News Kannada
Tuesday, September 27 2022

ಮೈಸೂರು

ಸಂಬಳವಿಲ್ಲದೆ ಆತ್ಮಹತ್ಯೆಗೆ 300 ಅಡಿ ಚಿಮಣಿ ಏರಿದ ಫಾಲ್ಕಾನ್ ನೌಕರ - 1 min read

Photo Credit :

ಸಂಬಳವಿಲ್ಲದೆ ಆತ್ಮಹತ್ಯೆಗೆ 300 ಅಡಿ ಚಿಮಣಿ ಏರಿದ ಫಾಲ್ಕಾನ್ ನೌಕರ

ಮೈಸೂರು: ಫಾಲ್ಕಾನ್ ಫ್ಯಾಕ್ಟರಿಯಲ್ಲಿ ಕಳೆದ ಎರಡು ವರ್ಷಗಳಿಂದ ಸಂಬಳ ಕೊಡದೆ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ನೌಕರ 300 ಅಡಿ ಚಿಮಣಿ ಗೋಪುರವೇರಿ ಆತ್ಮಹತ್ಯೆ ಮಾಡಿಕೊಳ್ಳವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ನಗರದ ಕೆ.ಆರ್ ರಸ್ತೆಯಲ್ಲಿರು ಫಾಲ್ಕಾನ್ ಟೈರ್ ಫ್ಯಾಕ್ಟರಿಯಲ್ಲಿ ಖಾಯಂ ಹಾಗೂ ಅರೆಕಾಲಿಕ ಎರಡು ಸಾವಿರ ನೌಕರರು ಇದ್ದು ಕಳೆದ ಎರಡು ವರ್ಷಗಳಿಂದಲೂ ಸರಿಯಾಗಿ ಸಂಬಳ ನೀಡದೆ ಆಡಳಿತ ಮಂಡಳಿ ಸತಾಯಿಸುತ್ತಿದ್ದು ಹಲವು ತಿಂಗಳುಗಳ ಕಾಲ ಫ್ಯಾಕ್ಟರಿಯನ್ನು ಕ್ಲೋಸ್ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿಯವರ ಮದ್ಯಪ್ರವೇಶದಿಂದ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಿದರು. ನಂತರವೂ ನೌಕರರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದು ಇದರಿಂದ ಮನನೊಂದ 5ಜನ ನೌಕರರು ಆತ್ಮಹತ್ಯೆಗೆ ಯತ್ನಿಸಿದ್ದು ಅದರಲ್ಲಿ ಇಬ್ಬರು ನೌಕಕರು ಮರಣ ಹೊಂದಿದ್ದಾರೆ.

ಇಂದು ಫಾಲ್ಕಾನ್ ಕಾರ್ಖಾನೆಯ 300 ಅಡಿ ಎತ್ತರದ ಚಿಮಣಿ (ಬಾಯ್ಲರ್) ಏರಿ ಆತ್ಮಹತ್ಯೆ ಮಾಡಿಕೊಳ್ಳವುದಾಗಿ ನೌಕರ ನಾಗರಾಜ್ ಯತ್ನಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಇತನನ್ನು ಮನವೊಲಿಸುತ್ತಿದ್ದು ಯಾವುದೇ ಪ್ರಯೋಜನವಾಗಿಲ್ಲ. ಸ್ಥಳದಲ್ಲಿ ಜನ ಜಮಾಯಿಸಿದ್ದು ಬಿಗಿವಿನ ವಾತಾವರಣ ಉಂಟಾಗಿದೆ.

ವೇತನ ಬಾರದ ಹಿನ್ನೆಲೆ ಮುನ್ನುರು ಅಡಿ ಎತ್ತರದ ಬಾಯ್ಲರ್ ಏರಿದ ಮೈಸೂರಿನ ಫಾಲ್ಕಾನ್ ಕಾರ್ಖಾನೆಯ ನೌಕರ ನಾಗರಾಜ್, ಕಳೆದ ಎರಡು ವರ್ಷಗಳಿಂದ ವೇತನವಿಲ್ಲದೆ ನೌಕರರು ಪರದಾಡುತ್ತಿದ್ದು, ಸಿ.ಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿದ್ರು ಏನುವಪ್ರಯೋಜನವಾಗಿಲ್ಲ, ಕುಟುಂಬ ನಿರ್ವಹಣೆ ಮಾಡಲು ಸಂಕಷ್ಟವಾಗಿದ್ದು, ಈ ಹಿನ್ನೆಲೆ ಮುನ್ನೂರು ಅಡಿ ಎತ್ತರದ ಬಾಯ್ಲರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದು, ಹೈಪ್ ನಂಬರ್ 9591039615 ನಾಗರಾಜ್ ಬಾಯ್ಲರ್ ಏರಿರುವ ನೌಕರನಾಗಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಕಾರ್ಯ ನಡೆಯುತ್ತಿದೆ. ನಾಗರಾಜ್ ಮನವೊಲಿಸಲು  ಮೇಟಗಳ್ಳಿ ಪೊಲೀಸರು ಪ್ರಯತ್ನಿಸಿದ್ದು, ಸ್ಥಳದಲ್ಲಿ ಆತಂಕದ ವಾತವರಣ ಸೃಷ್ಟಿಯಾಗಿದೆ.

See also  ಬಿ.ವೈ.ವಿಜಯೇಂದ್ರ ಅಭಿಮಾನಿ ನೇಣಿಗೆ ಶರಣು?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು