ಮೈಸೂರು: ಮೈಸೂರು ನಗರ ಪ್ರತಿವರ್ಷವೂ ದೇಶದಲ್ಲಿ ಸ್ವಚ್ಚನಗರಿ ಎಂಬ ಪ್ರಶಸ್ತಿಯನ್ನು ಗೆಲ್ಲಲು ನಾಗರಿಕರು ಸ್ವಚ್ಚತೆ ಅರಿವಿನ ಬಗ್ಗೆ ತಿಳಿಯಬೇಕಾದ ಅವ್ಯಶಕತೆ ಇದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದ್ದಾರೆ.
ಇಂದು ನಗರದ ಕೋಟೆ ಅಂಜನೇಯ ದೇವಸ್ಥಾನದ ಮುಂಬಾಗದಲ್ಲಿ ಸ್ವಚ್ಚತ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ದೇಶದಲ್ಲೇ ಹೇರಿಟೇಜ್ ನಗರಿ ಹಾಗೂ ಎರಡು ಬಾರಿ ಸ್ವಚ್ಚ ನಗರಿ ಎಂಬ ಖ್ಯಾತಿಯನ್ನು ಗಳಿಸಿರುವ ಸಾಂಸ್ಕೃತಿಕ ನಗರಿ ಪ್ರತಿವರ್ಷವೂ ಸ್ವಚ್ಚ ನಗರಿ ಎಂಬ ಕೀರ್ತಿಯನ್ನ ಗಳಿಸಲು ಯುವಕರು ಹಾಗೂ ನಾಗರಿಕರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸೂವ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಯಾಪಟ್ಟರು.
ಈ ಸ್ವಚ್ಚತ ನಡಿಗೆ ಕಾರ್ಯಕ್ರಮದಲ್ಲಿ ಅಪೋಲೋ ಹಾಗೂ ಕೆ.ಆರ್ ಆಸ್ಪತ್ರೆಯ ಸುಮಾರು 300ಕ್ಕೂ ಅಧಿಕ ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೋಟೆ ಆಂಜನೇಯದಿಂದ ಹೊರಟು ಆರ್.ಗೇಟ್, ಟೌನ್ ಹಾಲ್, ಅಶೋಕವೃತ್ತದ ಮೂಲಕ ಸಾಗಿ ಬಂತು. ಭಾರತದ ಪ್ರಥಮ ಸ್ವಚ್ಛ ನಗರ ನನ್ನ ಹೆಮ್ಮೆಯ ಮೈಸೂರು, ಪ್ರತಿದಿನ ಹಸಿಕಸ, ಒಣಕಸಗಳನ್ನು ಬೇರ್ಪಡಿಸಿ ಪೌರ ಕಾರ್ಮಿಕರಿಗೆ ನೀಡಿ, ನಮ್ಮ ಪ್ರಥಮ ಸ್ವಚ್ಛ ನಗರದ ಹೆಸರನ್ನು ಉಳಿಸಿ, ಬೆಳೆಸಿ ಎನ್ನುವ ಫಲಕಗಳನ್ನು ಕೈಯ್ಯಲ್ಲಿ ಹಿಡಿದ ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತ ಸಾಗಿದರು.