ಮೈಸೂರು: ಹಳೆ ನೋಟು ರದ್ದು ಕಾಳಧನಿಕರ ನಿದ್ದೆಗೆಡಿಸಿದರೆ ಗಿರಿಜನರಿಗೆ ದಿನನಿತ್ಯದ ಕೂಲಿಯೇ ಸಿಗದೆ ಒಂದೊತ್ತಿನ ಊಟಕ್ಕೂ ಪರದಾಡುತಿದ್ದು ಊಟಕ್ಕಾಗಿ ಕೆರೆಯಲ್ಲಿ ಮೀನು ಹಿಡಿಯುವ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ದುಸ್ಥಿತಿಗೆ ಬಂದಿದ್ದಾರೆ.
ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಗಿರಿಜನ ಹಾಡಿಗಳಿದ್ದು ಇವರ ಪ್ರತಿದಿನ ಕೆಲಸಕ್ಕಾಗಿ ಕೊಡಗಿನ ಕಾಫಿ ತೋಟಕ್ಕೆ ಹೋಗುತ್ತಾರೆ. ಪ್ರತಿದಿನ ಕೂಲಿ ಮಾಡಿದ ಹಣವನ್ನು ಅಂದೇ ತೆಗೆದುಕೊಂಡು ಮನೆಗೆ ಸಾಮನುಗಳನ್ನ ತರುತ್ತಾರೆ. ಅಲ್ಲದೆ ಅಲ್ಪ ಸ್ವಲ್ಪ ಹಣದಲ್ಲಿ ಮಧ್ಯವನ್ನು ಸೇವಿಸುತ್ತಾರೆ. ಇದು ಅವರ ದಿನನಿತ್ಯದ ದಿನಚರಿಯಾಗಿದ್ದು, ಇತ್ತಿಚಿಗೆ 500 ಮತ್ತು 1000 ಮುಖ ಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿದ್ದು ಪರಿಣಾಮ ತೋಟದ ಮಾಲೀಕರು ಕೂಲಿ ಕಾರ್ಮಿಕರಿಗೆ ಹಳೆಯ 500 ಮತ್ತು ಸಾವಿರ ನೋಟುಗಳನ್ನು ನೀಡುತ್ತಿದ್ದು ಆದರೆ ಅಂಗಡಿಯವರು ಈ ನೋಟ್ ಗಳನ್ನು ತೆಗೆದುಕೊಳ್ಳುತ್ತಿಲ್ಲ. ತೋಟದ ಮಾಲೀಕ ಹೊಸ ನೋಟುಗಳನ್ನು ಕೊಡುತ್ತಿಲ್ಲ. ಇದರಿಂದ ಕಾರ್ಮಿಕರು ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ್ದಾರೆ.
ಊಟಕ್ಕಾಗಿ ಕೆರೆಯಲ್ಲಿ ಮೀನು ಹಿಡಿಯುತ್ತಿರುವುದು:
ಈ ಕಡೆ ತೊಟದ ಕೆಲಸವೂ ಇಲ್ಲದೆ ಊಟಕ್ಕೂ ಸಮಸ್ಯೆಯಾಗಿದ್ದು ಇದರಿಂದ ಗಿರಿಜನ ಮಹಿಳೆಯರು ಹಾಗೂ ಗಂಡಸರು ಕೆರೆಯಲ್ಲಿ ಸಾಲಗಿ ಗಾಳ ಹಾಕಿ ಮೀನು ಹಿಡಿದು ಅದನ್ನೇ ತೆಗೆದುಕೊಂಡು ಹೋಗಿ ಬೇಯಿಸಿ ಊಟ ಮಾಡುತ್ತಿದ್ದಾರೆ. ಜೊತೆಗೆ ಕೆರೆಯ ಅಕ್ಕಪಕ್ಕದಲ್ಲಿ ಸಿಗುವ ಗೆಡ್ಡೆ ಗೆಣಸುಗಳನ್ನು ಸಂಗ್ರಹ ಮಾಡಿ ಅದನ್ನೇ ತಿಂದು ಜೀವನ ಸಾಗಿಸುತ್ತಿದ್ದಾರೆ.
ಬ್ಯಾಂಕ್ ನಲ್ಲಿ ಅಕೌಂಟ್ ಇಲ್ಲ:
ಕೂಲಿ ಕೆಲಸವನ್ನು ಮಾಡಿ ಜೀವನ ಸಾಗಿಸುವ ಗಿರಿಜನರಲ್ಲಿ ಶೇ 99 ರಷ್ಟು ಮಂದಿಗೆ ಬ್ಯಾಂಕ್ ನಲ್ಲಿ ಅಕೌಂಟ್ ಇಲ್ಲ. ಅಕೌಂಟ್ ಮಾಡಿಸಲು ಇವರ್ಯಾರು ಪ್ರಯತ್ನ ಸಹ ಪಟ್ಟಿಲ್ಲ. ಇದರಿಂದ ಈಗ ಸಮಸ್ಯೆ ಉಂಟಾಗಿದ್ದು ಗಿರಿಜನರಿಗೆ ಬ್ಯಾಂಕ್ ನಲ್ಲಿ ಪ್ರಧಾನ ಮಂತ್ರಿ ಅವರ ಯೋಜನೆಯಿಂದ ಬ್ಯಾಂಕ್ ಅಕೌಂಟ್ ಮಾಡಿಸಲು ಗ್ರಾಮ ಪಂಚಾಯಿತಿಗಳು ಮುಂದಾಗಬೇಕೆಂದು ಗಿರಿಜನರ ಯುವಕ ಆಗ್ರಾಹಿಸಿದ್ದು ಈ ಬಗ್ಗೆ ಶೀಘ್ರವೇ ಗಿರಿಜನರ ಪಟ್ಟಿಯನ್ನು ಸಿದ್ದಪಡಿಸಿ ಬ್ಯಾಂಕ್ ಅಕೌಂಟ್ ಮಾಡಿಸಲಾಗುವುದು ಎನ್ನುತ್ತಾರೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶೀ ಮೋಹನ್.