News Kannada
Monday, September 26 2022

ಮೈಸೂರು

ಕರ್ನಾಟಕ ಸರ್ಕಾರ ಸು.ಕೋರ್ಟ್ ಗೆ ಸರಿಯಾದ ಅಂಕಿ ಅಂಶ ಕೊಟ್ಟಿಲ್ಲ: ಸಿ.ಶಿವಪ್ಪ - 1 min read

Photo Credit :

ಕರ್ನಾಟಕ ಸರ್ಕಾರ ಸು.ಕೋರ್ಟ್ ಗೆ ಸರಿಯಾದ ಅಂಕಿ ಅಂಶ ಕೊಟ್ಟಿಲ್ಲ: ಸಿ.ಶಿವಪ್ಪ

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಷಯದಲ್ಲಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸರಿಯಾದ ಅಂಕಿ ಅಂಶಗಳನ್ನು ಕೊಟ್ಟಿಲ್ಲ ಆದ್ದರಿಂದಾಗಿಯೇ ಸು.ಕೋರ್ಟ್ ತೀರ್ಪು ತಮಿಳುನಾಡು ಪರವಾಗಿದೆ. ಇಷ್ಟೆಲ್ಲಾ ಗೊಂದಲಕ್ಕೆ ರಾಜ್ಯ ಸರ್ಕಾದ ವೈಫಲ್ಯವೇ ಕಾರಣ ಎಂದು ತಮಿಳುನಾಡು ಹೈಕೋರ್ಟ್ ನನ ನಿವೃತ್ತ ನ್ಯಾಯಾಧೀಶ ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಸಿ.ಶಿವಪ್ಪ ಸ್ಪಷ್ಟ ಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆ ಬಹಳ ವರ್ಷಗಳಿಂದಲೂ ಇದೆ, ತಮಿಳುನಾಡು ನೀರು ಕೇಳಿ ಸು.ಕೋರ್ಟ್ ಮೊರೆ ಹೋದಾಗ ಕರ್ನಾಟಕ ಸರ್ಕಾರ ಕೋರ್ಟಿಗೆ  ಸರಿಯಾದ ಅಂಕಿ ಅಂಶಗಳನ್ನು ಒದಗಿಸಿಲ್ಲ, ಮೊದಲಿಗೆ ಕುಡಿಯಲು ನೀರು, ವಿದ್ಯುತ್ ಉತ್ಪಾದನೆಗೆ ನೀರು, ಶಿಕ್ಷಣ ಕ್ಷೇತ್ರಗಳಿಗೆ ನೀರು, ಕೈಗಾರಿಕೆಗಳಿಗೆ ನೀರು, ಕೊನೆಯಲ್ಲಿ ವ್ಯವಸಾಯಕ್ಕೆ, ಮತ್ತಿತರ ಕೆಲಸಗಳಿಗೆ ಇಂತಿಷ್ಟು ನೀರು ಅವಶ್ಯಕತೆಯಿದೆ ಎಂಬ ಅಂಕಿ ಅಂಶಗಳ ವಿವರಣೆ ನೀಡಬೇಕಿತ್ತು, ಅದಬಿಟ್ಟು ಸುಮ್ಮನೆ ಕುಡಿಯಲು ನೀರು, ವ್ಯವಸಾಯಕ್ಕೆ ನೀರು ಸಾಲಲ್ಲ ಎಂದು ಹೇಳಿದರೆ ಕೋರ್ಟ್ ಅದನ್ನು ಕೇಳುವುದಿಲ್ಲ, ಸುಮ್ಮನೆ ಕೋರ್ಟ್ ಮೇಲೆಯು, ಜಡ್ಜ್ ಗಳ ಮೇಲೆ ಕೋಪಗೊಂಡು ಕೋರ್ಟ್ ಗೌರವ ಹಾಳು ಮಾಡುವುದು ಸರಿಯಲ್ಲ, ಸು. ಕೋರ್ಟ್ ಭಾರತದ ಸಾರ್ವಭೌಮತ್ವವನ್ನು ಎತ್ತಿಹಿಡಿಯು ಸಂಸ್ಥೆಯಾಗಿದೆ ಎಂದರು.

ಕರ್ನಾಟಕ ಸರ್ಕಾರ ಶಿವನ ಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಪ್ರತಿ ತಿಂಗಳು 2 ಟ.ಎಂ.ಸಿ. ನೀರು ಹರಿಸುತ್ತಿದೆ. ವಿದ್ಯುತ್ ಉತ್ಪಾದನೆಗೆ ಬಳಸಿದ ನೀರು ತಮಿಳುನಾಡಿಗೆ ತಾನೆ ಹೋಗುತ್ತದೆ ಅದನ್ನು ಏಕೆ ಎಲ್ಲೂ ಹೇಳಿಲ್ಲ ಅದು ಲೆಕ್ಕ ಇಲ್ಲವೇ, ಸು.ಕೋರ್ಟ್ ಗೆ ಸರ್ಕಾರ ಏಕೆ ಮನವರಿಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಶಿವಪ್ಪರವರು ಎಲ್ಲಾ ತಪ್ಪುಗಳು ಆಳುವ ಸರ್ಕಾರದ ಮೇಲಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ನಾನು ನ್ಯಾಯಧೀಶನಾಗಿದ್ದವನು, ನಿವೃತ್ತಿ ಆದಮೇಲೆ ಕೃಷಿಯನ್ನೇ ಅವಲಂಭಿಸಿದ್ದೇನೆ, ಒಬ್ಬ ರೈತನಾಗಿ ವ್ಯವಸಾಯ ಮಾಡುತ್ತಿದ್ದೇನೆ, ನಾನು ಈ ನಾಡಿನ ಮಣ್ಣಿನ ಮಗನೇ ಆದರೂ ನನ್ನ ಮನೆಗೆ ತಿಳಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ, ಸರ್ಕಾರ ಸಣ್ಣ ಪುಟ್ಟ ಪುಡಾರಿಗಳಿಗೆ ರಕ್ಷಣೆ ಕೊಡುತ್ತದೆ, ಆದರೆ ಜೆಡ್ಜ್ ಗಳ ಮನೆಗಳಿಗೆ ರಕ್ಷಣೆ ನೀಡುತ್ತಿಲ್ಲ, ನನ್ನ ಮನೆಗೆ ಕಲ್ಲು ಹೊಡೆದವರನ್ನು ಇನ್ನೂ ಬಂಧಿಸಿಲ್ಲ, ಸರ್ಕಾರವೂ ಈ ಬಗ್ಗೆ ಯಾವೊಂದು ಮಾಹಿತಿ ಕೇಳಿಲ್ಲ, ನಾನೂ ಸಹ ಯಾವ ಸಹಾಯವನ್ನೂ ಕೇಳಲ್ಲ ಎಂದು ನುಡಿದರು.

ಸರ್ಕಾರ ನೀರು ಕೊಡುತ್ತೇವೆ ಎಂದು ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿದೆ, ಸುಳ್ಳು ಹೇಳಬೇಡಿ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಾನೂನು ಸಲಹೆ ಬೇಕಾದರೆ ನನ್ನ ಬಳಿ ಬರಲಿ, ಆದರೆ ನಾನಾಗೆಯೇ ಅವರ ಬಳಿ ಹೋಗುವುದಿಲ್ಲ. ಎಂದರಲ್ಲದೆ, ರಾಜ್ಯದಲ್ಲಿ ನೀರಿನ ಸಮಸ್ಯೆ ಉದ್ಭವವಾದಾಗ ರಾಜ್ಯದಲ್ಲೇ ನುರಿತ ಕಾನೂನು ತಜ್ಞರಿದ್ದಾರೆ, ನಿವೃತ್ತ ಜೆಡ್ಜ್ ಗಳಿದ್ದಾರೆ ಎಂದಾರೂ ಅವರನ್ನು ಕರೆದು ಚರ್ಚೆ ನಡೆಸಿದ್ದಾರೆಯೇ ಎಂದರು.

See also  ಮೈಸೂರಲ್ಲಿ ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿದ ಮಳೆ

ರಾಜ್ಯದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಬಂದ್ ಒಂದೇ ಪರಿಹಾರವಲ್ಲ, ಇನ್ನು ಮುಂದೆ ಬಂದ್ ಗೆ ಕರೆಕೊಡಬೇಡಿ, ಇದರಿಂದ ಸಾವಿರಾರು ಮಂದಿ ಬಡಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ, ಬಡವರ ಅನ್ನಕಿತ್ತಂತಾಗುತ್ತದೆ, ಸಾರ್ವಜನಿಕರ ಆಸ್ತಿ ಪಾಸ್ತಿ ಹಾಳಾಗುತ್ತದೆ ಎಂದು ತಿಳಿಸಿದರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು