ಮೈಸೂರು: ಪ್ರತಿಪಕ್ಷಗಳು ಕರೆ ನೀಡಿದ ಭಾರತ್ ಬಂದ್ ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬ್ಯಾಂಕ್, ಶಾಲಾ-ಕಾಲೇಜು, ಅಂಗಡಿ ಮುಂಗಟುಗಳು, ಸಾರಿಗೆ ಸಂಚಾರ ಎಂದಿನಂತೆ ಇದ್ದು ನೋಟ್ ಬ್ಯಾನ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
500 ಮತ್ತು 1000 ಸಾವಿರ ಮುಖ ಬೆಲೆಯ ನೋಟ್ ಗಳನ್ನ ದಿಢೀರ್ ಬ್ಯಾನ್ ಮಾಡಿರುವುದನ್ನು ಖಂಡಿಸಿ ವಿಪಕ್ಷಗಳು ಇಂದು ಭಾರತ್ ಬಂದ್ ಗೆ ಕರೆ ನೀಡಿತ್ತು. ಸಾರ್ವಜನಿಕ ಆಸ್ತಿ ಪಾಸ್ತಿಗೆ ಯಾವುದೇ ನಷ್ಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಗೃಹ ಸಚಿವರ ಸೂಚನೆ ನೀಡಿದ್ದರಿಂದ ನಗರದಲ್ಲಿ ಕೇವಲ ಪ್ರತಿಭಟನೆಗಷ್ಟೆ ಭಾರತ್ ಬಂದ್ ಸೀಮಿತವಾಗಿದೆ.
ದೇವರಾಜ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಾಹಿವಾಟು ಆರಂಭಗೊಂಡಿದ್ದು, ಸಾರಿಗೆ, ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಜಿಲ್ಲೆಯ ಯಾವುದೇ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿಲ್ಲ. ಮೈಸೂರು ವಿಶ್ವವಿದ್ಯಾನಿಲಯದ ಬಿಎ, ಬಿಕಾಮ್, ಬಿಎಸ್ಸಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಯಿಂದ ಸಂಭ್ರಮಾಚರಣೆ:
ಪ್ರತಿಪಕ್ಷಗಳು ಕರೆ ನೀಡಿದ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಿಜೆಪಿ ಕಾರ್ಯಕರ್ತರು ಸ್ವಚ್ಚತ ಕಾರ್ಯಗಳಲ್ಲಿ ತೊಡಗಿದ್ದು ಜನರಿಗೆ ಗುಲಾಬಿ ಹೂ ನೀಡಿ ಸಂಭ್ರಮಾಚರಣೆ ಮಾಡಿದರೆ ಜಿಲ್ಲಾ ಕಾಂಗ್ರೆಸ್ ಗಾಂಧಿ ಪ್ರತಿಮೆ ಬಳಿ ಶಾಂತಿಯುತ ಪ್ರತಿಭಟನೆ ನಡೆಸಿ ಆಕ್ರೋಶ್ ದಿನಗೆ ಆಕ್ರೋಶ ವ್ಯಕಪಡಿಸಿದರು.
ಭಾರತ್ ಬಂದ್ ಹಿನ್ನಲ್ಲೆಯಲ್ಲಿ ನಗರಾದ್ಯಂತ ಹೆಚ್ಚಿನ ಪೊಲೀಸ್ ಬಂದೂ ಬಸ್ತ್ ಏರ್ಪಡಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಹೆಚ್ಚಿನ ಬಂದೂಬಸ್ತ್ ಏರ್ಪಡಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಡಾ.ಹೆಚ್.ಟಿ ಶೇಖರ್ ತಿಳಿಸಿದ್ದಾರೆ.