ಮೈಸೂರು: ಮರದ ಬುಡದಲ್ಲಿ, ಪಾಳು ಭೂಮಿಯಲ್ಲಿ , ರಸ್ತೆ ಬದಿಯಲ್ಲಿ, ಖಾಲಿ ಸೈಟುಗಳಲ್ಲಿ ಮರದ ಪೊಟರೆಗಳಲ್ಲಿ ಟೆಂಟು ಕಟ್ಟಿ ಕೊಂಡು ಜನ ಜೀವನ ಸಾಗಿಸುವ ಗುಂಪುಗಳನ್ನು ನಾವು ಸಾಮಾನ್ಯವಾಗಿ ನೋಡಿದ್ದೇವೆ ಆದರೆ ಮೈಸೂರು ನಗರದ ಹೆಬ್ಬಾಳು ಬಡಾವಣೆಯ ಮದುವೆಯ ಛತ್ರದಲ್ಲಿ ಸುಮಾರು 55 ವರ್ಷದ ಮಹಿಳೆಯೋರ್ವಳು ಸುಮಾರು 4.5 ವರ್ಷಗಳಿಂದಲೂ ತನ್ನ ಜೀವನವನ್ನು ಡ್ರೈನೇಜ್ ಒಂದರಲ್ಲಿ ಜೀವನ ಸಾಗಿಸುತ್ತಾ ಬಂದಿದ್ದಾಳೆ.
ಮಹಿಳೆಯೋರ್ವಳು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಭದ್ರತೆ ಹಾಗೂ ವ್ಯವಸ್ಥೆಯು ಇಲ್ಲ. ಆದರೆ ಈಕೆ ಒಂಟಿಯಾಗಿ ರಸ್ತೆ ಬದಿಯಲ್ಲಿ ಡ್ರೈನೇಜ್ ಒಂದರಲ್ಲಿ ಜೀವನ ಸಾಗಿಸುತ್ತಾ ಇದ್ದಳು ಇಂತಹ ಒಂದು ದುರ್ದೈವ ಸಂಗತಿಯನ್ನು ನಾವು ಕಾಣಬಹುದಾಗಿದೆ.
ಈಕೆಯ ಆಹಾರ: ಮದುವೆ ಸಮಾರಂಭಗಳಲ್ಲಿ ತಿಂದುಂಡು ಹೊಟ್ಟೆ ತುಂಬಿ ಕಸದ ತೊಟ್ಟಿಗಳಲ್ಲಿ ಬಿಸಾಡಿರುವ ಅನ್ನವೇ ಈಕೆಯ ಜೀವನ ಪದ್ದತಿಯಾಗಿದೆ . ಈಕೆಯ ಒಂದು ವಿಶಿಷ್ಟ ಎಂದರೆ ಯಾರನ್ನೂ ಸಹ ಭಿಕ್ಷೆ ಕೇಳುವುದಿಲ್ಲ ಸ್ವಾಭಿಮಾನದ ಹಂಗಿಲ್ಲದೆ ಜೀವನ ಸಾಗಿಸುತ್ತಿದ್ದಾಳೆ. ಇನ್ನೊಂದು ಕುತೂಹಲದ ವಿಷಯವೆಂದರೆ ಈಕೆ ತನ್ನ ಜೀವನ ಸಾಗಿಸಿಕೊಳ್ಳಲು ನಿರ್ದಿಷ್ಟ ಕೆಲಸವಿದೆ ಊಟಕ್ಕೂ ಪರಿರ್ವತಿಸಬೇಕಾದ ಪರಿಸ್ಥಿತಿಯಿದ್ದರೂ ಒಂದು ನಾಯಿಯನ್ನು ತನ್ನೊಟ್ಟಿಗೆ ಇಟ್ಟು ಕೊಂಡು ಪ್ರತಿನಿತ್ಯ ಊಟವನ್ನು ಅರೆಸಿ ದೊರಕಿಸಿ ಕೊಂಡು ನಾಯಿಗೂ ಒಂದು ಪಾಲನ್ನು ನೀಡಿ ಸಾಕುತ್ತಿದ್ದಾಳೆ. ಇವಳಿಗೆ ಕನ್ನಡ ಭಾಷೆ ಬಾರದು ತಮಿಳು ಭಾಷೆ ಮಾತನಾಡುತ್ತಾಳೆ. ಈಕೆಗೆ ಈ ನಾಯಿಯೂ ಸ್ಪಂದಿಸುತ್ತಾ ಆಕೆಯೊಟ್ಟಿಗೆ ಇರುವುದು ಒಂದು ಭಾವನಾತ್ಮಕ ಸಂಗತಿ.
ಡಿ.ಅನಂತರಾಜು ಎಂಬುವರು ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಈಕೆಯ ದಯಾನೀಯ ಸ್ಥಿತಿಯನ್ನು ಹತ್ತಿರದಿಂದ ಕಂಡು ಮರುಗುತ್ತಿದ್ದರು. ಇಂತಹ ಒಂದು ಸ್ಥಿತಿಯನ್ನ ಕಂಡು ಅವರು ಗುರುತಿಸಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಇರುವ ಕರುಣಾಲಾಯ ಟ್ರಸ್ಟ್ ನಲ್ಲಿ ಸೇರಿಸಿ ಮಾನವೀಯತೆಗೆ ಪಾತ್ರರಾಗಿದ್ದಾರೆ.