ಮೈಸೂರು: ಕಾಳಧನ, ಭ್ರಷ್ಟಾಚಾರ ಮತ್ತು ಖೋಟಾ ನೋಟು ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರ 500 ಮತ್ತು 1000 ರೂ ನೋಟು ರದ್ದು ಮಾಡಿರುವುದನ್ನು ವಿರೋಧಿಸಿ ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಗೆ ಮೈಸೂರಿನಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ನಗರದ ಬಸ್ ನಿಲ್ದಾಣ ಎಂದಿನಂತೆ ಪ್ರಯಾಣಿಕರಿಂದ ತುಂಬಿತ್ತು. ಮೈಸೂರಿನ ಪ್ರಮುಖ ಆಕರ್ಷಣೆಯಾದ ಅರಮನೆಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ಕಂಡುಬಂತು. ಒಟ್ಟಿನಲ್ಲಿ, ಮೈಸೂರಿಗರು ಆಕ್ರೋಶ ದಿನಾಚರಣೆ ಗೋಜಿಗೆ ಹೋಗದೆ, ಎಂದಿನಂತೆ ತಮ್ಮ ಕಾಯಕದಲ್ಲಿ ತೊಡಗಿದ್ದರು.