News Kannada
Monday, December 05 2022

ಮೈಸೂರು

ಅರಮನೆ ಫೋಟೋಶೂಟ್ ಪ್ರಕರಣ: ಸರ್ಕಾರದ ಬಳಿ ಗುಪ್ತ ವರದಿ

Photo Credit :

ಅರಮನೆ ಫೋಟೋಶೂಟ್ ಪ್ರಕರಣ: ಸರ್ಕಾರದ ಬಳಿ ಗುಪ್ತ ವರದಿ

ಮೈಸೂರು: ವಿಶ್ವ ವಿಖ್ಯಾತ ಅಂಬಾವಿಲಾಸ್ ಅರಮನೆಯ ನಿಷೇದಿತ ಪ್ರದೇಶದ ಫೋಟೋ ಶೂಟ್ ಪ್ರಕರಣದ ವರದಿಯನ್ನ ಗುಪ್ತವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

ಕಳೆದ ಮೇ ತಿಂಗಳನಲ್ಲಿ ಅರಮನೆಯ ಅಂಬಾ ವಿಲಾಸ್ ಹಾಲ್ ಹಾಗೂ ಕಲ್ಯಾಣ ಮಂಟಪದಲ್ಲಿ ನಿವೃತ್ತ ಐಎಎಸ್ ಅಧಿಕಾರಿಯ ಪುತ್ರ ಹಾಗೂ ಸೊಸೆಯ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಪ್ರಕರಣ ಸಾಮಾಜಿಕ ಜಾಲಾತಾಣಗಳ ಮೂಲಕ ಬೆಳಕಿಗೆ ಬಂದಿತು. ಈ ಹಿನ್ನಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸ್ ಕಮಿಷನರ್ ಗೆ ತಿಳಿಸಿದರು.

ಈ ತನಿಖೆ ನಡೆಸಿದ ನಗರ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಡಾ.ಹೆಚ್.ಟಿ ಶೇಖರ್ ತನಿಖೆಯ ವರದಿಯನ್ನ ಹಿಂದಿನ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು ಅವರು ವರದಿಯನ್ನ ಗುಪ್ತವಾಗಿ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಹಕರಿಸಿದ 20 ಜನ  ಪೊಲೀಸ್ ಸಿಬ್ಬಂದಿಯನ್ನ ವರ್ಗಾವಣೆ ಸಹ ಮಾಡಲಾಗಿದೆ.
ಈ ಬಗ್ಗೆ ಇಂದಿನ ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ಫೋಟೋಶೂಟ್ ಪ್ರಕರಣದ ಗುಪ್ತ ವರದಿ ಸರ್ಕಾರದ  ಮುಖ್ಯ ಕಾರ್ಯದರ್ಶಿ ಬಳಿ ಇದ್ದು ಇದರ ಬಗ್ಗೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ತಿಳಿಸಿದ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟ ಪಡಿಸಿದರು.  

See also  ಶಿಥಿಲಾವಸ್ಥೆಯಲ್ಲಿರುವ ಆಲನಹಳ್ಳಿ ಸರ್ಕಾರಿ ಶಾಲೆಯ ಗೋಳು ಕೇಳೋರಿಲ್ಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು