News Kannada
Monday, October 03 2022

ಮೈಸೂರು

ರಾಯಲ್ ಮ್ಯಾರೇಜ್ ನಲ್ಲಿ ಆರು ದಿನಗಳ ಶಾಸ್ತ್ರಗಳು - 1 min read

Photo Credit :

ರಾಯಲ್ ಮ್ಯಾರೇಜ್ ನಲ್ಲಿ ಆರು ದಿನಗಳ ಶಾಸ್ತ್ರಗಳು

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ನಲ್ವತ್ತು ವರ್ಷಗಳ ಬಳಿಕ ವಿವಾಹದ ಸಂಭ್ರಮದ ವೈಭವ ಮರುಕಳಿಸಿದ್ದು ಆರು ದಿನಗಳ ಕಾಲ ನಡೆಯಲಿರುವ ರಾಯಲ್ ಮ್ಯಾರೇಜ್ ನಲ್ಲಿ ಧಾರ್ಮಿಕ ಶಾಸ್ತ್ರಗಳನ್ನು ಪ್ರಕಟಿಸಲಾಗಿದೆ.


ವಿವಾಹದ ಶಾಸ್ತ್ರಗಳೇನು?
 ಜೂ24 ರಿಂದ ಅರಮನೆಯಲ್ಲಿ ಮದುವೆ ಕಾರ್ಯಗಳು ಆರಂಭವಾಗಲಿದ್ದು ಅಂದು ಧಾರ್ಮಿಕ ವಿಧಿ ವಿಧಾನಗಳು, ಹೋಮ ಹವನಗಳು, ಅರಮನೆಯೊಳಗಡೆ ಆರಂಭವಾಗಲದಲಿದ್ದು 25ರಂದು ಅರಮನೆ ಮುಂಭಾಗ ಚಪ್ಪರದ  ಶಾಸ್ತ್ರ ನಡೆಯಲ್ಲಿದ್ದು ನಂತರ ಮದುಮಗನಿಗೆ ಎಣ್ಣೆ ಸ್ನಾನ ನಂತರ ಅರಶಿಣದ ಸ್ನಾನ ಆಮೇಲೆ ಕಂಕಣ ಕಟ್ಟಿಸಿಕೊಂಡು ಅರಮನೆಯ ಕಲ್ಯಾಣ ಮಂಟಪದಲ್ಲಿ ಹೋಮ ಹವನಗಳು ನಡೆಯಲ್ಲಿದ್ದು ಅರಮನೆಯ ಉಗಮ ದೇವಸ್ಥಾನವಾದ ಶ್ರೀ ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಕ್ಕದ ಇತಿಹಾಸ ಪ್ರಸಿದ್ದ ಬಾವಿಯಿಂದ ನೀರನ್ನು ತೆಗೆದುಕೊಂಡ ಕಳಸವನ್ನು ಅರಮನೆಯ ಮನೆದೇವರನ್ನ ತಂದು ಈ ನೀರಿನಿಂದ ತೊಳೆದು ವಿದ್ಯುಕ್ತವಾಗಿ ಚಪ್ಪರದ ದಿನ ನಡೆಯುವ ಕಾರ್ಯಕ್ರಮಗಳು ಆರಂಭವಾಗಲಿದೆ.

ಆಮೇಲೆ ಕುಲಗುರುಗಳಾದ ಪರಕಾಲ ಶ್ರೀಗಳ ಪಾದ ಪೂಜೆ ನಡೆಯಲ್ಲಿದ್ದು ನಂತರ ಮದುವೆಗೆ ಬಂದ ನೆಂಟರಿಷ್ಟರಿಗೆ ಸಿಹಿ ಊಟದ ನಂತರ ದೇವರ ಕಾರ್ಯಕ್ಕೆ ತೆರೆಬೀಳಲಿದೆ. 26ರಂದು ದೇವತಾ ಕಾರ್ಯ ನಡೆಯಲ್ಲಿದ್ದು ನಾಡಾ ದೇವತೆ ಹಾಗೂ ಕುಲದೇವತೆ ಚಾಮುಂಡಿ ಬೆಟ್ಟ, ಮೇಲುಕೋಟೆ, ಉತ್ತನಹಳ್ಳಿ, ನಂಜನಗೂಡು, ಶ್ರೀರಂಗಪಟ್ಟಣ, ಶೃಂಗೇರಿ, ಮಹದೇಶ್ವರ ಬೆಟ್ಟ ಸೇರಿದಂತೆ ಅರಮನೆ ಒಳಗಿರುವ ಎಲ್ಲಾ ದೇವಾಲಯಗಳಿಂದ ತೀರ್ಥ ಪ್ರಸಾದ ಅರಮನೆಗೆ ಬರುತ್ತದೆ. ಅದನ್ನು ಸ್ವೀಕರಿಸಿದ ಮದುಮಗ ಯದೂವೀರ್ ನಾಳಿನ ದಾರಾಮೂಹರ್ತಕ್ಕೆ ಸಿದ್ದರಾಗುತ್ತಾರೆ.

27 ರಂದು ಯದೂವೀರ್ ತ್ರಿಷಿಕಾಕುಮಾರಿಸಿಂಗ್ ಅವರ ವಿವಾಹವೂ ಅರಮನೆಯ ಕಲ್ಯಾಣ ಮಂಟಪದಲ್ಲಿ 9.05 ರಿಂದ 9.30ರವರೆಗೆ ಕರ್ಕಾಟಕ ಲಗ್ನ ಸಾವೀತ್ರಿ ಮೂಹರ್ತದಲ್ಲಿ ಅರಮನೆಯಲ್ಲಿ ನಡೆಯಲ್ಲಿದ್ದು ಅಂದು ಸಂಜೆ ಉರುತನೆ ಉಯ್ಯಾಲೆ ಶಾಸ್ತ್ರ ನಡೆಯಲ್ಲಿದ್ದು ಸಂಜೆ ನಾಗವಲ್ಲಿ ಶಾಸ್ತ್ರ ಸಹ ನಡೆಯಲ್ಲಿದ್ದು ಇಲ್ಲಿ ತ್ರಿಷಿಕಾಕುಮಾರಿ ಸಿಂಗ್ಗೆ ಎರಡನೇ ತಾಳಿ ಧಾರಣೇ ನಡೆಯುತ್ತದೆ. ಇದು ಒಡೆಯರ್ ಕುಟುಂಬದಲ್ಲಿ ಇರುವ ವಿಶಿಷ್ಟ ಆಚರಣೆಯಾಗಿದ್ದು ಮದುವೆಯಾದ ತ್ರಿಷಿಕಾಕುಮಾರಿ ಯದೂವೀರ್ ಬೆಳಗ್ಗೆ ಒಂದು ತಾಳಿ ಧಾರಣೆ ಮಾಡಿದರೆ ಸಂಜೆ ನಾಗವಲ್ಲಿ ಶಾಸ್ತ್ರದ ಮೂಲಕ ಮತ್ತೊಂದು ದೇವರ ತಾಳಿಯನ್ನ ಧಾರಣೆ ಮಾಡುವ ಮೂಲಕ ಎರಡೆರಡು ತಾಳಿ ಧಾರಣೆ ಸಂಪ್ರದಾಯ ಜಾರಿಯಲ್ಲಿದೆ.

28 ರಂದು ಅರಮನೆಯ ದರ್ಬಾರ್ ಹಾಲ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ. 29 ರಂದು ಸಾರ್ವಜನಿಕರ ದರ್ಶನಕ್ಕೆ ಆರತಕ್ಷತೆ ಕಾರ್ಯಕ್ರಮವಿದ್ದು ಯದೂವೀರ್ ಕಾರಿನಲ್ಲಿ ಅರಮನೆಯ ಸುತ್ತ ಒಂದು ಸುತ್ತು ಸುತ್ತಲ್ಲಿದ್ದಾರೆ. ಜೂ2ರಂದು ಬೆಂಗಳೂರು ಅರಮನೆಯಲ್ಲಿ ಆರತಕ್ಷತೆ ನಡೆಯಲಿದೆ. ವಿವಾಹದ ಐದು ದಿನಗಳ ಹಿಂದಿನ ಮಹಾರಾಜರು ಧರಿಸುತ್ತಿದ್ದ ಅಂಗರಕ (ಲಾಂಗ್ಕೋಟ್) ಯದೂವೀರ್ ಧರಿಸಿಲಿದ್ದು ಸ್ವತ: ಫ್ಯಾಷನ್ ಡಿಸೈನರ್ ರಾದ ಮಹಾರಾಣಿ ಪ್ರಮೋದದೇವಿ ಅವರ ನೇತೃತ್ವದಲ್ಲಿ ಸಿದ್ದವಾಗಿದ್ದು ಯದೂವೀರ್ ಗೆ ಈ ಕೋಟ್ ತುಂಬ ಇಷ್ಟವಾಗಿದೆ ಇದನ್ನು ಧಾರೆ ದಿನ ವಿಶೇಷವಾಗಿ ಸಿದ್ದವಾಗಿರುವ ಅಂಗರಕ ಲಾಂಗ್ಕೋಟ್ ಧರಿಸಲ್ಲಿದ್ದಾರೆ.

See also  ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ

ಆರು ದಿನಗಳು ಭಕ್ಷಬೋಜನ:
ಪ್ರತಿದಿನ ಎರಡು ಸಿಹಿತಿಂಡಿ ಪಾಯಸ್, ಎರಡು ತರಹದ ಪಲ್ಯ, ರಸಂ, ಸಾಬಂರ್ ಸೇರಿದಂತೆ ವಿಶೇಷ ಭಕ್ಷಬೋಜನಗಳ ಮೆನು ಸಿದ್ದವಾಗಿದ್ದು ಬಂದ ಎಲ್ಲರಿಗೂ ವಿಶಾಲವಾದ ರಾಜಾಸ್ತಾನ ಶೈಲಿಯ ವಾಟರ್ ಪ್ರೋಫ್ ಶಾಮಿಯಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.  

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು