News Kannada
Friday, September 30 2022

ಮೈಸೂರು

ಸಾರಿಗೆ ನೌಕರರ ಮುಷ್ಕರ ಮಧ್ಯಸ್ಥಿಕೆ ವಹಿಸಲು ಸಿದ್ದ: ಹೆಚ್.ಡಿ ಕುಮಾರಸ್ವಾಮಿ - 1 min read

Photo Credit :

ಸಾರಿಗೆ ನೌಕರರ ಮುಷ್ಕರ ಮಧ್ಯಸ್ಥಿಕೆ ವಹಿಸಲು ಸಿದ್ದ: ಹೆಚ್.ಡಿ ಕುಮಾರಸ್ವಾಮಿ

ಮೈಸೂರು: ಕೆಎಸ್ಆರ್ ಟಿಸಿ ನೌಕರರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಆಹ್ವಾನಿಸಲು ಮಧ್ಯಸ್ಥಿಕೆ ವಹಿಸಲು ನಾನು ಸಿದ್ದನಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಮಾಧ್ಯಮದವರ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಸರ್ಕಾರ ಮುಷ್ಕರ ನಿರತ ಸಾರಿಗೆ ನೌಕರರಿಗೂ ಆತ್ಮಹತ್ಯೆ ಭಾಗ್ಯ ಕರುಣಿಸಲು ಹೊರಟಿದೆ. ಇದಕ್ಕೂ ಮೊದಲು ಎಲ್ಲಾ ಭಾಗ್ಯಗಳನ್ನು ನಿಲ್ಲಿಸಿ ಪ್ರಾಮಾಣಿಕವಾಗಿ ಆಲೋಚನೆ ಮಾಡಲಿ. ಕಳೆದ ಭಾರಿ ಆರ್.ಆಶೋಕ್ ನನ್ನ ಮಾತಿಗೆ ಸ್ಪಂದಿಸಿದಕ್ಕೆ ಸಮಸ್ಯೆ ಬಗೆಹರಿಯಿತು. ಈಗಲೂ ಸರ್ಕಾರ ಮಧ್ಯಸ್ಥಿಕೆ ವಹಿಸಲು ಆಹ್ವಾನ ನೀಡಿದರೆ ನಾನು ಸಿದ್ದನಿದ್ದೇನೆ ಮುಷ್ಕರವನ್ನು ಅಂತ್ಯಗೊಳಿಸಲು ನನ್ನ ಬಳಿ ಸಾಕಷ್ಟು ಆಲೋಚನೆಗಳಿವೆ ಎಂದು ತಿಳಿಸಿದ ಹೆಚ್.ಡಿ.ಕೆ ಪ್ರತಿಷ್ಟೆಗೆ ಬಿದ್ದು ಎಸ್ಮಾ ಜಾರಿಗೊಳಿಸಿದರೆ ಪರಿಸ್ಥಿತಿ ಮತ್ತಷ್ಟೂ ಬಿಗಡಾಯಿಸುತ್ತದೆ. ಅದಕ್ಕೂ ಮೊದಲು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಸಲಹೆ ನೀಡಿದರು.

ಸರ್ಕಾರ ಹಿಂದಿನಿಂದ 18 ಸಾವಿರಕ್ಕೂ ತರಬೇತಿ ಪಡೆಯುತ್ತಿರುವ ಚಾಲಕರು ಹಾಗೂ ಕಂಡಕ್ಟರ್ ಗೆ ಸೇವೆಗೆ ಬಳಸಲು ಚಿಂತನೆ ನಡೆಸುವುದು ಸರಿಯಲ್ಲ, ಮುಂದೊಂದು ದಿನ ಇದೆ. ಸಮಸ್ಯೆ ಮರುಕಳಿಸುದಕ್ಕೆ  ಪರಿಹಾರವಾಗಿ ಶಾಶ್ವತ ಪರಿಹಾರ ಕಂಡು ಹಿಡುಯುವ ಕಡೆ ಗಮನ ಹರಿಸಲಿ. ಅಲ್ಲದೆ ಕಳೆದ ಜನವರಿ ತಿಂಗಳಲ್ಲೆ ವೇತನ ಪರಿಷ್ಕರಣೆ ಘೋಷಿಸಿದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸರ್ಕಾರವನ್ನು ಟೀಕಿಸಿದರು.

See also  ಮೈಸೂರು ದಸರಾದ ಮೊದಲ ಕಾರ್ಯಕ್ರಮ ಗಜಪಯಣ ಇಂದಿನಿಂದ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು