ಮೈಸೂರು: ದಾಖಲೆಗಳಿಲ್ಲದೆ 22 ಲಕ್ಷಕ್ಕೂ ಹೆಚ್ಚು ಹೊಸ ನೋಟುಗಳನ್ನ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನ ಬಂದಿಸುವಲ್ಲಿ ವಿದ್ಯಾರಣ್ಯಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರು ಗುರುಲಿಂಗ(42), ಶ್ರೀನಿವಾಸ್ (38). ಇವರು ನಿನ್ನೆ ರಾತ್ರಿ ಮೈಸೂರಿನ ಸೂಯೆಜ್ ಫಾರಂ ರಸ್ತೆಯಲ್ಲಿ ತೆರಳುತ್ತಿರುವಾಗ ಕಾರಿನ ತಪಾಸಣೆ ವೇಳೆ ಯಾವುದೇ ದಾಖಲೆಗಳಿಲ್ಲದೆ 22,26,000 ಹೊಸ 2 ಸಾವಿರ ಮುಖಬೆಲೆಯ ಹಣ ಪತ್ತೆಯಾಗಿದ್ದು ಈ ಬಗ್ಗೆ ದಾಖಲೆಗಳನ್ನ ಕೇಳಿದಾಗ ದಾಖಲೆಗಳನ್ನು ನೀಡಲು ತಡಬಡಿಸಿದಾಗ ಈ ಇಬ್ಬರು ಹಾಗೂ ಕಾರನ್ನು ವಶಕ್ಕೆ ಪಡೆದ ವಿದ್ಯಾರಣ್ಯಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.