ಮೈಸೂರು: ವಿಕಲತೆಯುಳ್ಳ ವ್ಯಕ್ತಿಗಳ ಹಕ್ಕುಗಳ ಮಸೂದೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇಂದು ನಡೆಯಿತು. ವಿಕಲಚೇತನರು ಇಂದು ಗಾಂಧಿ ಚೌಕದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಜ್ಞಾ ಬೋಧಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಕಲಚೇತನರ ಸಂಘದ ಅಧ್ಯಕ್ಷ ಆರ್. ಮುನಿರಾಜು ಮಾತನಾಡಿ ವಿಕಲ ಚೇತನರ ಹಕ್ಕುಗಳ ಮಸೂದೆ ಜಾರಿಯಾಗಿ ಹಲವಾರು ವರ್ಷಗಳೇ ಕಳೇದಿದ್ದರೂ ಕೂಡ ಮಸೂದೆಯಲ್ಲಿರುವ ಹಕ್ಕುಗಳು ಇನ್ನೂ ಸಮರ್ಪಕವಾಗಿ ಜಾರಿಯಗಿಲ್ಲ, ಅದನ್ನು ಆಳುವ ಸರ್ಕಾರಗಳು ಜಾರಿಗೆ ತರಬೇಕೆಂದು ಆಗ್ರಹಿಸಿದರು. ವಿಕಲತೆಯುಳ್ಳ ಹಕ್ಕುಗಳ ಮಸೂದೆಯಲ್ಲಿ 21 ನ್ಯೂನತೆಗಳ ವ್ಯಾಖ್ಯಾನ, ವಿಕಲಚೇತನರು ಸಮಾನತೆಯಹಕ್ಕುಗಳು, ಘನತೆಯ ಜೀವನ, ಏಕತೆಯ ಗೌರವ ಹಾಗೂ ಇತರರಂತೆ ಸಮಾನರು ಎಂಬ 14 ಅಂಶಗಳನ್ನು ಹೊಂದಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಹಲವಾರು ಮಂದಿ ವಿಕಲಚೇತನರು ಇದ್ದರು