News Kannada
Friday, September 30 2022

ಮೈಸೂರು

ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಯದುವಂಶ ಮಹಾರಾಜ - 1 min read

Photo Credit :

ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಯದುವಂಶ ಮಹಾರಾಜ

ಮೈಸೂರು: ರಾಜಸ್ಥಾನದ ಡುಂಗರಪುರ್ ರಾಜಮನೆತನದ ಮಗಳು ತ್ರಿಷಿಕಾ ಕುಮಾರಿ ಸಿಂಗ್ ಅವರನ್ನು ವರಿಸುವ ಮೂಲಕ ಯದುವಂಶದ ಮಹಾರಾಜ ಯದುವೀರ್‌‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸೋಮವಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.

ಇಂದು ಬೆಳಿಗ್ಗೆ 9.17ರ ಹೊತ್ತಿಗೆ ಸಲ್ಲುವ ಶುಭ ಕರ್ಕಾಟಕ ಲಗ್ನ, ಸಾವಿತ್ರ ಮುಹೂರ್ತದಲ್ಲಿ ಅರಮನೆಯೊಳಗಿನ  ಅಲಂಕರಿಸಲ್ಪಟ್ಟಿದ್ದ ಮಯೂರ ಮಂಟಪದಲ್ಲಿ ರಾಜಕುಮಾರ  ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ – ರಾಜಸ್ಥಾನದ ಡುಂಗರುಪುರ ರಾಜ ಮನೆತನದ ಕನ್ಯ ತ್ರಿಶಿಖಾ ಕುಮಾರಿ ಸಿಂಗ್ ರವರೊಂದಿಗೆ ಮಾಂಗಲ್ಯ ಧಾರಣೆ ನೆರವೇರಿತು.

ಸ್ಥಳ ಪರ ಸ್ಥಳಗಳಿಂದ ಆಗಮಿಸಿದ್ದ ರಾಜ ಮನೆತನದ  ಗಣ್ಯರು, ಅಥಿತಿಗಳು ವಧು-ವರನ ಕಡೆಯವರು ಈ ಸಂದರ್ಭದಲ್ಲಿ ಹಾಜರಿದ್ದು, ನವದಂಪತಿಗಳಿಗೆ ಹಲವಾರು ಶಾಸ್ತ್ರಗಳನ್ನು ಮಾಡಿ ಆರ್ಶಿವಧಿಸಿದರು. ವರನಿಂದ ವಧುವಿನ ಕತ್ತಿನಲ್ಲಿದ್ದ ಮಾಂಗಲ್ಯಕ್ಕೆ ಹರಿಸಿನ ಕುಂಕು ಹಚ್ಚಿ ಪೂಜೆ, ಕಾಲಿ ಬೆರಳುಗಳಿಗೆ ಚಿನ್ನದ ಕಾಲುಂಗುರ ತೊಡಿಸುವುದು, ಮುಂತಾದ ಕಾರ್ಯಗಳು ನಡೆದವು. ಇದಕ್ಕೂ ಮೊದಲು ರಾಜ ಪೋಷಾಕಿನಲ್ಲಿದ್ದ ವರನಿಗೆ ವಿವಿಧ ಶಾಸ್ತ್ರಗಳು,ಗಣಪತಿ ಪೂಜೆ, ಬೃಹಸ್ಪತಿ ಪೂಜೆ, ಕನ್ಯಾಪ್ರತಿಗ್ರಹ ಪೂಜೆ, ವಧುವಿನ ಕಡೆಯವರಿಂದ ವರನ ಪೂಜೆ, ಕನ್ಯಾ ದಾನ ಕಾರ್ಯಕ್ರಮ, ಸಂಬಂಧದ ಮಾಲೆ ಧರಿಸುವುದು ಸೇರಿದಂತೆ ಹಲವಾರು ಧಾರ್ಮಿಕ ಕೈಂಕರ್ಯಗಳು ರಾಜಸ್ಥಾನದ ಡುಂಗರಾಪುರ್ ವಾದ್ಯಮೇಳಗಳೊಡನೆ ನೆರವೇರಿದವು.

ಮದುವೆ ಕಾರ್ಯಕ್ರಮದ ಅಂಗವಾಗಿ ಚಾಮುಂಡಿಬೆಟ್ಟದ ದೇವಿಯ ದೇವಸ್ಥಾನದಿಂದ ತೀರ್ಥ ಪ್ರಸಾದ, ಪರಕಾಲ ಮಠದಿಂದ ಅರಮನೆಗೆ ನೀಡುವ ಸಂಪ್ರದಾಯದಂತೆ ತೀರ್ಥ, ಅಕ್ಷತೆ, ಸೀರೆ, ಪಂಚೆ ಮುಂತಾದ ವಸ್ತ್ರಗಳನ್ನು ಗೌರವಯುತವಾಗಿ ಸ್ವೀಕರಿಸಲಾಯಿತು. ನಂತರ ಅರಮನೆಯ ಸುತ್ತಲೂ ಇರುವ ಎಲ್ಲಾ ದೇವಸ್ಥಾನಗಳ ತೀರ್ಥ ಪ್ರಸಾದವನ್ನು ತಾಳಿಕಟ್ಟುವ ಮುನ್ನಾ ವರನಿಗೆ ನೀಡಿ ಆಶಿರ್ವದಿಸಲಾಯಿತು. ವಧು ತ್ರಿಶಿಕಾಕುಮಾರಿಯಿಂದಲೂ ಹಾಗೂ ಮುತೈದೆಯರಿಂದ  ಗೌರಿ ಪೂಜೆ, ವರನ ಇತ್ಯಾಧಿಗಳು ನಡೆದವು.

ಇಂದು ಸಂಜೆ 5.30ಕ್ಕೆ ಔಪಾಸನ ಕಾರ್ಯಕ್ರಮ, 7.30ಕ್ಕೆ ವಧು-ವರರಿಗೆ ಅರುಂದತಿ ನಕ್ಷತ್ರ, ದ್ರುವ ನಕ್ಷತ್ರ್ರ ದರ್ಶನ ಕಾರ್ಯಕ್ರಮ ನಡೆಯಲಿದೆ. ನಾಳೆ ಆರತಕ್ಷತೆ ನಡೆಯಲಿದ್ದು, ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯಾತಿಗಣ್ಯರುಗಳು ಭಾಗಿಯಾಗಿ ನೂತನ ದಂಪತಿಗಳನ್ನು ಆಶಿರ್ವಧಿಸಲಿದ್ದಾರೆ. ನಾಳೆ ಎಲ್ಲರಿಗೂ ಆರಮನೆಯ ಆವರಣದಲ್ಲಿ ಮುಕ್ತವಾಗಿ ವಿವಾಹದ ಭೋಜನ ಏರ್ಪಡಿಸಿದೆ. ಒಟ್ಟಿನಲ್ಲಿ ಐತಿಹಾಸಿಕ ನಗರ ಮೈಸೂರು ಅರಮನೆಯಲ್ಲಿ 40 ವರ್ಷಗಳ ನಂತರ ರಾಜ ಕುಟುಂಬದ ಮದುವೆ ಯಾವುದೇ ಅಡಚಣೆಗಳಿಲ್ಲದೆ ಯಶಸ್ವಿಯಾಗಿ ನೆರವೇರಿತು. ರಾಜಸ್ಥಾನದ ಕನ್ಯಾ ಮೈಸೂರಿಗೆ ಸೊಸೆಯಾಗಿ ಬಂದಿರುವುದನ್ನು ಇಲ್ಲಿನ ಸಾರ್ವಜನಿಕರು ಮುಕ್ತಕಂಠದಿಂದ ಸ್ವಾಗತಿಸಿ ವಧು-ವರರನ್ನು ಆಶೀರ್ವದಿಸಿದ್ದಾರೆ.
 
 
 

See also  ಶ್ರೀರಂಗಪಟ್ಟಣ ಎಂಎಲ್​ಎ ರವೀಂದ್ರಗೆ ತಹಶೀಲ್ದಾರ್ ರೂಪಾ ಕ್ಲಾಸ್; ವೇದಿಕೆಯಲ್ಲೇ ನಾಯಕರ ಜಟಾಪಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು