ಮೈಸೂರು: ಪ್ರಾಧ್ಯಾಪಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಐಐಎಲ್ ನಿರ್ದೇಶಕರಿಗೆ ಜಯಲಕ್ಷ್ಮಿಪುರಂ ಪೋಲಿಸರು ನೋಟಿಸ್ ಜಾರಿ ಮಾಡಿದ್ದಾರೆ.
ಕಳೆದ ಜುಲೈ 26ರಂದು ಮೈಸೂರಿನ ಜಯಲಕ್ಷ್ಮಿ ಪುರಂ ಠಾಣೆಗೆ ಆಗಮಿಸಿದ ಪಶ್ಚಿಮ ಬಂಗಾಳದ ಭಾಷಾ ಸಂಶೋದನಾ ಕೇಂದ್ರದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸಂಗೀತ ಸೈಕೀಯಾ 2013ರಲ್ಲಿ ಮೈಸೂರಿನ ಜಿಐಎ ಸಭೆಗೆ ಭಾಗವಹಿಸಲು ಬಂದಾಗ ಪರಿಚಯವಾದ ನಿರ್ದೇಶಕ ಅವದೇಶ ಕುಮಾರ್ ಮಿಶ್ರಾ ನಂತರ ದೂರವಾಣಿಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದು, ಇದರ ವಿರುದ್ದ ನ್ಯಾಯಾಧೀಶರ ಎದುರು ಸಂತ್ರಸ್ಥೆ ಹೇಳಿಕೆಯನ್ನು ದಾಖಲಿಸಿತು. ಈ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಐಐಎಲ್ ನಿರ್ದೇಶಕರಿಗೆ ಜಯಲಕ್ಷ್ಮಿಪುರಂ ಪೊಲೀಸರು ಎರಡು ನೋಟಿಸ್ ಅನ್ನು ನೀಡಿದ್ದಾರೆ.
ಆದರೆ ಜುಲೈ 25 ರಿಂದ ಆಗಸ್ಟ್ 5ರವರೆಗೆ ಅನಾರೋಗ್ಯದ ಹಿನ್ನಲೆಯಲ್ಲಿ ರಜೆಯಲ್ಲಿದ್ದಾರೆ ಎಂದು ಉಪ ನಿರ್ದೇಶಕರು ಉತ್ತರ ನೀಡಿದ್ದು ಇಂದು ಮತ್ತೊಂದು ನೋಟಿಸ್ ಅನ್ನು ಪೊಲೀಸರು ನೀಡಿದ್ದು ಈ ಮಧ್ಯೆ ನಿರ್ದೇಶಕರು ನಿರೀಕ್ಷಣಾ ಜಾಮೀನು ಕೋರಿ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಸರ್ಕಾರಿ ಅಭಿಯೋಜಕರು ನಾಳೆ ತಕರಾರು ಅರ್ಜಿ ಸಲ್ಲಿಸಲಿದ್ದಾರೆ.
ಹಣದಿಂದ ಉಂಟಾದ ಬಿರುಕು:
2013ರಿಂದಲ್ಲೂ ನಿರ್ದೇಶಕ ಪ್ರೋ. ಅವಧೇಶ ಕುಮಾರ್ ಮಿಶ್ರಾ(56) ಹಾಗೂ ಪ್ರಾಧ್ಯಾಪಕಿ ಪ್ರೊ.ಸಂಗೀತ ಸೈಕೀಯಾ ಮೂಲತ: ಬಿಹಾರದ ಮೂಲದವರು. ಇಬ್ಬರು ವಿಮಾನದಲ್ಲಿ ಭಾರತದ ಎಲ್ಲಾ ಪ್ರವಾಸಿಯಾ ಸ್ಥಳಗಳನ್ನು ಜೊತೆಯಾಗಿ ವಿಕ್ಷೀಸಿದ್ದು ಸಂಗೀತ ಸೈಕೀಯಾಗೆ ಪ್ರಾಧ್ಯಾಪಕಿ ಹುದ್ದೆಯನ್ನು ಅವದೇಶ ಕುಮಾರ್ ಮಿಶ್ರಾ ಅವರ ಶಿಫಾರಸ್ಸಿನಲ್ಲೇ ಕೊಡಿಸಲಾಗಿದ್ದು ನಿರ್ದೇಶಕರಿಂದ ಪ್ರಾಧ್ಯಾಪಕಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದು, ಹೆಚ್ಚಿನ ಹಣ ನೀಡುವಂತೆ ಪೀಡಿಸುತ್ತಿದ್ದರು. ಇವರಿಬ್ಬರ ನಡುವಿನ ಸಂಬಂಧ ಸಂಗೀತ ಸೈಕೀಯಾ ಗಂಡನಿಗೆ ಗೊತ್ತಾದಾಗ ತಪ್ಪಿಸಿಕೊಳ್ಳಲು ಮಾನವ ಹಕ್ಕು ಆಯೋಗದ ಮೂಲಕ ದೂರು ನೀಡಿದ್ದಾಳೆ ಎಂದು ನಿರೀಕ್ಷಣಾ ಜಾಮೀನು ಸಲ್ಲಿಸಿರುವ ಅವದೇಶ ಕುಮಾರ್ ಮಿಶ್ರಾ ಪರ ವಕೀಲರು ತಿಳಿಸಿದ್ದು, ಆ.6ರಂದು ಸಿಐಐಎಲ್ ನಿರ್ದೇಶಕರು ಕೆಲಸಕ್ಕೆ ಹಾಜರಾಗಲಿದ್ದು ನಂತರ ಪೊಲೀಸ್ ವಿಚಾರಣೆ ಹಾಜರಾಗುವ ಸಾಧ್ಯತೆ ಇದೆ.
ಎಂಹೆಚ್ಆರ್ ಡಿಗೆ ಪತ್ರ:
ಕೇಂದ್ರ ಸರ್ಕಾರದ ಸಂಸ್ಥೆಯಾದ ಭಾರತೀಯಾ ಭಾಷಾ ಸಂಸ್ಥಾನದ ನಿರ್ದೇಶಕರ ವಿರುದ್ದ ದಾಖಲಾಗಿರುವ ಲೈಂಗಿಕ ಕಿರುಕುಳ ದೂರಿನ ಬಗ್ಗೆ ಜಯಲಕ್ಷ್ಮಿಪುರಂ ಪೊಲೀಸರು ಕೇಂದ್ರದ ಎಂಹೆಚ್ಆರ್ ಡಿಗೆ ವರದಿ ಸಲ್ಲಿಸಿದ್ದು ಅಲ್ಲಿಂದ ಬರುವ ಉತ್ತರಕ್ಕೆ ಕಾಯಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.