News Kannada
Sunday, September 25 2022

ಮೈಸೂರು

ಸಂಸ್ಕೃತಿ, ಸ್ನೇಹ ಸಂಬಂಧ, ಸಾಮಾಜಿಕ ಕಾಳಜಿಯ ಬಗ್ಗೆ ಅರಿವು ಮೂಡಿಸಿದ ದಸರಾ ಕಾವಾ ಮೇಳ - 1 min read

Photo Credit :

ಸಂಸ್ಕೃತಿ,  ಸ್ನೇಹ ಸಂಬಂಧ, ಸಾಮಾಜಿಕ ಕಾಳಜಿಯ ಬಗ್ಗೆ ಅರಿವು ಮೂಡಿಸಿದ ದಸರಾ ಕಾವಾ ಮೇಳ

ಮೈಸೂರು: ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಕ್ಷೇತ್ರ ಮಾತ್ರ ಸಿಮಿತವಲ್ಲ ಎಲ್ಲ ತರಹದ ಚಟುವಟಿಕೆಯಲ್ಲಿ ತೊಡಗಬೇಕು ಹಾಗೂ ಕಲಾವಿದರಿಗೆ ಮಹತ್ತರದ ಸ್ಧಾನವಿದೆ. ಎಂದು ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಬಿ.ಎಲ್.ಬೈರಪ್ಪ ತಿಳಿಸಿದರು. ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ವತಿಯಿಂದ ದಸರಾ ಕಾವಾ ಮೇಳ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.

ಈ ಕಾಲೇಜಿನಲ್ಲಿ ಪ್ರತಿ ವರ್ಷ ಕಾವಾಮೇಳವನ್ನು ನಡೆಸಿಕೊಂಡು ಬರುತ್ತಿದ್ದಾರೆ.ಆದರೆ ಈ ಬಾರಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಜೊತೆಗೂಡಿ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಸುಸಂದರ್ಭದಲ್ಲಿ ಎರಡು ದಿನಗಳ ಕಾಲ ದಸರಾ ಕಾವಾಮೇಳ ಏರ್ಪಡಿಸಿದ್ದು. ಈ ಕಾವಾಮೇಳದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕರಿಂದ ರಚಿತವಾದ ಸಮಾಜದ ವಿವಿಧ ಮಜಲುಗಳನ್ನು ಪ್ರತಿಬಿಂಬಿಸುವ ಕಲಾಕೃತಿಗಳನ್ನು ಈ ಮೇಳದಲ್ಲಿ ಕಾಣಬಹುದು.

 ಕಲೆ ಎಂಬುವು ವಿಶಿಷ್ಟವಾದದ್ದು ಕಲೆಗೆ ಬೆಲೆ ಕಟ್ಟುವುದು ಸಾಧ್ಯವಿಲ್ಲ ಇಂತಹ ಒಂದು ಕಲೆಗೆ ತನ್ನದೇ ರೂಪುರೇಶ ಹೊಂದಿದ್ದು, ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮುಗಿದರೂ ಸಹ ಇಂತಹ ಒಂದು ಕಲಾ ಮೇಳದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕರು ರಚಿಸಿರುವ ಕಲಾ ಕೃತಿಗಳು, ಭಾವಚಿತ್ರ, ನಿಸರ್ಗಚಿತ್ರ, ಛಾಯಚಿತ್ರ, ಗ್ರೀಟಿಂಗ್ ಕಾರ್ಡ್, ಮಾಸ್ಕ್, ಪರಿಸರ ಮತ್ತು ಜಲ ಸಂರಕ್ಷಣೆ, ಆರೋಗ್ಯ ಕುರಿತು ಸಾಮಾಜಿಕ ತಿಳುವಳಿಕೆ ಮೂಡಿಸುವಂತಹ ಕಲಾಕೃತಿಗಳ ಪ್ರದರ್ಶನ ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗಿದೆ. ಪತ್ರಿ ವರ್ಷ ಕಾವ ಮೇಳ ಆದರೆ ಈಗ ದಸರಾ ಕಾವಾ ಮೇಳ ಮಾಡಿರುವುದು ಬಹಳ ವಿಶಿಷ್ಟವಾಗಿದೆ.  

ಕಲ್ಲಿನಿಂದ ಕಲಾಕೃತಿ:  ಈ ಕಾವಾಮೇಳದಲ್ಲಿ ಸುಮಾರು 450 ವಿವಿಧ ಬಗೆಯ ಕಲ್ಲಿನ ಕಲಾಕೃತಿಗಳನ್ನು ಕಾಣಬಹುದು. ಅದರಲ್ಲಿ ಬುದ್ದ, ಕೃಷ್ಣ ಶಿಲೆಯಿಂದ ಹಾಗೂ ಗ್ರಾನೇಟ್ ನಿಂದ ಆಮೆ, ಗೂಳಿ, ಹಾವುಗಳ ಬೇಸುಗೆ, ಮೊಸಳೆ, ದೇಶಿಯ ವಿವಿಧ ನಾರಿಯರ ಕಲಾಕೃತಿಗಳು ಸೇರಿದಂತೆ ಹಲವಾರು ದೇವರ ವಿಗ್ರಹಗಳನ್ನು ವಿದ್ಯಾರ್ಥಿಯಾದ ಶ್ರೀತೀನ್ ಅವರು ತಮ್ಮ ಕೈಚಳಕದಿಂದ ನೋಡುಗರಿಗೆ ವಿಭಿನ್ನವಾಗಿ ಕಾಣುವಂತೆ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.

ಕಾವೇರಿ ಛಾಯೆಯ ಚಿತ್ರ: ಕರ್ನಾಟಕ ಮತ್ತು ತಮಿಳುನಾಡಿಗೂ ಕಾವೇರಿ ನೀರಿನ ಕಲಹ ಕುರಿತಂತೆ ನಮ್ಮ ರಾಜ್ಯದ ಜನರು ಕಾವೇರಿ ನದಿಯಲ್ಲಿ ನೀರಿಲ್ಲದೆ ನಾಡಿನ ಜನರು ಕೊಳದಲ್ಲಿ ಕೂತುಕೊಂಡು ಕಣ್ಣಿರು ಹಾಕುತ್ತಿರುವಂತೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಕೆಳಗೆ ಕುಳಿತು ನಮ್ಮ ಜನರ ಕಣ್ಣಿರನ್ನು ಕುಡಿಯುವಂತೆ ಚಿತ್ರಿಸಿರುವ ಕಲಾಕೃತಿ ನೋಡುವ ಪ್ರತಿಯೊಬ್ಬ ವ್ಯಕ್ತಿಗೂ ಮನದಲ್ಲಿ ಕಿನ್ನತೆ ತರುವಂತೆ ವಿಭಿನ್ನವಾಗಿ ಮೂಡಿಬಂದಿದೆ.

 ನಾವೆಲ್ಲ ಭಾರತಾಂಬೆ ಮಕ್ಕಳು ನಾವೆಲ್ಲ ಒಂದೇ: ನಮ್ಮ ಭಾರತ ಸರ್ವಧರ್ಮ ಪೋಷಕ ದೇಶವಾಗಿರುವುದರಿಂದ, ಈ ದೃಷ್ಟಿಕೋನವನ್ನು ಮನಸ್ಸಿನಲಿಟ್ಟುಕೊಂಡು ಥರ್ಮಕೋಲಿನಿಂದ ಹಿಂದೂ ದೇವಾಲಯ, ಕ್ರಿಶ್ಚಿಯನ್ ಚರ್ಚ್, ಮುಸ್ಲಿಂರ ಮಸೀದಿ ನಿರ್ಮಿಸಿ ಈ ಮೂರನ್ನು ಎಲ್ಲ ಜನರು ಬೇಸುಗೆಯ ರೀತಿ ಸುತ್ತುವರದಿರುವಂತೆ ವಿದ್ಯಾರ್ಥಿಗಳು ನಿರ್ಮಿಸಿರುವುದು ನೋಡುವ ಜನಕ್ಕೆ ಖುಷಿ ನೀಡುತ್ತಿದೆ.

See also  ಮಂಡ್ಯದ ಬ್ಯಾಂಕ್‍ನಿಂದ 15 ಲಕ್ಷ ಎಗರಿಸಿದರು!

ಪ್ರೇಕ್ಷಣಿಯ ಸ್ಥಳಗಳ ಸೊಬಗು: ದೇಶ ವಿದೇಶಗಳಿಂದ ವರ್ಷ 365 ದಿನಗಳು ನೋಡ ಬರುವ ಪ್ರೇಕ್ಷಣಿಯ ಸ್ಥಳಗಳಾದ ಪಟ್ಟದಕಲ್ಲು, ಬಾದಾಮಿ, ಗೋಲ್ ಗುಂಬಜ್, ಶ್ರೀರಂಗಪಟ್ಟಣ, ಸೇರಿದಂತೆ ಮೈಸೂರಿನ ಸ್ಥಳಗಳಾದ ಚಾಮುಂಡಿಬೆಟ್ಟ, ಕಾವೇರಿಪುರ ಕೆರೆ, ವರುಣಕೆರೆ, ಕೆ.ಆರ್.ವೃತ್ತ, ಕಾರಂಜಿಕೆರೆ, ಮನಾರ್ಸ್ ಮಾರುಕಟ್ಟೆ, ಆಶ್ವರೋಹಿತ ದಳ ಹಾಗೂ ರಾತ್ರಿ ವೇಳೆ ದೀಪದಿಂದ ಕಂಗೊಳಿಸುವ ಅರಮನೆ ಸೇರಿದಂತೆ ಮೈಸೂರಿನ ಪ್ರಮುಖ ವೃತ್ತಗಳು ದಸರಾ ವೇಳೆಯಲ್ಲಿ ದೀಪದಿಂದ ಕಂಗೊಳಿಸುವ ಪರಿಯನ್ನು ಕಾವಾ ವಿದ್ಯಾರ್ಥಿಯಾದ ಹರ್ಷ ತನ್ನ ಕೈಚಳಕದಿಂದ ನಿರ್ಮಿಸಿದ್ದು ಕಾವಾಮೇಳಕ್ಕೆ ಬಂದ ಪ್ರತಿಯೊಬ್ಬ ವ್ಯಕ್ತಿಯನ್ನು ತನ್ನ ಕಡೆ ಸೆಳೆಯಿತು.

ಹಳ್ಳಿ ಜನರ ಜೀವನದ ಕಲಾಕೃತಿಗಳು: ಹಳ್ಳಿಯ ಜನರು ಪ್ರತಿನಿತ್ಯ ತಮ್ಮ ಜೀವನದ ಜಂಜಾಟದಲ್ಲಿ ವಿವಿಧ ಬಗೆಯ ಕೆಲಸ ಕಾರ್ಯದಲ್ಲಿ ನಿರತರಾಗಿರುವ ಹಾಗೂ ಕೃಷಿಯಲ್ಲಿ ತೂಡಗಿರುವುದು, ಮಹಿಳೆಯರು ಇತರೆ ಕೆಲಸದಲ್ಲಿ ನಿತರರಾಗಿರುವ ವಿವಿಧ ಬಗೆಯ ಚಿತ್ರಾವಳಿಗಳುನ್ನು ನಿರ್ಮಿಸಲಾಗಿದೆ.

ಒಟ್ಟಿನಲ್ಲಿ ಈ ಮೇಳದಲ್ಲಿ ನಮ್ಮ ಸಂಸ್ಕೃತಿ, ಸಾಮಾಜಿಕ ಕಾಳಜಿ, ಪರಿಸರ ಮತ್ತು ಜಲ ಸಂರಕ್ಷಣೆ, ಸ್ನೇಹ ಸಂಬಂಧ, ಆರೋಗ್ಯ ಮುಂತಾದ ವಿಷಯಗಳನ್ನು ಕುರಿತು ಜನರಲ್ಲಿ ಅರಿವು ಮುಡಿಸುವ ಉದ್ದೇಶ ಹೊಂದಿದ್ದು, ಈ ಮೇಳವು ಯಶಸ್ವಿಯಾಗಿ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು