂಕ ಬದಲು

ಮೈಸೂರು: ಮೇ ತಿಂಗಳಲ್ಲಿ ನಿಗಧಿಯಾಗಿದ್ದ ಮೈಸೂರಿನ ಮಹಾರಾಜ ಯಧುವೀರ್ ಅವರ ಮದುವೆ ನಕ್ಷತ್ರ ಗೋತ್ರ ಸರಿಯಿಲ್ಲದ ಕಾರಣ ಜೂನ್ ತಿಂಗಳಿಗೆ ದಿನಾಂಕ ಬದಲಾಗಿದೆ ಎಂದು ಅರಮನೆ ಮೂಲಗಳು ಖಚಿತ ಪಡಿಸಿವೆ.

ಪೂರ್ವ ನಿಗದಿಯಾದಂತೆ ಮೇ 8 ರಂದು ಐದು ದಿನಗಳ ಕಾಲ ಮೈಸೂರಿನ ರಾಜಮನೆತನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮದುವೆ  ರಾಜಗುರುಗಳ ಹಾಗೂ ಕುಲಗುರುಗಳ ಸಲಹೆಯಂತೆ ಜೂನ್ ತಿಂಗಳ 10 ಅಥವಾ 27 ರಂದು ನಡೆಸಲು ತೀರ್ಮಾನಿಸಲಾಗಿದ್ದು, ಮದುವೆಯೂ ಮೈಸೂರಿನ ಅಂಬಾವಿಲಾಸ ಅರಮನೆಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಇದೇ ಕಲ್ಯಾಣ ಮಂಟಪದಲ್ಲಿ 1976 ರಲ್ಲಿ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಓಡೆಯರ ಮದುವೆಯಾಗಿತ್ತು. ಅದೇ ರೀತಿ ಮೈಸೂರಿನ ಅರಮನೆಯ 27 ರಾಜವಂಶದ ಮಹಾರಾಜರಾಗಿರುವ ಯದುವೀರರು ರಾಜಸ್ತಾನದ ರಾಜೋಟ್ ರಾಜ ಮನತೆತನದ ರಾಜಕುಮಾರಿ ತ್ರಿಶಿಕಾಕುಮಾರಿಯನ್ನು ವರಿಸಲಿದ್ದಾರೆ.

ಮದುವೆಗೂ ಮೊದಲು ಮೈಸೂರು ರಾಜ ಮನೆತನದ ರಾಜಗುರುಗಳಾದ ಶೃಂಗೇರಿಯ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದು ಮೊದಲ ಆಮಂತ್ರಣ ಪತ್ರಕ್ಕೆ ಪೂಜೆ ನಡೆಸಿ ನಂತರ ರಾಜಗುರುಗಳಿಗೆ ಗೌರವ ಕಾಣಿಕೆ ನೀಡಿ ನಂತರ ಮೈಸೂರಿನ ಮಹಾಸಂಸ್ಥಾನದ ಕುಲಗುರುಗಳಾದ ಪರಕಾಲ ಗುರುಗಳ ನೇತೃತ್ವದಲ್ಲಿ ಜೂನ್ ತಿಂಗಳ ಐದು ದಿನಗಳ ಕಾಲ ಅರಮನೆಯಲ್ಲಿ  ಅದ್ಧೂರಿ ಮದುವೆ ನಡೆಯಲಿದೆ.
ನಂತರ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ಧೂರಿ ಆರಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಅರಮನೆಯ ಮೂಲಗಳು ತಿಳಿಸಿವೆ.

See also  ಬೇಲದಕುಪ್ಪೆಯಲ್ಲಿ ನವಶಿಲಾಯುಗದ ಕಲ್ಲಿನಾಯುಧಗಳು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು