News Kannada
Tuesday, September 27 2022

ಮೈಸೂರು

ಮೈಸೂರು ದಸರಾ ಫಿರಂಗಿಗಳಿಗೆ ಪೂಜೆ: ಪೊಲೀಸ್ ಇಲಾಖೆಗೆ ಹಸ್ತಾಂತರ - 1 min read

Photo Credit :

ಮೈಸೂರು ದಸರಾ ಫಿರಂಗಿಗಳಿಗೆ ಪೂಜೆ: ಪೊಲೀಸ್ ಇಲಾಖೆಗೆ ಹಸ್ತಾಂತರ

ಮೈಸೂರು: ಜಂಬೂ ಸವಾರಿಯಲ್ಲಿ ವಿಜಯದ ಸಂಕೇತವಾಗಿ ಕುಶಾಲತೋಪುಗಳನ್ನು ಸಿಡಿಸುವ ಫಿರಂಗಿಗಳನ್ನ ಸಾಂಪ್ರದಾಯಿಕವಾಗಿ ಚಾಮುಂಡಿ ತಾಯಿಗೆ ಇಂದು ಪೂಜೆ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು.

ನಾಡಹಬ್ಬ ನವರಾತ್ರಿ ಹತ್ತನೇ ದಿನ ವಿಜಯ ದಶಮಿಯಂದು ನಡೆಯುವ ಜಂಬೂ ಸವಾರಿಗೆ ಪುಷ್ಪಾರ್ಚನೆ ನಂತರ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಈಗ ಸರ್ಕಾರ ಈ ವಿಜಯದಶಮಿಯನ್ನು ಆಚರಿಸುತ್ತಿದ್ದು, ಅದರಂತೆ ವಿಜಯದಶಮಿ ದಿನ ಪೊಲೀಸ್ ಇಲಾಖೆಯ ನುರಿತ ತಜ್ಞರು ಈ ಕುಶಾಲತೋಪುಗಳನ್ನ ಸಿಡಿಸುತ್ತಾರೆ.

ಅದಕ್ಕೆ ಪೂರ್ವಭಾವಿಯಾಗಿ ಇಂದು ಅರಮನೆಯ ಅಡಳಿತ ಮಂಡಳಿಯ ಕಾರ್ಯನಿರ್ವಹಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಡಿ.ರಂದೀಪ್ ಸಂಪ್ರದಾಯಿಕವಾಗಿ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಅರಮನೆಯ ಮುಖ್ಯ ದ್ವಾರದಲ್ಲಿರುವ ರಾಜರ ಕಾಲದ 8 ಫಿರಂಗಿಗಳಿಗೆ ಪೂಜೆ ಸಲ್ಲಿಸಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು.

ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಕೆಲಸ ನಿರ್ವಹಿಸುವ ಪೊಲೀಸ್ ಇಲಾಖೆಯ 28 ಸಿಬ್ಬಂದಿಗಳಿಗೆ ಪೊಲೀಸ್ ಇಲಾಖೆ ವತಿಯಿಂದ ಇದೇ ಮೊದಲ ಬಾರಿಗೆ  ಜೀವವಿಮೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಮೈಸೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಅರಮನೆ ಆಡಳಿತ ಮಂಡಳಿ ಆಯೋಜಿಸಿದ್ದ 11 ಫಿರಂಗಿ ಗಾಡಿಗಳನ್ನು ಪೊಲೀಸ್ ಇಲಾಖೆಗೆ ಹಸ್ತಾತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿ.ದಯಾನಂದ್  ಅವರು, ಈ ಹಿಂದೆ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಫಿರಂಗಿ ಸಿಬ್ಬಂದಿಗೆ ಸ್ಪೋಟಕ ಸಂದರ್ಭಗಳಲ್ಲಿ ಗಾಯಗಳಾದ ಘಟನೆ ನಡೆದಿವೆ.ಹೀಗಾಗಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಸಿಬ್ಬಂದಿಗೆ ಜೀವವಿಮೆ ಸೌಲಭ್ಯ ನೀಡುತ್ತೇವೆ.ಆದರೆ ವಿಮೆ ಮೊತ್ತವನ್ನು ಇನ್ನು ಅಂತಿಮಗೊಳಿಸಿಲ್ಲ ಎಂದು ತಿಳಿಸಿದರು.

ಜೊತೆಗೆ ಸಿಬ್ಬಂದಿಗೆ ಸುರಕ್ಷತಾ ಪರಿಕರಗಳನ್ನು ನೀಡಲು ತೀರ್ಮಾನಿಸಿದ್ದು, ತರಬೇತಿಯ ಸಂದರ್ಭದಲ್ಲೂ ಈ ಪರಿಕರಗಳನ್ನು ಸಿಬ್ಬಂದಿಗೆ ಒದಗಿಸಲಾಗುವುದು ಎಂದು ದಯಾನಂದ್ ತಿಳಿಸಿದರು.

 

See also  ಕೆಆರ್ ಎಸ್ ಹಿನ್ನೀರಲ್ಲಿ ಮೀನು ಹಿಡಿಯಲು ಹೋದ ಮೀನುಗಾರ ಜಲಸಮಾಧಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು