News Kannada
Monday, September 26 2022

ಮೈಸೂರು

ಕುಲ ಗುರುಗಳಿಗೆ ಮದುಮಗನಿಂದ ಪಾದ ಪೂಜೆ - 1 min read

Photo Credit :

ಕುಲ ಗುರುಗಳಿಗೆ ಮದುಮಗನಿಂದ ಪಾದ ಪೂಜೆ

ಮೈಸೂರು: ಐತಿಹಾಸಿಕ ರಾಯಲ್ ಮದುವೆಯ ಎರಡನೇ ದಿನ ಮದುಮಗ ಯದುವೀರ್ ಕುಲಗುರುಗಳಾದ ಪರಕಾಲ ಶ್ರೀಗಳಿಗೆ ಮುಂಜಾನೆ ಪಾದಪೂಜೆ ಮಾಡುವ ಮೂಲಕ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿದೆ.

ಅರಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದ್ದು ಎರಡನೇ ದಿನ ಇಂದು ಮುಂಜಾನೆ ರಾಜ ಪರಿವಾರದ ಮುತ್ತದೈರಿಂದ ಜಪ್ಪರದ ಶಾಸ್ತ್ರ ನೆರವೇರಿ ನಂತರ ಮದುಮಗನಿಗೆ ಎಣ್ಣೆ ಸ್ನಾನ ಹಾಗೂ ಅರಿಸಿನ ನೀರು ಹಾಕುವ ಶಾಸ್ತ್ರ ನೇರವೇರಿದ್ದು, ಇದೇ ಸಂದರ್ಭದಲ್ಲಿ ಅರಮನೆಯ ಕುಲಗುರುಗಳಾದ ಪರಕಾಲ ಮಠದಲ್ಲಿ ಶ್ರೀಗಳಿಂದ ದೇವರಿಗೆ ಪೂಜೆ ಸಲ್ಲಿಸಿ ಮದುಮಗ ಯದುವೀರ್ ಗೆ ಶೆಲ್ಯ, ಪಂಜೆ ಹಾಗೂ ಮದುಮಗಳಿಗೆ ಕೊಡುವ ಸೀರೆಯನ್ನ ಪೂಜೆ ಸಲ್ಲಿಸಿ ಅರಮನೆಗೆ ಉಡುಗೊರೆ ನೀಡಲಾಯಿತು.

ನಂತರ ಬೆಳಗ್ಗೆ 8.30 ವೇಳೆಗೆ ಪರಕಾಲ ಶ್ರೀಗಳ ಪಾದಪೂಜೆಯನ್ನ ಮದುಮಗ ರಾಣಿ ಪ್ರಮೋದದೇವಿ ಮಾರ್ಗ ದರ್ಶನದಲ್ಲಿ ನೇರವೇರಿಸಿ ನಂತರ ವಧು ಮತ್ತು ವರರು ಶ್ರೀಗಳ ಆರ್ಶೀವಾದ ಪಡೆದರು. ಆರಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯಬೇಕಿದ್ದರೂ ಪರಕಾಲ ಶ್ರೀಗಳ ಪಾದ ಪೂಜೆ ಮಾಡಿ ಆರ್ಶೀವಾದ ಪಡೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.

ಇದಾದ ಬಳಿಕ ಅರಮನೆ ಒಳಗೆ ಗಣಪತಿ ನವಗ್ರಹ ಹೋಮಗಳು ನಡೆಯಲ್ಲಿದ್ದು ಸಂಜೆ ಕೋಡಿ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೀಸಲು ನೀರು ತರುವ ಶಾಸ್ತ್ರ ನಡೆಯಲ್ಲಿದೆ.

See also  ಪೆಟ್ರೋಲ್ ಬಂಕ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು