News Kannada
Tuesday, September 27 2022

ಮೈಸೂರು

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಶಾಂತಿಯುತ - 1 min read

Photo Credit :

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಶಾಂತಿಯುತ

ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಗಣ್ಯರು, ಸಾಹಿತಿಗಳು, ಮಠಾಧೀಶರು ಮತದಾನ ಮಾಡಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಮೈಸೂರು ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವೃದ್ಧರು ಸೇರಿದಂತೆ ಪದವೀಧರರು ಕಚೇರಿಗೆ ಹೋಗುವ ಮುನ್ನ ಬೆಳಗ್ಗೆಯೇ ಸರತಿ ಸಾಲಿನಲ್ಲಿ ನಿಂತು ತುಂತುರು ಮಳೆ ನಡುವೆಯೇ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.

ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದು ತುಂತುರು ಹನಿ ಧರೆಗೆ ಬರುತ್ತಿದ್ದರೂ ಪದವೀಧರರು ಲಘು ಬಗೆಯಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಪದವೀಧರ ಕ್ಷೇತ್ರ ಮೈಸೂರು, ಹಾಸನ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಿದೆ. ಮೈಸೂರು ಜಿಲ್ಲೆ 56,075, ಅತಿ ಹೆಚ್ಚು ಮತದಾರರಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಕಡಿಮೆ 8,832 ಮತದಾರರಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 11,866 ಹಾಸನ ಜಿಲ್ಲೆಯಲ್ಲಿ 25,673 ಮತದಾರರಿದ್ದು, ಒಟ್ಟು 120446 ಮಂದಿ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಹಿಳಾ ಮತದಾರರು 37,265, ಪುರಷ ಮತದಾರರು 83,175 ಇದ್ದಾರೆ. ಆಕ್ಸಿಲೇಟರಿ ಮತಗಟ್ಟೆ ಸೇರಿದಂತೆ 4 ಜಿಲ್ಲೆಗಳಲ್ಲಿ 130 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹಾಸನದಲ್ಲಿ 26, ಮಂಡ್ಯದಲ್ಲಿ 34, ಮೈಸೂರಿನಲ್ಲಿ 59 ಹಾಗೂ ಚಾಮರಾಜನಗರದಲ್ಲಿ 11 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಬಿಜೆಪಿಯ ರವಿಶಂಕರ್, ಕಾಂಗ್ರೆಸ್ ನ ಡಾ.ರವೀಂದ್ರ, ಜೆಡಿಎಸ್ ನಿಂದ ಕೆ.ಟಿ.ಶ್ರೀಕಂಠೇಗೌಡ, ಪಕ್ಷೇತರ ಅಭ್ಯರ್ಥಿಗಳಾದ ವಾಟಾಳ್ ನಾಗರಾಜ್, ಪ್ರೊ.ಕೆ.ಎಸ್.ಭಗವಾನ್, ಎಸ್.ಪಿ.ನಾಗಭೂಷಣ್ ಆರಾಧ್ಯ, ವೈ.ಎಸ್.ಸಿದ್ದರಾಜು, ಆರ್.ಕೆ.ಗೋವಿಲ್, ಬೆಂಗಳೂರಿನ ರವಿಶಂಕರ್, ನಾಗಮಂಗಲ ಮಂಜು, ಪಿ.ಎಸ್.ಯಡಿಯೂರಪ್ಪ, ಡಾ.ಕೃಷ್ಣಮೂರ್ತಿ ಚಮರಂ, ರಾಜೀವ್ ಶ್ರೀರಂಗರಾಜು, ವಿಶ್ವನಾಥ್, ವೀರಭದ್ರಸ್ವಾಮಿ ಚುನಾವಣಾ ಕಣದಲ್ಲಿದ್ದು, ಮತದಾರರು ಇವರ ಹಣೆ ಬರಹವನ್ನು ನಿರ್ಧರಿಸಲಿದ್ದಾರೆ. ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ. ಬಹುತೇಕ 4 ಜಿಲ್ಲೆಗಳಲ್ಲೂ ಶಾಂತಿಯುತ ಮತದಾನ ನಡೆಯುತ್ತಿದೆ.

ಮತ ಪೆಟ್ಟಿಗೆಗೆ ಬಿಗಿಭದ್ರತೆ
ಮತದಾನ ಮುಗಿದ ನಂತರ ಮತ ಪೆಟ್ಟಿಗೆಗಳನ್ನು ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜಿನಲ್ಲಿ ಭದ್ರತಾ ಕೊಠಡಿಯಲ್ಲಿ ಇರಿಸಲಾಗುವುದು. ಭದ್ರತೆಗಾಗಿ 3 ಇನ್ಸ್ ಪೆಕ್ಟರ್, ಮೂವರು ಎಸ್ಐಗಳು 9 ಮಂದಿ ಸಹಾಯಕರು, 30 ಮಂದಿ ಮುಖ್ಯ ಪೇದೆಗಳು, 45 ಪೇದೆಗಳು, 2 ಕೆಎಸ್ಆರ್ ಪಿ ತುಕಡಿ, 4 ಸಿಎಆರ್ ಪಡೆಗಳನ್ನು ನಿಯೋಜಿಸಲಾಗಿದೆ.

ಮತದಾನ ಮಾಡಿದ ಗಣ್ಯರು
ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಸಾಹಿತಿ ಎಸ್.ಎಲ್.ಭೈರಪ್ಪ, ಸುತ್ತೂರು ದೇಶಿಕೇಂದ್ರ ಮಹಾ ಸ್ವಾಮೀಜಿ, ಜಿಲ್ಲಾಧಿಕಾರಿ ಸಿ.ಶಿಖಾ, ಸಂಸದ ಪ್ರತಾಪ್ ಸಿಂಹ, ಶಾಸಕ ವಾಸು, ಮಾಜಿ ಸಚಿವ ರಾಮದಾಸ್, ಅಭ್ಯರ್ಥಿಗಳಾದ ಬಿಜೆಪಿಯ  ಮೈ.ವಿ.ರವಿಶಂಕರ್, ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಎನ್.ರವೀಂದ್ರ, ಸಾಹಿತಿ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಭಗವಾನ್ ಸೇರಿದಂತೆ ಹಲವಾರು ಗಣ್ಯರು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತದಾನ ಮಾಡಿದರು.

ಮತದಾನಕ್ಕಾಗಿ ಪರದಾಡಿದ ಸಂಸದರು
ದಕ್ಷಿಣ ಪದವೀಧರ ಕೇತ್ರದ ಚುನಾವಣೆಯಲ್ಲಿ ಸಂಸದರಾದ ಪ್ರತಾಪ್ ಸಿಂಹ ಮೊದಲ ಬಾರಿಗೆ ಮತದಾನ ಮಾಡಲು ಮೊದಲು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಇರುವ ಪೀಪಲ್ಸ್ ಪಾರ್ಕ್ ಪ್ರಾಥಮಿಕ ಶಾಲೆಗೆ ಆಗಮಿಸಿದರು. ಅಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ನಂತರ ಚಾಮುಂಡಿಪುರಂನ ಬಾಲ ಬೋದಿನಿ ಶಾಲೆಗೆ ತೆರಳಿದರು. ಆದರೆ ಇಲ್ಲೂ ಸಹ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲಿದ ಕಾರಣ ವಿಜಯ ನಗರದ ಸದ್ವಿದ್ಯಾ ಶಾಲೆಯಲ್ಲಿ ಮತದಾನ ಮಾಡಿದರು. ಆದರೆ ಅವರ ಹೆಂಡತಿ ಅರ್ಪಿತ ಪ್ರತಾಪ್ಸಿಂಹ ಅವರ ಹೆಸರು ಮತದಾರರ ಪಟ್ಟಿಯಿಂದ ಕೈ ತಪ್ಪಿದ್ದು ಅವರು ಮತದಾನ ಮಾಡದೇ ಹಿಂದಿರುಗಿದರು.

See also  ಮೈಸೂರು ವಿವಿ ಉತ್ತರ ಪತ್ರಿಕೆ ಸೋರಿಕೆ ಪ್ರಕರಣ: ಮುಖ್ಯ ಆರೋಪಿ ಬಂಧನ

ಮತ ಕೇಂದ್ರದ ಬಳಿ ಗಲಾಟೆ
ದಕ್ಷಿಣ ಪದವೀಧರ ಕ್ಷೇತ್ರದ ಬಾಲ ಬೋದಿನಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಲು ಬಂದ ಸಂಸದ ಪ್ರತಾಪ್ ಸಿಂಹ ಜೊತೆ ಅವರ ಗುಂಪು ಮತದಾನ ಕೇಂದ್ರಕ್ಕೆ ಪ್ರವೇಶಿಸಿದರು. ಈ ಸಮಯದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ರವಿಶಂಕರ್, ಪೊಲೀಸರ ಜೊತೆ ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ ಎಂದು ವಾಗ್ವಾದಕ್ಕಿಳಿದ ಪ್ರಸಂಗ ಜರುಗಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು