News Kannada
Monday, September 26 2022

ಮೈಸೂರು

ಶ್ರೀನಿವಾಸಪ್ರಸಾದ್ ವಿರುದ್ಧ ಕೈ ಶಕ್ತಿ ಪ್ರದರ್ಶನ - 1 min read

Photo Credit :

ಶ್ರೀನಿವಾಸಪ್ರಸಾದ್ ವಿರುದ್ಧ ಕೈ ಶಕ್ತಿ ಪ್ರದರ್ಶನ

ನಂಜನಗೂಡು: ಶ್ರೀನಿವಾಸಪ್ರಸಾದ್ ರಾಜೀನಾಮೆ ನೀಡಿದ ಬಳಿಕ ಶಕ್ತಿ ಪ್ರದರ್ಶನಕ್ಕೆ ಇಳಿದಿರುವ ಕಾಂಗ್ರೆಸ್ ನಂಜನಗೂಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಸಿ ಶ್ರೀನಿವಾಸಪ್ರಸಾದ್ ವಿರುದ್ಧ ತೊಡೆ ತಟ್ಟಿದ್ದಾರೆ.

ನಂಜನಗೂಡು ಎಪಿಎಂಸಿ ಆವರಣದಲ್ಲಿ ಏರ್ಪಡಿಸಿದ್ದ ಬೃಹತ್ ಕಾರ್ಯಕರ್ತರ ಸಮಾವೇಶ ಶ್ರೀನಿವಾಸಪ್ರಸಾದ್ ಅವರನ್ನು ತೆಗಳುವುದರಲ್ಲೇ ಮುಕ್ತಾಯವಾಗಿದ್ದು ವಿಶೇಷ.

ಕಾಂಗ್ರೆಸ್ ಪಕ್ಷಕ್ಕೆ 123ವರ್ಷಗಳ ಇತಿಹಾಸವಿದೆ. ಹೀಗಿರುವಾಗ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀನಿವಾಸಪ್ರಸಾದರವರ ಮೇಲೆ ದ್ವೇಷ, ಅಸೂಯೇ, ಕೀಳರಿಮೆ ಇದ್ದಿದ್ದರೆ ಅವರನ್ನು ಮಂತ್ರಿ ಮಾಡಿ ಕಂದಾಯ ಖಾತೆ ಕೊಡುತ್ತಿರಲಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಶ್ರೀನಿವಾಸ ಪ್ರಸಾದ ಅವರನ್ನು ಮಂತ್ರಿ ಮಂಡಲದಿಂದ ಕೈಬಿಡುವಾಗ ಮಂತ್ರಿಮಂಡಲದ ಪರಿಷತ್ ನಲ್ಲಿ ಚರ್ಚೆ ನಡೆಸಿಯೇ ಅವರು ಸೇರಿದಂತೆ 14 ಸಚಿವರನ್ನು ಕೈಬಿಟ್ಟಿದ್ದೇನೆ. ಅವರೆಲ್ಲ ಈಗ ಸುಮ್ಮನಿಲ್ಲವೆ ಅಧಿಕಾರವಿದ್ದರೆ ಪಕ್ಷಬೇಕು, ಅಧಿಕಾರವಿಲ್ಲದಿದ್ದರೆ ಪಕ್ಷಬೇಡವೆ ಎಂದು ಪ್ರಶ್ನಿಸಿದ ಸಿಎಂ ಅವರ ರಾಜೀನಾಮೆ ದುರಾದೃಷ್ಟಕರ. ಶಾಸಕರಿಗೆಲ್ಲ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಅವರು ನನ್ನನ್ನು ಏಕವಚನದಲ್ಲಿ ಬಾಯಿಗೆ ಬಂದಂತೆ ಬೈಯ್ದಿದ್ದಾರೆ. ಅದರ ಬಗ್ಗೆ ಬೇಸರವಿಲ್ಲ. ಆದರೆ ನೆನಪಿರಲಿ ಇಂಥ ನೂರು ಪ್ರಸಾದರು ಹುಟ್ಟಿಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಅದು ನನ್ನ ಮತ ಕ್ಷೇತ್ರ ವರುಣಾ ಕ್ಷೇತ್ರದ ಜನರಿಂದ ಮಾತ್ರ ಸಾಧ್ಯ ಎಂದರು. ಉತ್ತರ ಕರ್ನಾಟಕದ ದಲಿತರ ಹಿತ ಬಯಸುವ ಸಲುವಾಗಿ ಅಲ್ಲಿನ ದಲಿತ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದೇನೆ. ದಲಿತರ ಉದ್ಧಾರ ಶ್ರೀನಿವಾಸಪ್ರಸಾದರಿಗೆ ಬೇಡವೆ? ನನ್ನನ್ನು ದಲಿತ ವಿರೋಧಿ ಎನ್ನುವ ಅವರು ದಲಿತ ವಿರೋಧಿ ಯಾರು ಎಂಬುವುದನ್ನು ಮನದಟ್ಟು ಮಾಡಿಕೊಳ್ಳಲಿ.

ದಲಿತರು ಮತ್ತು ಹಿಂದುಳಿದವರಿಗಾಗಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಈ ದೇಶದಲ್ಲೇ ಪ್ರಥಮವಾಗಿದ್ದು ಇದು ಇವರಿಗೆ ಕಾಣಿಸುವುದಿಲ್ಲವೆ? ಎಂದ ಅವರು ಕೈಗಾರಿಕೆಯಲ್ಲಿ ಕರ್ನಾಟಕ ರಾಜ್ಯನಂ.1 ಸಾನ ಪಡೆದು ಗುಜರಾತನ್ನು ಹಿಂದೆಹಾಕಿದೆ.ಈ ರಾಜ್ಯದ ಆರು ಕೋಟಿ ಜನರ ಪ್ರೀತಿ, ವಿಶ್ವಾಸದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ, ಹೊರತು ಶ್ರೀನಿವಾಸಪ್ರಸಾದರಿಂದ ಅಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಗೆಲ್ಲಿಸಿರುವುದಾಗಿ ಹೇಳುವ ಅವರು ಅದಕ್ಕೂ ಹಿಂದೆ ಐದು ಬಾರಿ ಗೆಲ್ಲಿಸಿದ್ದು ಯಾರು ಎಂದು ಕೇಳಿದರು. ನಂಜನಗೂಡು ಕ್ಷೇತ್ರದಲ್ಲಿ ಮರುಚುನಾವಣೆ ನಡೆಸುವುದು ಅನಿವಾರ್ಯವಾಗಿರುವುದರಿಂದ ಕಾರ್ಯಕರ್ತರು, ಪ್ರಸಾದ್ ಬಿಟ್ಟುಹೋಗಿರುವ ಕಾಂಗ್ರೆಸ್ ಮನೆಯನ್ನು ಸ್ವಚ್ಛಗೊಳಿಸಿ ಮತ್ತೆ ಸುಭದ್ರಗೊಳಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಸಚಿವ ಹೆಚ್.ಎಸ್.ಮಹದೇವಪ್ರಸಾದ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಗೃಹಸಚಿವ ಪರಮೇಶ್ವರ್, ಸಂಸದ ಧ್ರುವನಾರಾಯಣ್ ಸೇರಿದಂತೆ ಹಲವು ಮುಖಂಡರು ಇದ್ದರು.

 
 

See also  ಮೇ 8ಕ್ಕೆ ಮೈಸೂರು ಮಹಾರಾಜ್ ಯಧುವೀರ್ ಮದುವೆ..?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು